ಥಾಣೆ,ಜ.15- ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಗೋಡೌನ್ನಿಂದ 99.44 ಲಕ್ಷ ರೂಪಾಯಿ ಮೌಲ್ಯದ ಉಡುಪುಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಅಲ್ಲಿ ದೊರೆತ ಖಾಲಿ ಮಿನರಲ್ ವಾಟರ್ ಬಾಟಲಿಗಳ ಸಹಾಯದಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಜನವರಿ 8 ರಂದು ಭಿವಂಡಿ ಪಟ್ಟಣದಲ್ಲಿರುವ ಗೋಡೌನ್ನಲ್ಲಿ ಕಳ್ಳತನ ನಡೆದಿತ್ತು. ಪೊಲೀಸ್ ತನಿಖಾ ತಂಡವು ಪ್ರದೇಶದ ಸಿಸಿಟಿವಿ ದೃಶ್ಯಗಳು ಮತ್ತು ಗುಪ್ತಚರ ಇನ್ಪುಟ್ಗಳು ಸೇರಿದಂತೆ ವಿವಿಧ ಮೂಲಗಳನ್ನು ಪರಿಶೀಲಿಸಿತ್ತು. ಅಪರಾಧ ನಡೆದ ಸ್ಥಳದಲ್ಲಿ ಮಿನರಲ್ ವಾಟರ್ನ ಖಾಲಿ ಬಾಟಲಿಗಳು ಮತ್ತು ಚಿಪ್ಸ್ ಪ್ಯಾಕೆಟ್ಗಳು ಪತ್ತೆಯಾಗಿವೆ.
ಗವಿಗಂಗಾಧರೇಶ್ವರ ದೇವಾಲಯದಲ್ಲಿ ಇಂದು ಸೂರ್ಯಕಿರಣಗಳ ಚಮತ್ಕಾರ
ಗೋಡೌನ್ನಲ್ಲಿ ಪತ್ತೆಯಾದ ನೀರಿನ ಬಾಟಲಿಗಳ ಮೇಲಿನ ಲೇಬಲ್ಗಳು ಸುತ್ತಮುತ್ತಲಿನ ಹೋಟೆಲ್ನಲ್ಲಿರುವ ನೀರಿನ ಬಾಟಲಿಗಳ ಲೇಬಲ್ಗಳಿಗೆ ಹೊಂದಿಕೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಹೋಟೆಲ್ ಒಂದರಿಂದ ನೀರಿನ ಬಾಟಲ್ಗಳನ್ನು ಖರೀದಿಸಿದ ವ್ಯಕ್ತಿಯನ್ನು ಸಿಸಿಟಿವಿಯಲ್ಲಿ ಗುರುತಿಸಲಾಯಿತಿ ಎಂದು ಅಧಿಕಾರಿ ತಿಳಿಸಿದ್ದಾರೆ.
ಅದರ ಆಧಾರದ ಮೇಲೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ವ್ಯಕ್ತಿಯನ್ನು ಬಂಸಲಾಗಿದೆ. ಆರೋಪಿಯ ವಶದಲ್ಲಿದ್ದ ಕದ್ದ ಬಟ್ಟೆಗಳ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
#police, #tracedthief, #emptywaterbottle, #stoleclothe,