ದಾಂತೇವಾಡ,ಫೆ.21-ನಕ್ಸಲೀಯರು ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ. ನಕ್ಸಲ್‍ಪೀಡಿತ ಪ್ರದೇಶವಾಗಿರುವ ಬಿಜಾಪುರ ಜಿಲ್ಲೆಯಲ್ಲಿ ಅಪರಿಚಿತ ನಕ್ಸಲರು ಹೆಡ್ ಕಾನ್ಸ್ಟೆಬಲ್ ಪಿಂಡಿರಾಮ್ ವೆಟ್ಟಿಯ ಕತ್ತು ಸೀಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಭೈರಾಮ್‍ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇನಾರ್ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಿಂಡಿರಾಮ್ ತನ್ನ ಸಹೋದರನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಡೇನಾರ್ ಗ್ರಾಮಕ್ಕೆ ಹೋಗಿದ್ದನು . ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಆತ ಹತ್ತಿರದ ಹಳ್ಳಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದನು.
ಸಂಕಷ್ಟ ಸವಾಲುಗಳ ನಡುವೆ ಆರ್ಥಿಕ ಸದೃಢತೆ : ಬೊಮ್ಮಾಯಿ
ಅಲ್ಲಿಗೆ ಬಂದ ನಕ್ಸಲೀಯರ ಗುಂಪು ಮನೆಗೆ ನುಗ್ಗಿ ವಿಶ್ರಾಂತಿ ಪಡೆಯುತ್ತಿದ್ದ ಪಿಂಡಿರಾಮನ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಗೆ 3ಸಾವಿರ ಕೋಟಿ ಖರ್ಚು : ಸುಧಾಕರ್
ಜಿಲ್ಲಾಯ ಗೀಡಂ ಪೊಲೀಸ್ ಠಾಣೆ ವ್ಯಾಪ್ತಿಯ ಗುಮಲ್ನಾರ್ ಗ್ರಾಮದ ಹೆಡ್ ಕಾನ್ಸ್ಟೆಬಲ್ ಪಿಂಡಿರಾಮ್ ಇತ್ತೀಚೆಗೆ ತರಬೇತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಿಶಾಖಪಟ್ಟಣದಿಂದ ಮರಳಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Policeman, hacked, death, suspected, Naxalites,