ಹೃದಯ ಹಾಗೂ ಆರೋಗ್ಯಕ್ಕೆ ಡೇಂಜರ್ ಎಲೆಕ್ಷನ್ ಟೆನ್ಷನ್

Social Share

ಬೆಂಗಳೂರು,ಮಾ.13- ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದೃವನಾರಾಯಣ್‍ರ ಹಠಾತ್ ಸಾವು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಾಗೂ ಸ್ಪರ್ಧಿಸುವ ನಾಯಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಆಕಾಂಕ್ಷಿಗಳ ಎದೆ ಬಡಿತ ಹೆಚ್ಚುತ್ತಿದೆ. ರಾಜಕೀಯ ಪಕ್ಷಗಳಿಗೆ ಈ ಬಾರಿ ಗೆದ್ದು ಅಧಿಕಾರ ಹಿಡಿಯಲೇಬೇಕಾದ ಉಮೇದು ತೀವ್ರವಾಗಿದೆ. ಅದಕ್ಕಾಗಿ ತಮ್ಮ ಕಾರ್ಯಕರ್ತರು, ನಾಯಕರ ಮೇಲೆ ಇನ್ನಿಲ್ಲದ ಒತ್ತಡ ಏರುತ್ತಿವೆ. ಹಗಲು ರಾತ್ರಿ ಬೇವರು ಹರಿಸಿ ಗೆಲುವಿಗಾಗಿ ಸಂಘರ್ಷ ನಡೆಸಲಾಗುತ್ತಿದೆ.

ಇತ್ತೀಚಿನ ಎರಡು ಘಟನೆಗಳು ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡವರಿಗೆ ಎಚ್ಚರಿಕೆ ಗಂಟೆಯಾಗಿವೆ. ಒಂದು ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಶೊಹಿಂಗ್ ಕ್ಷೇತ್ರದ ಡೆಮೋಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹೆಚ್.ಡಿ.ಆರ್.ಲಿಂಗ್ಡೋ ಫೆಬ್ರವರಿ 20ರಂದು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.

ಇನ್ನೂ ಎರಡು ದಿನಗಳ ಹಿಂದೆ ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಧೃವ ನಾರಾಯಣ್ ನಿರಂತರವಾಗಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡುಸ ಆರೋಗ್ಯವನ್ನು ನಿರ್ಲಕ್ಷ್ಯಿಸಿದ್ದರು. ಹೊಟ್ಟೆಯಲ್ಲಿನ ಅಲ್ಸರ್ ಸ್ಪೋಟಗೊಂಡು ತೀವ್ರ ರಸ್ತಸ್ರಾವ ಹಾಗೂ ಹೃದಯಾಘಾತದಿಂದ ಮೃತಪಟ್ಟಿದ್ದರು.

ಕಳ್ಳನೇ ಕಾವಲುಗಾರರನನ್ನು ದೂಷಿಸಿದಂತೆ : ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಈ ಘಟನೆಗಳು ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ವಹಿಸಬೇಕಾದ ಎಚ್ಚರಿಕೆಗೆ ಮುನ್ಸೂಚನೆ ನೀಡಿವೆ. ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ವಿಧಾನಸಭೆ ಚುನಾವಣೆ ಪರ್ವಕಾಲವಾಗಿದೆ. ಹಾಗಾಗಿ ಪ್ರತಿಯೊಬ್ಬರು ಜಿದ್ದಿಗೆ ಬಿದ್ದವರಂತೆ ಬೆವರಿಳಿಸಲಾರಂಭಿಸುತ್ತಾರೆ. ಚುನಾವಣೆ ಎಂದರೆ ಆತಂಕ, ಒತ್ತಡದ ಮೇರು ಸ್ಥಿತಿಯಾಗಿದೆ.

