ಮಹಿಳೆಯನ್ನು ವಂಚಿಸಿದ್ದ ಮುಖ್ಯ ಪೊಲೀಸ್ ಪೇದೆ ಅರೆಸ್ಟ್

Social Share

ಮೈಸೂರು,ಫೆ.26- ವಿವಾಹವಾಗುವುದಾಗಿ ನಂಬಿಸಿ ವಿವಾಹಿತ ಮಹಿಳೆಯಿಂದ ಪತಿಗೆ ವಿಚ್ಛೇದನ ಕೊಡಿಸಿದ್ದಲ್ಲದೇ ಮದುವೆಯಾಗದೇ ವಂಚಿಸಿ ಆಕೆ ಮೇಲೆ ಹಲ್ಲೆ ನಡೆಸಿದ ಮುಖ್ಯಪೇದೆಯನ್ನು ಹುಲ್ಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹುಲ್ಲಹಳ್ಳಿ ಠಾಣೆಯ ಮುಖ್ಯಪೇದೆ ಸಿ.ಕೃಷ್ಣ ನನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಮದುವೆ ಆಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಪೇದೆಯ ವಿರುದ್ಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ನ್ಯಾಯ ಕೇಳಲು ಬಂದ ಮಹಿಳೆಯನ್ನ ಪೇದೆ ಹಾಗೂ ಆತನ ಮಗ ಹಿಗ್ಗಾ ಮುಗ್ಗಾ ಥಳಿಸಿ ಜಮೀನಿನಲ್ಲಿ ತಳ್ಳಿ ಪರಾರಿಯಾಗಿದ್ದ. ಅಪ್ಪ ಮಗನ ದೌರ್ಜನ್ಯಕ್ಕೆ ಸಿಲುಕಿ ಅನಾಥಳಂತೆ ಜಮೀನಿನಲ್ಲಿ ಬಿದ್ದಿದ್ದ ಮಹಿಳೆಯನ್ನ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು.
ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಕೃಷ್ಣ ಹಾಗೂ ಈತನ ಮಗ ಕಿರಣ್ ವಿರುದ್ದ ಎಫ್ ಐ ಆರ್ ದಾಖಲಾಗಿತ್ತು. ತಲಕಾಡು ಮೂಲದ ಗೌರಮ್ಮ ಎಂಬ ಮಹಿಳೆಯನ್ನು ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಮತ್ತೊಂದು ಮದುವೆ ಆದ ಪೇದೆ ಕೃಷ್ಣನ ವಿರುದ್ಧ ಪ್ರಕರಣ ದಾಖಲಾಗಿತ್ತು.
ನಂಜಯ್ಯ ಎಂಬವರನ್ನು ಮದುವೆ ಆಗಿದ್ದ ಗೌರಮ್ಮ ಕೌಟುಂಬಿಕ ಸಮಸ್ಯೆ ಎದುರಾದಾಗ ಬನ್ನೂರು ಪೊಲೀಸರ ಮೊರೆ ಹೋಗಿದ್ದರು. ಆಗ ಬನ್ನೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವವಹಿಸುತ್ತಿದ್ದ ಕೃಷ್ಣ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡಿದ್ದ. ನಂತರ ಪತಿಗೆ ವಿಚ್ಛೇದನ ಕೊಡು ನಾನು ನಿನ್ನನ್ನು ಮದುವೆ ಆಗ್ತೀನಿ ಎಂದು ನಂಬಿಸಿದ್ದ. ಕೃಷ್ಣನ ಮಾತನ್ನು ನಂಬಿದ ಗೌರಮ್ಮ ನಂಜಯ್ಯನಿಂದ ವಿಚ್ಛೇದನ ಪಡೆದು ಬೇರ್ಪಟ್ಟಿದ್ದಳು.
