ಶಿಲೊಂಗ್ಗ್ ,ಫೆ.21- ವಿಧಾನಸಭೆ ಚುನಾವಣೆಗೆ ಸ್ರ್ಪಧಿಸಿದ್ದ ಅಭ್ಯರ್ಥಿಯೊಬ್ಬರು ಮೇಘಾಲಯದಲ್ಲಿ ನಿಧನ ಹೊಂದಿದ್ದಾರೆ. ಮೇಘಾಲಯದ ಸೋಹಿಯಾಂಗ್ ಕ್ಷೇತ್ರದಿಂದ ಸ್ರ್ಪಧಿಸಿದ್ದ ಎಚ್‍ಡಿಆರ್ ಲಿಂಗ್ಡೋ ಅವರು ಹೃದಯಘಾತದಿಂದ ನಿಧನ ಹೊಂದಿರುವ ಹಿನ್ನಲೆಯಲ್ಲಿ ಸೋಹಿಯಾಂಗ್ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
60 ಸದಸ್ಯ ಬಲದ ಮೇಘಾಲಯ ವಿಧಾನಸಭೆಗೆ ಇದೇ 27 ರಂದು ಚುನಾವಣೆ ನಡೆಯಲಿದ್ದು, ಮಾ.2ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ. ಸೋಹಿಯಾಂಗ್ ಕ್ಷೇತ್ರದ ಯುನೈಟೆಡ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಲಿಂಗ್ಡೋ ಅವರ ನಿಧನದಿಂದ ಆ ಕ್ಷೇತ್ರದ ಚುನಾವಣೆಯನ್ನು ಕೆಲ ದಿನಗಳ ಕಾಲ ಮುಂದೂಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಖಾರ್ಕೋಂಗೋರ್ ತಿಳಿಸಿದ್ದಾರೆ.
ಹೆಡ್‌ಕಾನ್‌ಸ್ಟೆಬಲ್ ಕತ್ತು ಸೀಳಿದ ನಕ್ಸಲರು
ಮೇಘಾಲಯದ ಮಾಜಿ ಗೃಹ ಸಚಿವರಾಗಿದ್ದ ಲಿಂಗ್ಡೋ ಅನೇಕ ಬಾರಿ ಸೋಹಿಯಾಂಗ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರು ಕಳೆದ ಚುನಾವಣೆಯಲ್ಲಿ ಸ್ಯಾಮ್ಲಿನ್ ಮಲಗಿಯಾಂಗ್ ವಿರುದ್ಧ ಸೋತಿದ್ದರು.
Polling, Meghalaya, Sohiong, Adjourned, Candidate, Dies, Heart Attack,