ಪ್ರತಿಯೊಂದು ಪರಿಸ್ಥಿತಿಯನ್ನು ನಿಭಾಯಿಸುವುದು, ಕಾರ್ಯಕರ್ತರನ್ನು ಸಂಭಾಳಿಸುವುದು, ಹಿರಿಯ ನಾಯಕರ ಸೂಚನೆಗಳ ಪಾಲನೆ, ಮತದಾರರ ಮನವೋಲಿಗೆ ಒಂದಲ್ಲ ಒಂದು ಒತ್ತಡಗಳು ಬಿಡುವಿಲ್ಲದಂತೆ ಅಭ್ಯರ್ಥಿಗಳನ್ನು ಮತ್ತು ಚುನಾವಣೆ ಕಾರ್ಯದಲ್ಲಿ ಮುಂಚೂಣಿಯಲ್ಲಿರುವವರನ್ನು ಹೈರಾಣಾಗಿಸುತ್ತವೆ.

ಈ ಮೊದಲೆಲ್ಲಾ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಒಂದೆರಡು ತಿಂಗಳು ಶ್ರಮ ಪಟ್ಟರೆ ಐದು ವರ್ಷ ಆರಾಮಾಗಿ ಇರಬಹುದು ಎಂಬ ಕಾರಣಕ್ಕೆ ಅಭ್ಯರ್ಥಿಗಳು ಒತ್ತಡವನ್ನು ನಿಭಾಯಿಸಿಕೊಂಡು ಕೆಲಸ ಮಾಡುತ್ತಿದ್ದರು. ಕೋವಿಡ್ ಬಳಿಕ ಪರಿಸ್ಥಿತಿ ಬದಲಾಗಿದೆ. ಹೃದಯಾಘಾತಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸಮೀಕ್ಷೆಗಳು ಬೇರೆ ಬೇರೆ ವಿಶ್ಲೇಷಣೆಗಳು ನಡೆಯುತ್ತಿವೆ. ಅದೇನೇ ಇದ್ದರೂ ಈ ಬಾರಿ ಚುನಾವಣೆಯಲ್ಲಿ ಜೀವ ರಕ್ಷಣೆ ಬಹಳ ಮುಖ್ಯವಾಗಿದೆ.

ನೈಸ್‍ ರಸ್ತೆಯ ಅತಿ ಹೆಚ್ಚು ಟೋಲ್ ಸಂಗ್ರಹಕ್ಕೆ ಲಾರಿ ಮಾಲೀಕರ ಆಕ್ರೋಶ

ಜೀವ ಉಳಿದರೆ ಮುಂದಿನ ಚುನಾವಣೆಯಲ್ಲೂ ಸ್ಪರ್ಧೆ ಮಾಡಬಹುದು, ಕೆಲಸ ಮಾಡಬಹುದು. ಮನೆ ಮಂದಿ, ನಂಬಿದವನ್ನು ನೆನಪಿಸಿಕೊಂಡು ಚುನಾವಣೆ ಮುಂಚೂಣಿಯಲ್ಲಿ ಇರುವವರು ಆರೋಗ್ಯದ ಕಡೆ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಹೆಚ್ಚು ಕಂಡು ಬರುತ್ತಿದೆ.

ವೈದ್ಯರ ಪ್ರಕಾರ ಇತ್ತೀಚಿನ ಜೀವನ ಶೈಲಿಗಳು ಮಧುಮೇಹ, ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿವೆ. ಹೀಗಾಗಿ ಪ್ರತಿಯೊಬ್ಬರು ಹೃದಯದ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಇದೆ.

ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಟೀಮ್ ಇಂಡಿಯಾ

ಹೃದಯಾಘಾತಗಳಂತೂ ಆತಂಕಕಾರಿಯಾಗುವಷ್ಟು ಹೆಚ್ಚಾಗಿವೆ. ಚುನಾವಣೆಯಲ್ಲಿ ಮತ್ತಷ್ಟು ಒತ್ತಡಕ್ಕೆ ಒಳಗಾಗಿ ಪ್ರಾಣ ಹಾನಿ ಮಾಡಿಕೊಳ್ಳುವ ಬದಲು ಶಾಂತ ರೀತಿಯಿಂದ ಆರೋಗ್ಯ ಪೂರ್ಣವಾಗಿ ಪರಿಸ್ಥಿತಿ ನಿಭಾಯಿಸುವುದನ್ನು ಕಾರ್ಯಕರ್ತರು ಮತ್ತು ನಾಯಕರು ರೂಢಿಸಿಕೊಳ್ಳಬೇಕಿದೆ.

political, leaders, priority, health, Assembly, elections,

Articles You Might Like

Share This Article