ನೆಲಮಂಗಲ,ಜು.13- ಉಪವಿಭಾಗದ ಪೊಲೀಸರು ಬೆಳ್ಳಂಬೆಳಿಗ್ಗೆ ನೆಲಮಂಗಲ ಪಟ್ಟಣ, ಗ್ರಾಮಾಂತರ, ಮಾದನಾಯಕನಹಳ್ಳಿ, ತ್ಯಾಮಗೋಂಡ್ಲು, ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಮಾರು 80ಕ್ಕೂ ಹೆಚ್ಚು ರೌಡಿಶೀಟರ್‍ಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.
ಬಿಎಂಎಲ್ ಕೃಷ್ಣಪ್ಪ ಹತ್ಯೆ ಪ್ರಕರಣದ ಆರೋಪಿ ಬಂಡೆ ಮಂಜ, ಗಣೇಶನ ಗುಡಿ ರಂಗ, ರವಿಕುಮಾರ್, ಮತ್ತಿತರ ಮನೆ ಮೇಲೆ ದಾಳಿ ನಡೆಸಿ ಮನೆಯನ್ನು ಸಂಪೂರ್ಣ ತಪಾಸಣೆ ನಡೆಸಿದರು.
ಇತ್ತಿಚೇಗೆ ರೌಡಿ ಶೀಟರ್‍ಗಳು ತೆರೆಮರೆಯಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ, ರೌಡಿಶೀಟರ್ ಗಳ ಪ್ರಮಖ ಹಣದ ಮೂಲ ಮೀಟರ್ ಬಡ್ಡಿ, ಜೂಜು ಅಡ್ಡೆಗಳ ನಿಗಾವಣೆ, ಸಿವಿಲ್ ವ್ಯಾಜ್ಯಗಳ ಬಗೆಹರಿಸುವಿಕೆಯಿಂದ ಅಪಾರ ಪ್ರಮಾಣದ ಹಣ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಸಹ ರೌಡಿ ಶೀಟರ್‍ಗಳ ಅಕ್ಟೀವ್ ಅಗಿರುವ ಹಿನ್ನೆಲೆ ಈ ದಾಳಿ ನಡೆಸಲಾಗಿದೆ. ದಾಳಿ ವೇಳೆ ರೌಡಿ ಶೀಟರ್‍ಗಳ ವ್ಯವಹಾರ, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ ಎನ್ನಲಾಗಿದೆ.
ದಾಳಿಯ ನೇತೃತ್ವವನ್ನು ಡಿವೈಎಸ್ಪಿ ಗೌತಮ, ಇನ್ಸಪೆಕ್ಟರ್‍ಗಳಾದ ಕುಮಾರ್, ರಾಜೀವ್, ಮಂಜುನಾಥ್, ರವಿ, ಸಬ್ ಇನ್ಸಪೆಕ್ಟರ್‍ಗಳಾದ ಚಿಕ್ಕನರಸಿಂಹಯ್ಯ, ಸುರೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.