ಪೊಲೀಸ್ ಸಿಬ್ಬಂದಿ ಬೌದ್ಧಿಕ, ದೈಹಿಕ ಕ್ಷಮತೆ ಹೆಚ್ಚಿಸಲು ಕ್ರಮ : ಆರಗ ಜ್ಞಾನೇಂದ್ರ

Social Share

ಬೆಂಗಳೂರು, ಸೆ.19- ಪೊಲೀಸ್ ಸಿಬ್ಬಂದಿಗೆ ಬೌದ್ಧಿಕ – ದೈಹಿಕ ಕ್ಷಮತೆ ಯೊಂದಿಗೆ ಕೌಶಲ್ಯಗಳನ್ನು ವೃದ್ದಿಸಿಕೊಳ್ಳಲು ಇಲಾಖೆ ಅಗತ್ಯ ಕ್ರಮ ವಹಿಸಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ನಗರದ ಥಣಿಸಂದ್ರ ಪೊಲೀಸ್ ತರಬೇತಿ ಶಾಲೆ ಆವರಣದಲ್ಲಿ ನಿರ್ಮಿಸಲಾದ ವಿವಿದೋದ್ದೇಶ ಸಂಕೀರ್ಣ ಉದ್ಘಾಟನೆ ನೆರವೇರಿಸಿ ಸಚಿವರು ಮಾತನಾಡಿದರು.

ಆಧುನಿಕ ಪ್ರಪಂಚದಲ್ಲಿ ಮನುಷ್ಯ ಎಷ್ಟೇ ಎತ್ತರಕ್ಕೆ ಏರಿದರೂ, ಮೃಗೀಯ ಸ್ವಭಾವಗಳೂ ಹೆಚ್ಚಾಗಿವೆ. ದೈಹಿಕ ಕ್ಷಮತೆ ಗಳಿಸಿ ಕೊಳ್ಳುವ, ಜತೆಗೆ ಸಾಕ್ಷ್ಯ ಸಂಗ್ರಹ ಹಾಗೂ ನ್ಯಾಯಾಲಯದ ಮುಂದೆ ಪ್ರತಿಪಾದಿಸಲು ಕೌಶಲ್ಯ ಹೆಚ್ಚಿಸಿಕೊಳ್ಳಲು ಶ್ರದ್ಧೆ ವಹಿಸಬೇಕೆಂದು ಕಿವಿಮಾತು ಹೇಳಿದರು.

ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ವಿಶೇಷ ಪ್ರಯತ್ನ ಮಾಡಬೇಕು ಇದಕ್ಕಾಗಿ ಅವರಿಗೆ ವಿಶೇಷ ಕೌಶಲ್ಯವೃದ್ದಿಗೆ ಇಲಾಖೆ ಸೌಲಭ್ಯ ಕಲ್ಪಿಸಲಿದೆ ಎಂದರು.

ಜನರ ಅಮೂಲ್ಯವಾದ ಪ್ರಾಣ, ಆಸ್ತಿ ಪಾಸ್ತಿಗಳನ್ನು ಸಂರಕ್ಷಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವ ಪೊಲೀಸ್ ಸಿಬ್ಬಂದಿ ಹೊಸ ಹೊಸ ಸವಾಲುಗಳನ್ನು ಎದುರಿಸಲು ಸರಕಾರ ಎಲ್ಲಾ ನೆರವು ನೀಡುತ್ತಿದೆ . ಒಬ್ಬ ಯಶಸ್ವಿ ಸಿಬ್ಬಂದಿಯನ್ನು ತಯಾರು ಮಾಡಲು ಹಾಗೂ ಯಾವುದೇ ಸವಾಲುಗಳನ್ನು ಎದುರಿಸಲು ಸಜ್ಜಾಗಿಸಲು ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೇಂದ್ರ ವಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪಿಸಲು ಮಾಡಿದ ಮನವಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ವಿಶ್ವ ವಿದ್ಯಾಲಯ ಸದ್ಯದಲ್ಲಿಯೇ, ಕಾರ್ಯಾರಂಭ ಮಾಡಲಿದೆ ಎಂದು ಪ್ರಕಟಿಸಿದರು.

ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಶಾಸಕ ಕೃಷ್ಣ ಬೈರೇಗೌಡ, ತರಬೇತಿ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಡಾ.ರವೀಂದ್ರನಾಥ್, ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಕ್ರವರ್ತಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Articles You Might Like

Share This Article