ಹೃದಯಾಘಾತದಿಂದ ರೇಡಿಯೋ ಜಾಕಿ ರಚನಾ ಸಾವು

Social Share

ಬೆಂಗಳೂರು, ಫೆ.22- ಹೃದಯಾಘಾತದಿಂದ ಆರ್.ಜೆ.ರಚನಾ (35) ನಿಧನರಾಗಿದ್ದಾರೆ.ಆರ್.ಜೆ. ರೇಡಿಯೋ ಜಾಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ರಚನಾ ಜೆಪಿ ನಗರದ ತಮ್ಮ ಫ್ಲ್ಯಾಟ್‍ನಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದೆ.ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಚಾಮರಾಜಪೇಟೆಯ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ.
ರೇಡಿಯೋ ಮಿರ್ಚಿ, ರೇಡಿಯೋ ಸಿಟಿ ಹಾಗೂ ಮುಂತಾದ ಎಫ್.ಎಂ. ಚಾನಲ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಚನಾ ತಮ್ಮ ಪಟ ಪಟ ಮಾತಿನಿಂದಲೇ ಜನಪ್ರಿಯರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು.
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾದಲ್ಲೂ ನಟಿಸಿದ್ದ ರಚನಾ ಮಾತಿನ ಮಲ್ಲಿ ಎಂದೇ ಕರೆಸಿಕೊಳ್ಳುತ್ತಿದ್ದರು. ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದ ಮುದ್ದು ಮುಖದ ಚೆಲವು ರಚನಾ. ಸಖತ್​ ಫಿಟ್​ ಅಂಡ್​​ ಫೈನ್ ಆಗಿದ್ದ ರಚನಾಗೆ ಹಾರ್ಟ್ ಅಟ್ಯಾಕ್​ ಆಗಿದೆ. ಕಳೆದ 7 ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ಬಿಟ್ಟು ಮನೆಯಲ್ಲೇ ಒಬ್ಬರು ಇದ್ದು. ಡಿಪ್ರೆಷನ್​, ಸ್ಟ್ರೆಸ್​ನಿಂದ ಹಾರ್ಟ್​ ಅಟ್ಯಾಕ್​ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನೂ ಕಳೆದ ಕೆಲ ವರ್ಷಗಳಿಂದ ಎಲ್ಲರಿಂದ ರಚನಾ ದೂರ ಇದ್ದರು ಎಂದು ಹೇಳಲಾಗುತ್ತುದೆ. ಸ್ನೇಹಿತರ ಕರೆಗೂ ಸರಿಯಾದ ಸ್ಪಂಧಿಸುತ್ತಿರಲ್ಲ ಎನ್ನಲಾಗುದೆ.

Articles You Might Like

Share This Article