ಬೆಂಗಳೂರು,ಏ.2- ಸಂಪೂರ್ಣ ಅಭಿವೃದ್ಧಿ ನಿಲ್ಲಿಸಿ ಸಾಲ ಮಾಡಿರುವ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಸಂಸದರ ಮೇಲೆ ಬೊಟ್ಟು ಮಾಡುವುದು ಎಷ್ಟು ಸರಿ? ಎಂದು ಸಂಸದ ಬಸವರಾಜ ಬೊಮಾಯಿ ಪ್ರಶ್ನೆ ಮಾಡಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ರಾಜಕಿಯ ಲಾಭಕ್ಕಾಗಿ ತಂದಿರುವ ಗ್ಯಾರೆಂಟಿ ಅನುಷ್ಠಾನ ಮಾಡಲು ಮೊದಲನೆ ಬಜೆಟ್ ನಿಂದ ಸ್ಟಾಂಪ್ ಡ್ಯೂಟಿ, ಅಬಕಾರಿ ತೆರಿಗೆ, ಮೋಟರ್ ವೆಹಿಕಲ್ ತೆರಿಗೆ ಹೆಚ್ಚಳ ಮಾಡಿ ತೆರಿಗೆ ಭಯೊತ್ಪಾದನೆ ಮಾಡಿರುವ ಕೀರ್ತಿ, ಸಪೂರ್ಣ ಅಭಿವೃದ್ಧಿ ನಿಲ್ಲಿಸಿ ಸಾಲ ಮಾಡಿರುವ ಶ್ರೇಯಸ್ಸು ಸಿದ್ದರಾಮಯ್ಯಗೆ ಸಲ್ಲುತ್ತದೆ. ತಮ ಮೂಲಭೂತ ತಪ್ಪು ಮುಚ್ಚಿಕೊಳ್ಳಲು ಸಂಸದರ ಮೇಲೆ ಬೊಟ್ಟು ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
14ನೇ ಹಣಕಾಸಿನ ಷರತ್ತುಗಳು ನಿರ್ಧಾರ ಮಾಡುವಾಗ, ನಿಮದೇ ಸರ್ಕಾರ ಇತ್ತು. ಮತ್ತದನ್ನು ಅಂತಿಮಗೊಳಿಸುವಾಗ ನಿಮ ನೇತೃತ್ವದ ಸಮಿಶ್ರ ಸರ್ಕಾರ ಇತ್ತು. ಆಗ ಅದರಲ್ಲಿ ಕಾಂಗ್ರೆಸ್ಸಿನ ಐವರು ಸಚಿವರಿದ್ದರು. ಆಗ ಸುಮನಿದ್ದು, ಈಗ ಅನ್ಯಾಯ ಆಗಿದೆ ಅನ್ನುವುದು ಬೂಟಾಟಿಕೆ ಅಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.
ಜಿಎಸ್‌ಟಿಯನ್ನು ಮೊದಲು ತಂದಿದ್ದು ಯುಪಿಎ ಸರ್ಕಾರ ಎಲ್ಲಾ ಕಾನೂನು ಅವರ ಕಾಲದಲ್ಲಿ ಜಾರಿಗೆ ತಂದು ಜಿಎಸ್ ಟಿ ಅವತಾರಕ್ಕೆ ಕಾರಣಿಭೂತರೇ ಕಾಂಗ್ರೆಸ್‌ನ ಮಹಾನಾಯಕರು.ಜಿಎಸ್‌ಟಿಯ ಎಲ್ಲ ವಿಚಾರಗಳು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ನಿರ್ಧಾರವಾಗುತ್ತವೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಶಾಶ್ವತ ಸದಸ್ಯರಾಗಿ ರಾಜ್ಯ ಸರ್ಕಾರ ಇರುತ್ತದೆ. ಮುಖ್ಯಮಂತ್ರಿಗಳು ಒಂದು ಬಾರಿಯೂ ಜಿಎಸ್ ಟಿ ಕೌನ್ಸಿಲ್ ಸಭೆಗೆ ಹೋಗಿಲ್ಲ. ಅಲ್ಲಿ ಕಳಿಸಿರುವ ನಮ ರಾಜ್ಯದ ಪ್ರತಿನಿಧಿಗಳು ರಾಜ್ಯದ ಹಿತಕಾಪಾಡಲು ಏನು ಕ್ರಮ ತೆಗೆದುಕೊಂಡಿದ್ದಾರೆ? ಅಲ್ಲಿ ಏನೂ ಮಾತನಾಡದೇ ಹೊರಗಡೆ ರಾಜಕಾರಣಕ್ಕಾಗಿ ಈ ಮಾತುಗಳನ್ನಾಡುವಂಥದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ಕಾನೂನಿನ ಮೂಲ ಪುರುಷರಾದ ಕಾಂಗ್ರೆಸ್ಸಿಗರು. ಕರ್ನಾಟಕಕ್ಕೆ ಅನ್ಯಾಯವಾಗಿರುವುದಲ್ಲಿ ಅವರ ದೊಡ್ಡ ಪಾತ್ರ ಯಾರೂ ಮರೆಯುವುದಿಲ್ಲ. ಅದೇ ರೀತಿ ಕರ್ನಾಟಕ ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯ ಮೊದಲಿನಿಂದಲೂ ಇದೆ. ಸೆಸ್ ಸಂವಿಧಾನ ಬದ್ದವಾಗಿ ಯಾವ ವಿಚಾರಕ್ಕಾಗಿ ಸಂಗ್ರಹಿಸುತ್ತಾರೆ ಅದಕ್ಕೆ ಬಳಸಲು ಸಂವಿಧಾನದಲ್ಲಿ ತಂದವರೇ ಕಾಂಗ್ರೆಸ್‌ನವರು. 