ಈ ಬಾರಿ ಪೊಲೀಸರಿಗೆ ಸವಾಲಿನ ಕೆಲಸವಾಯ್ತು ಸ್ವಾತಂತ್ರ್ಯೋತ್ಸವ ಸಂಭ್ರಮ, ರಾಜ್ಯಾದ್ಯಂತ ಖಾಕಿ ಹೈಅಲರ್ಟ್

Social Share

ಬೆಂಗಳೂರು,ಆ.13-ಈ ಬಾರಿಯ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಾಧಾರಣವಾಗಿ ಆಚರಿಸಿಕೊಂಡು ಬರುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಈ ಬಾರಿ ಅಮೃತ ಮಹೋತ್ಸವದ ಅಂಗವಾಗಿ ವಿಶೇಷವಾಗಿ ಆಚರಿಸುತ್ತಿರುವುದರಿಂದ ನಗರದೆಲ್ಲೆಡೆ ಬಿಗಿ ಪೂಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಪೂಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಚಾಮರಾಜಪೇಟೆಯ ಆಟದ ಮೈದಾನ ಹಾಗೂ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮಾತ್ರವಲ್ಲದೆ ನಗರದ ವಿವಿದೆಡೆ ಅಮೃತ ಮಹೋತ್ಸವ ಆಚರಿಸುತ್ತಿರುವುದರಿಂದ ಪೂಲೀಸ್ ಬಂದೋಬಸ್ತ್ ಮಾಡುವುದು ನಮಗೆ ಸವಾಲಿನ ಕೆಲಸವಾಗಿದೆ. ಆದರೂ ನಾವು ಅಭೂತಪೂರ್ವ ಬಂದೋಬಸ್ತ್ ಮಾಡಿದ್ದೇವೆ ಎಂದರು.

9 ಡಿಸಿಪಿಗಳು ಹಾಗೂ 1700ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಭದ್ರತಾ ವ್ಯವಸ್ಥೆಗೆ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ 10 ಕೆಎಸ್‍ಆರ್‍ಪಿ ತುಕಡಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.ಒಂಬತ್ತು ಡಿಸಿಪಿಗಳು, 15 ಮಂದಿ ಎಸಿಪಿಗಳು, 44 ಮಂದಿ ಪೂಲೀಸ್ ಇನ್ಸ್‍ಪೆಕ್ಟರ್‍ಗಳು, 96 ಪಿಎಸ್‍ಐಗಳು, 14 ಮಹಿಳಾ ಪಿಎಸ್‍ಐಗಳು, 77 ಮಂದಿ ಎಎಸ್‍ಐಗಳು, 600 ಕಾನ್ಸ್‍ಟೆಬಲ್‍ಗಳು, 77 ಮಹಿಳಾ ಸಿಬ್ಬಂದಿಗಳು ಹಾಗೂ 160ಕ್ಕೂ ಹೆಚ್ಚು ಮಂದಿ ಮಫ್ತಿ ಅಕಾರಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ಇದರ ಜೊತೆಗೆ ಅಗ್ನಿಶಾಮಕ ವಾಹನಗಳು, ಅಂಬುಲೆನ್ಸ್‍ಗಳು, ಕ್ಷಿಪ್ರ ಕಾರ್ಯಚರಣೆ ಪಡೆ, ಡಿ-ಸ್ವಾಟ್ ಮತ್ತು ಆರ್‍ಐವಿಗಳು ಹಾಗೂ ಗರುಡ ಪಡೆಯನ್ನು ಸನ್ನದ್ಧ ಸ್ಥಿತಿಯಲಿಡಲಾಗಿದೆ.

ಸಿಸಿ ಕ್ಯಾಮೆರಾಗಳು:

ಪರೇಡ್ ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಅನುಕೂಲವಾಗುವಂತೆ ಆಯಕಟ್ಟಿನ ಸ್ಥಳಗಳಲ್ಲಿ 100 ಸಿಸಿ ಕ್ಯಾಮೆರಾಗಳನ್ನು ಮತ್ತು 4 ಬ್ಯಾಗೇಜ್ ಸ್ಕ್ಯಾನರ್‍ಗಳನ್ನು ಅಳವಡಿಸಲಾಗಿದೆ. ಹಾಗೂ ತಪಾಸಣೆಗೆ 12 ಡಿಎಫ್‍ಎಂಡಿ ಮತ್ತು 24 ಹೆಚ್‍ಹೆಚ್‍ಎಂಡಿ ಉಪಕರಣಗಳನ್ನು ಅಳವಡಿಸಲಾಗಿದೆ.

ನಿಷೇಧ:

ಪರೇಡ್ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದರಿಂದ ಮೈದಾನದ ಮೇಲೆ ಪೂಲೀಸರು ಹದ್ದಿನಕಣ್ಣಿಡಲಿದ್ದಾರೆ. ಮಾತ್ರವಲ್ಲ ಪರ್ಸ್, ಮೊಬೈಲ್ ಹಾಗೂ ವಿಶೇಷಚೇತನರ ನೆರವಿನ ಉಪಕರಣಗಳನ್ನು ಹೊರತುಪಡಿಸಿದರೆ, ಯಾವುದೇ ರೀತಿಯ ಸ್ಪೋಟಕ ವಸ್ತುಗಳನ್ನು ಪರೇಡ್ ಮೈದಾನಕ್ಕೆ ತರುವಂತಿಲ್ಲ.

ಸಿಗರೇಟ್, ಬೆಂಕಿಪೂಟ್ಟಣ, ಕರಪತ್ರಗಳು, ಹರಿತವಾದ ವಸ್ತುಗಳು, ಬಣ್ಣದ ದ್ರವಣಗಳು, ಇನ್ನಿತರ ಬಾವುಟಗಳು, ತಿಂಡಿತಿನಿಸುಗಳು, ನೀರಿನ ಬಾಟಲಿಗಳು, ಪಟಾಕಿ ಹಾಗೂ ಶಸ್ತ್ರಾಸ್ತ್ರಗಳನ್ನು ನಿಷೇಸಲಾಗಿದೆ. ನಗರದಲ್ಲಿ ಹಲವಾರು ಪ್ರದೇಶಗಳಲ್ಲಿ ಅಮೃತ ಮಹೋತ್ಸವ ಆಚರಿಸುತ್ತಿರುವುದರಿಂದ ಆಯೋಜಕರು ಸಾರ್ವಜನಿಕ ಓಡಾಟಕ್ಕೆ ತೊಂದರೆ ಆಗದಂತೆ ಎಚ್ಚರವಹಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಕಂದಾಯ ಇಲಾಖೆಯಿಂದ ದ್ವಜಾರೋಹಣ ನಡೆಯುವುದರಿಂದ ಅಲ್ಲೂ ಹೆಚ್ಚಿನ ಪೂಲೀಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.

Articles You Might Like

Share This Article