ಮತದಾರರ ಸೆಳೆಯಲು ನಾನಾ ತಂತ್ರ, ಬಗೆಬಗೆಯ ಆಮಿಷ

ಬೆಂಗಳೂರು, ಏ.8- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ತೀವ್ರಗೊಂಡಿದ್ದು, ಮತದಾರರ ಮನಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಚುನಾವಣಾ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆಯು ರಂಗೇರತೊಡಗಿದ್ದು, ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತದಾರರಿಗೆ ನಾನಾ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹಣದ ಮಳೆ, ಹೆಂಡದ ಹೊಳೆಯೇ ಹರಿದಿತ್ತು. ಕುಕ್ಕರ್ ಸೀಟಿ ಜೋರಾಗಿತ್ತು. ಮಿಕ್ಸಿ, ಟಿವಿ, ಟಿಫಿನ್ ಬಾಕ್ಸ್, ವಾಚ್ ಸೇರಿದಂತೆ ನಾನಾ ರೀತಿಯ ಉಡುಗೊರೆಗಳನ್ನು ಮತದಾರರಿಗೆ ನೀಡಿ ಮತ ಸೆಳೆಯುವ ಪ್ರಯತ್ನ ಮಾಡಲಾಗಿತ್ತು. … Continue reading ಮತದಾರರ ಸೆಳೆಯಲು ನಾನಾ ತಂತ್ರ, ಬಗೆಬಗೆಯ ಆಮಿಷ