ಶ್ರೀರಂಗಪಟ್ಟಣ,ಜು.4- ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಹಾರಿದ್ದ ಬೆಂಗಳೂರು ಮೂಲದ ಯುವತಿಯನ್ನು ಪೊಲೀಸರು ಹಾಗು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ತಾಲೂಕಿನ ಹಂಗರಹಳ್ಳಿ ಬಳಿ ನದಿ ಮಧ್ಯದ ಮರಕ್ಕೆ ಸಿಕ್ಕಿ ರಾತ್ರಿ ಕಳೆದಿದ್ದ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ನಿವಾಸಿ ಪವಿತ್ರಾ (19) ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆತಹತ್ಯೆ ಮಾಡಿಕೊಳ್ಳಲು ನಿನ್ನೆ ಸಂಜೆ ನದಿಗೆ ಹಾರಿದಾಗ ಸುಮಾರು ದೂರ ಕೊಚ್ಚಿಕೊಂಡು ಹೋಗಿದ್ದು ಮರದ ರಂಭೆಗೆ ಸಿಕ್ಕಿಹಾಕಿಕೊಂಡಿದ್ದಾರೆ.
ರಾತ್ರಿ ಪೂರ್ತಿ ಅಲ್ಲೇ ಇದ್ದು ಬೆಳಿಗ್ಗೆ ರಕ್ಷಿಸಿ ಎಂದು ಕೂಗಿಕೊಂಡಾಗ ಸಮೀಪದಲೇ ಇದ್ದ ರೈತರು ಧ್ವನಿ ಕೇಳಿ ನದಿ ಬಳಿ ಹೋದಾಗ ಯುವತಿ ಕಾಣಿಸಿಕೊಂಡಿದ್ದು ,ಆತಂಕದಲ್ಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಕೆರೆ ಠಾಣೆ ಪೊಲೀಸರು ಹಾಗು ಅಗ್ನಿಶಾಮಕ ಸಿಬ್ಬಂಧಿ ಆಕೆಯನ್ನು ರಕ್ಷಿಸಿ ದಡಕ್ಕೆ ದಂದು ಉಪಚರಿಸಿ ಮಾಹಿತಿ ಪಡೆದಿದ್ದಾರೆ .ನಂತರ ಪೋಷಕರಿಗೂ ತಿಳಿಸಿದ್ದು ಅವರು ಆಗಮಿಸಿದ ನಂತರ ಯುವತಿಯನ್ನು ಅವರಿಗೆ ಒಪ್ಪಿಸುವುದಾಗಿ ಎಸ್‌ಐ ವಿನೋದ್ ಕುಮಾರ್ ತಿಳಿಸಿದ್ದಾರೆ.ನೀರಿನ ಹರಿವು ಸ್ವಲ್ಪ ಹೆಚ್ಚಾಗಿದ್ದರೂ ಯುವತಿ ಕೊಚ್ಚಿಹೋಗುವ ಅಪಾಯವಿತ್ತು ಎಂದು ಅವರು ತಿಳಿಸಿದ್ದಾರೆ.
- ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
- ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ
- ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಹೊಣೆ : ಸಿಎಂ ಸ್ಪಷ್ಟನೆ
- ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್ ಸೂಚನೆ
- ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರ ಮದುವೆ : ಹಿಮಾಚಲದಲ್ಲಿ ಮರುಜೀವ ಪಡೆದ ಬಹುಪತಿತ್ವ