ಚಾಮರಾಜಪೇಟೆ ಮೈದಾನಕ್ಕೆ ಪೊಲೀಸ್ ಸರ್ಪಗಾವಲು

Social Share

ಬೆಂಗಳೂರು,ಆ.14: ಪ್ರಥಮ ಬಾರಿಗೆ ಧ್ವಜಾರೋಹಣ ನೆರವೇರಿಸುತ್ತಿರುವ ಚಾಮರಾಜಪೇಟೆ ಆಟದ ಮೈದಾನಕ್ಕೆ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.

ಅಧಿಕಾರಿಗಳು ಸೇರಿದಂತೆ ಒಟ್ಟು 800 ಮಂದಿಯನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದ್ದು, ಎರಡು ಆರ್‍ಎಎಫ್ ತುಕಡಿಗಳು, 100 ಮಂದಿ ಕಮಾಂಡೋಗಳು, 400 ಮಂದಿ ಸಿವಿಲ್ ಪೊಲೀಸರು, 8 ತುಕಡಿ ಕೆಎಸ್‍ಆರ್‍ಪಿ, ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಪಶ್ಚಿಮ ವಿಭಾಗದ ಡಿಸಿಪಿ ಲಕ್ಷಣ್ ನಿಂಬರಗಿ ಅವರು ಬಂದೋಬಸ್ತ್ ನೇತೃತ್ವ ವಹಿಸಿದ್ದು, ನಾಳೆ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಲಿದೆ.400ಕ್ಕೂ ಹೆಚ್ಚು ಪೊಲೀಸರು ಆಟದ ಮೈದಾನದ ಸುತ್ತಮುತ್ತಲಿನ ಪ್ರದೇಶಗಳಾದ ಟಿಪ್ಪುನಗರ, ವಾಲ್ಮೀಕಿ ನಗರ, ಚಾಮರಾಜಪೇಟೆ, ಆಜಾದ್‍ನಗರ ಸುತ್ತಮುತ್ತಲೂ ಕಳೆದ ಶುಕ್ರವಾರ ಪಥಸಂಚಲನ ನಡೆಸಿದರು.

ಕಂದಾಯ ಸಚಿವ ಆರ್. ಅಶೋಕ ಅವರು ನಿನ್ನೆ ಆಟದ ಮೈದಾನಕ್ಕೆ ಭೇಟಿ ನೀಡಿ ಅಕಾರಿಗಳ ಜೊತೆ ಪರಿಶೀಲನೆ ನಡೆಸಿದರು.ಇಂದು ಮಧ್ಯಾಹ್ನ ಆರ್‍ಎಎಫ್ ತುಕಡಿಗಳಿಂದ ಪಥಸಂಚಲನ ನಡೆಯಲಿದೆ.

Articles You Might Like

Share This Article