ನವದೆಹಲಿ.ಫೆ.23-ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ಶಾಂತಿಯುತವಾಗಿ ನಡೆದಿದೆ . ಒಂಬತ್ತು ಜಿಲ್ಲಾಗಳ ಒಟ್ಟು 59 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಘಟಾನಿಘಟಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪಿಲಿಭಿತ, ಲಖಿಂಪುರ ಖೇರಿ, ಸೀತಾರ್ಪು, ಹರ್ದೋಯಿ, ಉನ್ನಾವೋ, ಲಕ್ನೋ, ರಾಯ್ ಬರೇಲಿ, ಬಂದಾ ಮತ್ತು ಫತೇರ್ಪು ಜಿಲ್ಲಾವ್ಯಾಪ್ಪಿಯಲ್ಲಿ ಬೆಳಿಗ್ಗೆಯೇ ಜನರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ.
ಹಲವಾರು ಕ್ಯಾಬಿನೆಟ್ ಸಚಿವರು, ರಾಯ್ ಬರೇಲಿಯ ಹಾಲಿ ಶಾಸಕಿ ಅದಿತಿ ಸಿಂಗ್ ಮತ್ತು ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಸೇರಿದಂತೆ 624 ಅಭ್ಯರ್ಥಿಗಳ ಭವಿಷ್ಯ ಈ ಸುತ್ತಿನ ಮತದಾನದಲ್ಲಿ ನಿರ್ದಾರವಾಗಲಿದೆ. ಸುಮಾರು 800 ಕಂಪನಿ ಅರೆಸೇನಾ ಪಡೆಗಳು ಮತ್ತು 60,000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ನಾವು ಸುಮಾರು 350 ಸೀಟುಗಳನ್ನು ಪಡೆಯಲಿದ್ದೇವೆ. ಅಭಿವೃದ್ಧಿ ಕಾರ್ಯ ಕಣ್ಣಮುಂದಿದೆ ಅದು ನಮ್ಮ ಹೆಗ್ಗುರುತು ರಾಜ್ಯದ ಸಂಸ್ಕøತಿ ಮತ್ತು ಸಂಪ್ರದಾಯಗಳನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. ಜನರು ಅದನ್ನು ಸ್ವೀಕರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಎಸ್ಪಿ-ಬಿಎಸ್ಪಿ-ಕಾಂಗ್ರೆಸ್ ಎಷ್ಟೇ ಅಪಪ್ರಚಾರ ನಡೆಸಿದರು ಪ್ರಯೋಜನವಾಗಲ್ಲ ಎಂದು ನೋಯ್ಡಾದ ಬಿಜೆಪಿ ಅಭ್ಯರ್ಥಿ ಪಂಕಜ್ ಸಿಂಗ್ ಹೇಳಿದ್ದಾರೆ.