ನಂತರ ಕೃಷ್ಣ ಮೈಸೂರಿನ ಗೋಕುಲಂ ನಲ್ಲಿ ಮನೆ ಬಾಡಿಗೆ ಪಡೆದು ಗೌರಮ್ಮಳೊಂದಿಗೆ ಸಂಸಾರ ನಡೆಸಿದ್ದ. ಮದುವೆ ಆಗುವುದಾಗಿ ನಂಬಿಸುತ್ತಲೇ ದೈಹಿಕ ಸಂಪರ್ಕ ಬೆಳೆಸಿದ್ದ. ಈ ಮಧ್ಯೆ ಸೊಸೈಟಿಯಿಂದ ಗೌರಮ್ಮಳ ಹೆಸರಲ್ಲಿ 5 ಲಕ್ಷ ಸಾಲ ಪಡೆದಿದ್ದ. ಅಲ್ಲದೆ ಪ್ರತ್ಯೇಕವಾಗಿ 3 ಲಕ್ಷ ಸಾಲ ಪಡೆದಿದ್ದ. ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಗೌರಮ್ಮ ಗರ್ಭವತಿಯಾಗಿದ್ದ. ತನ್ನ ಗುಟ್ಟು ಬಯಲಾಗುತ್ತದೆಂದು ಹೆದರಿ ಗರ್ಭಪಾತ ಮಾಡಿಸಿದ್ದ.
ಹೀಗೆ ನಾಲ್ಕಾರು ವರ್ಷಗಳು ಉರುಳಿ ಹೋದರೂ ಗೌರಮ್ಮಳನ್ನ ಮದುವೆ ಆಗದೆ ಸತಾಯಿಸಿದ್ದ. ಇದ್ದಕ್ಕಿದ್ದಂತೆ ಕೃಷ್ಣನ ನಡವಳಿಕೆಯಲ್ಲಿ ಬದಲಾವಣೆಯಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಕೃಷ್ಣ ಮತ್ತೊಂದು ಮದುವೆ ಆಗಿರುವುದು ಬೆಳಕಿಗೆ ಬಂದಿತ್ತು. ಈ ವಿಚಾರವಾಗಿ ಗೌರಮ್ಮ ವಿರೋಸಿದಾಗ ದೈಹಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದ. ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಗೌರಮ್ಮಳಿಗೆ ಸಾಲ ಕೊಟ್ಟ ಹಣ ಹಿಂದುರಿಗಿಸಿದ್ದ. ಆದರೆ ಮದುವೆ ವಿಚಾರದಲ್ಲಿ ಕೃಷ್ಣ ಮತ್ತೆ ಕೈಕೊಟ್ಟಿದ್ದ.
ನಂಜನಗೂಡಿನ ಬಳ್ಳೂರಹುಂಡಿ ಗ್ರಾಮದ ಜಮೀನಿನಲ್ಲಿ ಕೃಷ್ಣ ಇರುವ ವಿಚಾರ ತಿಳಿದು ನ್ಯಾಯ ಕೇಳಲು ಹೋದ ಗೌರಮ್ಮಳಿಗೆ ಅಪ್ಪ ಹಾಗೂ ಮಗ ಇಬ್ಬರೂ ಹಿಗ್ಗಾ ಮುಗ್ಗಾ ಥಳಿಸಿದ್ದರು. ಅಪ್ಪನಿಗೆ ವಯಸ್ಸಾಯ್ತು ನಾನು ಇಟ್ಟುಕೊಳ್ತೀನಿ ಅಂತ ಮಗ ಕಿರಣ್ ಅವಾಚ್ಯ ಶಬ್ದಗಳನ್ನು ಬಳಸಿ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದ. ಗೌರಮ್ಮನ ಕಿರುಚಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಬರುವಷ್ಟರಲ್ಲಿ ಕೃಷ್ಣ ಹಾಗೂ ಕಿರಣ್ ಎಸ್ಕೇಪ್ ಆಗಿದ್ದರು.
ತೀವ್ರ ಹಲ್ಲೆಗೆ ಒಳಗಾದ ಗೌರಮ್ಮ ಳನ್ನು ಗ್ರಾಮಸ್ಥರು ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಪೇದೆ ಕೃಷ್ಣ ಹಾಗೂ ಪುತ್ರ ಕಿರಣ್ ಮೇಲೆ ಕೊಲೆ ಬೆದರಿಕೆ,ವಂಚನೆ ಪ್ರಕರಣ ದಾಖಲಾಗಿತ್ತು.
ಮಹಿಳೆ ನೀಡಿದ ದೂರನ್ನು ದಾಖಲಿಸಿಕೊಂಡ ಹುಲ್ಲಹಳ್ಳಿ ಠಾಣೆ ಪೊಲೀಸರು ಮುಖ್ಯಪೇದೆ ಸಿ.ಕೃಷ್ಣನನ್ನು ಬಂಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾೀಧಿಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Articles You Might Like

Share This Article