ನವದೆಹಲಿ,ಜು.29-ಸಾಮಾಜಿಕ ಸೇವೆ ಹೆಸರಿನಲ್ಲಿ ನಿಧಿ ಸಂಗ್ರಹಿಸುವ ಪಾಪುಲರ್ ಫ್ರಂಟ್ ಆಫ್ ಇಂಡಿಯ ದೇಶ ವಿರೋಧಿ ಚಟುವಟಿಕೆಗಳಿಗೆ ಸುಮಾರು 200ಕ್ಕೂ ಹೆಚ್ಚು ಮಂದಿ ಕೇಡರ್ ನಾಯಕರನ್ನು ನಿಯೋಜನೆ ಮಾಡಿಕೊಂಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇಂಡಿಯಾ ಟು ಡೇ ಮಾಡಿರುವ ವರದಿಯ ಪ್ರಕಾರ, ಪಾಪುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಚಟುವಟಿಕೆಗಳು ಗಂಭೀರ ಅಪಾಯವನ್ನು ಮುನ್ಸೂಚಿಸುತ್ತವೆ. ಈ ಸಂಘಟನೆಗೆ ದಕ್ಷಿಣ ಭಾರತದಲ್ಲಿ ತರಬೇತಿ ಕೇಂದ್ರಗಳಿವೆ ಎಂಬ ಆತಂಕದ ವರದಿಯೂ ದಾಖಲಾಗಿದೆ.
ಕರಾವಳಿಯಲ್ಲಿ ಸತತವಾಗಿ ಸರಣಿ ಹತ್ಯೆಗಳು ಮತ್ತು ಹಿಂಸಾಚಾರ ಭುಗಿಲೆದಿದ್ದು, ಇದರಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಹಸ್ತಕ್ಷೇಪಗಳ ಬಗ್ಗೆ ವದಂತಿಗಳು ಕೇಳಿಬಂದಿರುವ ಸಂದರ್ಭದಲ್ಲಿ ಸುದ್ದಿಸಂಸ್ಥೆಯ ವರದಿ ಗಮನಸೆಳೆದಿದೆ.
ಸೂಕ್ತ ದಾಖಲೆಗಳ ಆಧಾರದ ಮೇಲೆ ವರದಿ ಮಾಡುತ್ತಿರುವುದಾಗಿ ಇಂಡಿಯಾ ಟು ಡೇ ಹೇಳಿಕೊಂಡಿದೆ. ದೇಶದ ಹಲವಾರು ಕಡೆ ಸಕ್ರಿಯವಾಗಿರುವ ಪಿಎಫ್‍ಐನ ನಿದ್ರಾಕೋಶ(ಸ್ಲೀಪರ್‍ಸೆಲ್)ಗಳ ಮೇಲೆ ದಾಳಿ ನಡೆಸಿದಾಗ ಪತ್ತೆಯಾಗಿರುವ ದಾಖಲಾತಿಗಳು ಮತ್ತು ನೀಲನಕ್ಷೆಗಳು ಭಾರೀ ಸ್ಪೋಟದ ಸಂಚನ್ನು ಒಳಗೊಂಡಿವೆ ಎಂದು ತಿಳಿಸಿದೆ.
ಒಂದು ವೇಳೆ ಸರ್ಕಾರ ಪಿಎಫ್‍ಐನ್ನು ನಿಷೇಧ ಮಾಡಿದರೂ ಕೂಡ ಅದು ಪರಿಣಾಮ ಬೀರದಂತೆ ಮಾಡಲು ಹಲವಾರು ಘಟಕಗಳನ್ನು ಬೇರೆ ಬೇರೆ ಹೆಸರಿನಲ್ಲಿ ಸಕ್ರಿಯವಾಗಿಡಲಾಗಿದೆ. ಈ ಮೂಲಕ ತನ್ನ ಹಿತಾಸಕ್ತಿ ಹಾಗೂ ಸಿದ್ದಾಂತವನ್ನು ಜಾರಿಗೊಳಿಸುವ ಪ್ರಬಲ ಯೋಜನೆಯನ್ನು ಪಿಎಫ್‍ಐ ಹೊಂದಿದೆ ಎಂಬ ಆರೋಪ ಮಾಡಲಾಗಿದೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) , ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‍ಐ), ನ್ಯಾಷನಲ್ ವುಮೆನ್ಸ್ ಫ್ರಂಟ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ಆಲ್ ಇಂಡಿಯಾ ಲೀಗಲ್ ಕೌನ್ಸಿಲ್, ರೆಹಾಬ್ ಇಂಡಿಯಾ ಫೌಂಡೇಷನ್, ನ್ಯಾಷನಲ್ ಕಾನಿಡ್ರೇಷನ್ ಆಫ್ ಹ್ಯೂಮೆನ್ ರೈಟ್ಸ್ ಆರ್ಗೈನೈಜೇಷನ್, ಸೋಷಿಯಲ್ ಡೆಮಾಕ್ರಟಿಕ್ ಡ್ರೇಡ್ ಯೂನಿಯನ್ ಮತ್ತು ಎಚ್‍ಆರ್‍ಡಿಎಫ್ ಸೇರಿದಂತೆ ವಿವಿಧ ಸಂಘಟನೆಗಳ ಹೆಸರಿನಲ್ಲಿ, ಸಾಮಾಜಿಕ ಸೇವೆ ಹೆಸರಿನಲ್ಲಿ ನಿ ಸಂಗ್ರಹಿಸಲಾಗುತ್ತಿದೆ.
ಇದನ್ನು ಸಮಾಜ ವಿರೋ ಮತ್ತು ದೇಶ ವಿರೋ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಶಾಲಾ-ಕಾಲೇಜುಗಳು, ಮದ್ರಸಾಗಳು ಮತ್ತು ಮುಸ್ಲಿಂ ಸಮುದಾಯ ಹೆಚ್ಚಿರುವ ಪ್ರದೇಶಗಳಲ್ಲಿ ನೇಮಕಾತಿಗಳನ್ನು ನಡೆಸಲಾಗುತ್ತಿದೆ.
ದಾಖಲಾತಿಗಳ ಪ್ರಕಾರ ದಕ್ಷಿಣ ಭಾರತದಲ್ಲಿ ತರಬೇತಿ ಪಡೆದ 200ಕ್ಕೂ ಹೆಚ್ಚು ಕೇಡರ್ ಕಾರ್ಯಕರ್ತರುಕೆಲಸ ಮಾಡುತ್ತಿದ್ದಾರೆ. ಅವರು ಬಡವರು, ಭಿಕ್ಷುಕರನ್ನು ಮನಪರಿವರ್ತಿಸಿ ಹಿಂದೂ ವಿರೋ ಮನಸ್ಥಿತಿಯೊಂದಿಗೆ ದುಷ್ಕøತ್ಯಗಳಿಗೆ ಇಳಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.