ಬೆಂಗಳೂರು,ಫೆ.21- ಕಳವು ಮಾಲು ವಶಪಡಿಸಿ ಕೊಳ್ಳುವ ಸಂದರ್ಭದಲ್ಲಿ ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಆಕ್ರೋಶ ವ್ಯಕ್ತ ಪಡಿಸಿದರು. ಮುಂದಿನ ದಿನಗಳಲ್ಲಿ ಸಮಸ್ಯೆ ಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟ ಪಡಿಸಿದರು.
ಬೋಜನ ವಿರಾಮದ ಬಳಿಕ ಗಮನ ಸೆಳೆಯುವ ಸೂಚನೆಯಲ್ಲಿ ವಿಷಯ ಪ್ರಸ್ತಾಪಿಸಿದ ಶರವಣ, ತಾವು ಚಿನ್ನಾಭರಣ ಅಂಗಡಿಗಳ ಮಾಲೀಕರ ರಾಜ್ಯಾಧ್ಯಕ್ಷರಾಗಿದ್ದು, ಪ್ರತಿ ದಿನ ಹತ್ತಾರು ದೂರುಗಳು ಕೇಳಿ ಬರುತ್ತಿವೆ ಎಂದು ಆರೋಪಿಸಿದರು.
ಕಳವು ಮಾಲುಗಳನ್ನು ವಶ ಪಡಿಸಿಕೊಳ್ಳುವ ನೆಪದಲ್ಲಿ ಪೊಲೀಸರು ಚಿನ್ನಾಭರಣಗಳ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಪ್ರಮಾಣಿಕ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ, ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಚಿನ್ನಾಭರಣ ಮಾಲೀಕರನ್ನು ಶೋಷಣೆ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ನಡೆಯುತ್ತಿ ರುವ ಈ ಪ್ರವೃತ್ತಿಯನ್ನು ತಡೆಯಲು ಕಾನೂನು ತರಬೇಕಿದೆ ಎಂದು ವಿವೇಕ ನಗರ ಪೊಲೀಸ್‍ಠಾಣೆಯ ಪ್ರಕರಣ ವೊಂದನ್ನು ಉಲ್ಲೇಖಿಸಿ ವಿಷಯ ಪ್ರಸ್ತಾಪಿಸಿದರು.
ಏ.1ರಿಂದಲೇ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
ಇದೇ ಸಂದರ್ಭದಲ್ಲಿ ಸಭಾಪತಿ ಯವರು ತಮ್ಮ ಗಮನಕ್ಕೆ ಬಂದ ಪ್ರಕರಣ ವೊಂದನ್ನು ಸದನದಲ್ಲಿ ಹಾಜರಿದ್ದ ಗೃಹ ಸಚಿವರ ಗಮನಕ್ಕೆ ತಂದರು. ಕೆ.ಎ.ತಿಪ್ಪೆಸ್ವಾಮಿ ಅವರು ಶರವಣ ಅವರನ್ನು ಬೆಂಬಲಿಸಿ ಮಾತನಾಡಿದರು.
ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಅರಗಜ್ಞಾನೇಂದ್ರ ಸದಸ್ಯರು ವಿವೇಕನಗರ ಪೊಲೀಸ್‍ಠಾಣೆಯ ಪ್ರಕರಣದಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ. ಸದರಿ ಚಿನ್ನಾಭರಣ ಅಂಗಡಿಯ ಮಾಲೀಕರು ಕಳ್ಳನಿಂದ ಕಳವು ಮಾಲುಗಳನ್ನು ಪದೇಪದೇ ಖರೀದಿಸಿರುವುದು ಕಂಡು ಬಂದಿದೆ. ಪ್ರಕರಣವೊಂದರ ವಿಚಾರಣೆಗಾಗಿ ಎರಡು ಬಾರಿ ನೋಟಿಸ್ ನೀಡಲಾಗಿತ್ತು.
ಆದರೆ ಅಂಗಡಿ ಮಾಲೀಕರು ನೋಟಿಸ್‍ಗಳನ್ನು ನಿರ್ಲಕ್ಷ್ಯಿಸಿದರು. ಹಾಗಾಗಿ ಆಭರಣ ದಂಗಡಿಯ ಮಾಲೀಕನನ್ನು ಬಂಸಿ ಕಾನೂನು ಕ್ರಮ ಜರುಗಿಸಲಾಗಿದೆ. ಈ ವೇಳೆ ಯಾವುದೇ ಕಾನೂನು ಬಾಹಿರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕನ್ನಡದ ಮಕ್ಕಳಿಗೆ ಅನ್ಯಾಯವಾದರೆ ರಾಷ್ಟ್ರೀಯ ಕಾನೂನು ಶಾಲೆ ವಿರುದ್ಧ ಕ್ರಮ
ಸದಸ್ಯರು ಪ್ರಸ್ತಾಪಿಸಿರುವಂತೆ ನಿರ್ದಿಷ್ಟ ಪ್ರಕರಣದಲ್ಲಿ ಲೋಪವಾಗದಿ ದ್ದರೂ ಕೆಲವು ಕಡೆ ಲೋಪಗಳಾಗಿವೆ. ತಪ್ಪುಗಳಾಗಿದ್ದಾಗ ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು. ಮಾಲು ಜಪ್ತಿ ಸಂದರ್ಭದಲ್ಲಿ ಪೆÇಲೀಸರು ನ್ಯಾಯಾಲಯ ಹಾಗೂ ಸರ್ಕಾರದ ಪ್ರಮಾಣಿತ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮತ್ತೊಮ್ಮೆ ಸುತ್ತೋಲೆ ರವಾನಿಸಲಾಗುವುದು.
ಅಮಾಯಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಕಳ್ಳತನಗಳಿಂದ ವಸ್ತುಗಳನ್ನು ಕಳೆದುಕೊಂಡವರ ಬಗ್ಗೆಯೂ ನಾವು ಯೋಚಿಸಬೇಕಿದೆ. ಕಳ್ಳತನಗಳನ್ನು ತಡೆ ಗಟ್ಟಬೇಕಿದೆ ಎಂದರು.
police, Harassment, jewelery, shop, owners, ta sharavana,