60ರ ದಶಕದಲ್ಲಿ ತಂದಿರುವ ಈ ಸೆಸ್ ಈಗ ಅನ್ಯಾಯವಾಗುತ್ತಿದೆ ಎಂದು ಬೊಬ್ಬೆ ಹಾಕುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
ಆರ್ಥಿಕ ನಿರ್ವಹಣೆಯಲ್ಲಿ ವಿಫಲ: ಸಿಎಂ ಆರ್ಥಿಕ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ . ನಿನ್ನೆ ಬಂದಿರುವ ಸಿಎಜಿ ರಿಪೋರ್ಟ್‌ನಲ್ಲಿ ಸುಮಾರು 25 ಸಾವಿರ ಕೋಟಿ ರೂ. ಬಾಕಿ ಇಟ್ಟುಕೊಂಡಿದ್ದಾರೆ. ಅದಕ್ಕೇನು ಹೇಳುತ್ತಾರೆ ಸಿದ್ದರಾಮಯ್ಯ. 25 ಸಾವಿರ ಕೊಟಿ ಶ್ರೀಮಂತರ ತೆರಿಗೆಯನ್ನು ಬಾಕಿ ವಸೂಲಿ ಮಾಡಲು ಇವರಿಗೆ ಧೈರ್ಯ ಇಲ್ಲವೇ ಅಥವಾ ಮನಸಿಲ್ಲವೇ? ಹೀಗೆ ತಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತು ರಾಜಕಿಯ ಲಾಭಕ್ಕಾಗಿ ತಂದಿರುವ ಗ್ಯಾರೆಂಟಿ ಅನುಷ್ಟಾನ ಮಾಡಲು ಮೊದಲನೆ ಬಜೆಟ್‌ನಿಂದ ಲ್ಯಾಂಡ್ ಸ್ಟಾಂಪ್ ಡ್ಯೂಟಿ ಹೆಚ್ಚಳ, ಅಬಕಾರಿ ತೆರಿಗೆ, ಮೋಟಾರ್ ವೆಹಿಕಲ್ ಡ್ಯೂಟಿ ಹೆಚ್ಚಳ ಮಾಡಿ ತೆರಿಗೆ ಭಯೊತ್ಪಾದನೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ಹೋಗುತ್ತದೆ. ಸಂಪೂರ್ಣ ಅಭಿವೃದ್ಧಿ ನಿಲ್ಲಿಸಿ ಸಾಲ ಮಾಡಿರುವ ಶ್ರೇಯಸ್ಸು ಸಿದ್ದರಾಮಯ್ಯಗೆ ಸಲ್ಲುತ್ತದೆ. ತಮ ಮೂಲಭೂತ ತಪ್ಪು ಮುಚ್ಚಿಕೊಳ್ಳಲು ಸಂಸದರ ಮೇಲೆ ಬೊಟ್ಟು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರದಿಂದ ರೈಲ್ವೆ ಯೋಜನೆಗೆ ಯುಪಿಎ ಅವಧಿಯಲ್ಲಿ 700 ಕೋಟಿ ಬರುತ್ತಿತ್ತು ಈಗ 7000 ಕೊಟಿ ರೂ. ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ಸುಮಾರು 30 ಸಾವಿರ ಕೋಟಿ ಕಳೆದ ಆರು ವರ್ಷದಲ್ಲಿ ಬಂದಿದೆ. ಕಿಸಾನ್ ಸಮಾನ್ ಯೋಜನೆಯಲ್ಲಿ ಸುಮಾರು 62 ಲಕ್ಷ ರೈತರಿಗೆ ಸಾವಿರಾರು ಕೋಟಿ ಬಂದಿದೆ.
ಆಯುಷಾನ್ ಭಾರತದಲ್ಲಿ ಕೇಂದ್ರ ಸರ್ಕಾರ ಕೊಡುತ್ತಿದೆ. ಹೀಗೆ ಬೇರೆ ಬೇರೆ ರೂಪದಲ್ಲಿ ಕೇಂದ್ರದಿಂದ ಬರುವುದನ್ನು ಜನರ ಮುಂದೆ ಇಟ್ಟಿಲ್ಲ. ಜನರ ಬದುಕಿಗೆ ಭಾರ ಆಗಿರುವುದು ಕಾಂಗ್ರೆಸ್ ಸರ್ಕಾರ. ಇದನ್ನು ಯಾವಾಗ ತೆಗೆದು ಹಾಕುತ್ತೇವೆ ಎನ್ನುವ ಹವಣಿಕೆಯಲ್ಲಿ ಕರ್ನಾಟಕದ ಜನತೆ ಇದ್ದಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
