ಬೆಂಗಳೂರು, ಜೂ.26- ತುರ್ತು ಪರಿಸ್ಥಿತಿಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಟೀಕೆ ಮಾಡಿರುವುದರ ವಿರುದ್ಧ ದೂರುದಾಖಲಾಗಿರುವ ಸಂಬಂಧಪಟ್ಟಂತೆ ಪೊಲೀಸರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಹೇರಿ ಬಹಳ ವರ್ಷಗಳಾಗಿವೆ. ಅದೆಲ್ಲಾ ಮುಗಿದು ಹೋಗಿದೆ. ಈಗ ಅದನ್ನೇ ಮುಂದಿಟ್ಟುಕೊಂಡು ಟೀಕೆ ಮಾಡುವುದು ಅನಗತ್ಯ. ಯಾವ ರೀತಿಯ ಟೀಕೆಗಳಾಗಿವೆ ಎಂಬುದರ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಪರಿಶೀಲನೆ ನಡೆಸಿ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
ಸ್ವಯಂಪ್ರೇರಿತ ಪ್ರಕರಣ ಅಥವಾ ದೂರು ಆಧರಿಸಿ ಕೇಸು ದಾಖಲಿಸಲಾಗಿದೆಯೇ ಎಂಬುದನ್ನು ನೋಡುತ್ತೇವೆ. ಒಂದು ವೇಳೆ ದೂರಿನಲ್ಲಿ ಸತ್ಯಾಂಶವಿದ್ದರೆ ತನಿಖೆಯನ್ನು ಮುಂದುವರೆಸಲಾಗುತ್ತದೆ. ಇಲ್ಲವಾದರೆ ಈ ವರದಿ ಸಲ್ಲಿಸಲಾಗುವುದು ಎಂದರು. ದೇಶಕ್ಕೆ ಸುದೀರ್ಘವಾದ ಹಾಗೂ ಮೌಲ್ಯಯುತ ಸೇವೆ ಸಲ್ಲಿಸಿದ ನಾಯಕರ ಬಗ್ಗೆ ಮಾತನಾಡಿದಾಗ ಸಹಜವಾಗಿಯೇ ಪ್ರತಿಕ್ರಿಯೆಗಳು ಬರುತ್ತವೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂಬುದು ಸರಿಯಲ್ಲ ಎಂದು ಹೇಳಿದರು.
ಆರ್‌ಎಸ್‌ಎಸ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಮಂಡಲದಲ್ಲಿ ಮಾಡಿದ ಟೀಕೆಯ ಬಗ್ಗೆ ಪ್ರಕರಣ ದಾಖಲಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅನುದಾನ ಬೇಕಾದರೆ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಬಲ ನೀಡಬೇಕು. ಜೈ ಎನ್ನಬೇಕು ಎಂದು ಎಚ್.ಸಿ.ಬಾಲಕೃಷ್ಣ ಅವರು ನೀಡಿರುವ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಸಚಿವರು ಸರಿಯಾಗಿ ಸಿಗುತ್ತಿಲ್ಲ ಎಂಬ ಟೀಕೆ ಶಾಸಕರ ವೈಯಕ್ತಿಕ ಅಭಿಪ್ರಾಯ. ಬೇರೆ ಸಚಿವರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನಂತೂ ಎಲ್ಲರಿಗೂ ಮನೆ ಹಾಗೂ ಕಚೇರಿಯಲ್ಲಿ ಲಭ್ಯ ಇರುತ್ತೇನೆ, ಅಲಭ್ಯ ಎಂಬ ದೂರು ನನಗೆ ಅನ್ವಯಿಸುವುದಿಲ್ಲ ಎಂದು ಹೇಳಿದರು. ಎತ್ತಿನಹೊಳೆ ಯೋಜನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ತಮಗೆ ಮಾದಕ ವಸ್ತುಗಳ ಜಾಗೃತಿ ಕುರಿತ ಕಾರ್ಯಕ್ರಮ ಇರುವುದರಿಂದ ನಾನು ಹೋಗಲಾಗುತ್ತಿಲ್ಲ ಎಂದರು.
- ಪ್ರಿಯತಮನೊಂದಿಗೆ ಸೇರಿ ಪತಿ ಕೊಂದಿದ್ದ ಪತ್ನಿ : ಸಾಕ್ಷಿ ಹೇಳಿದ 3 ವರ್ಷದ ಮಗು
- ರೈಲ್ವೆ ಪ್ಲಾಟ್ಫಾರ್ಮ್ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಯೋಧನಿಗೆ ಸೇನೆ ಶ್ಲಾಘನೆ
- ಹಾವೇರಿ : ಹೃದಯಾಘಾತ ಲಾರಿ ಚಾಲಕ ಸಾವು
- ನಾಳೆ ಭಾರತ್ ಬಂದ್ : ಬ್ಯಾಂಕಿಂಗ್ ಸೇರಿದಂತೆ ದೇಶದಾದ್ಯಂತ ಅನೇಕ ಸೇವೆಗಳು ವ್ಯತ್ಯಯ
- ಡಿಕೆಶಿ ಸಿಎಂ ಆದರೆ ಸಾಕು, ನನಗೆ ಸಚಿವ ಸ್ಥಾನ ಬೇಡ : ಸಿ.ಪಿ.ಯೋಗೇಶ್ವರ್