ಬೆಂಗಳೂರು, ಫೆ.18- ಫೇಸ್‍ಬುಕ್ ಮತ್ತು ವಾಟ್ಸಾಪ್ ಖಾತೆ ಮುಖಾಂತರ ಹೆಣ್ಣು ಮಕ್ಕಳಿಗೆ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದ ವ್ಯಕ್ತಿಯನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೆÇಲೀಸರು ಬಂಸಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ನಿವಾಸಿ ಹರೀಶ್ ಬಂತ ಆರೋಪಿ. ಈತ ಜೆಸಿಬಿ ಚಾಲಕ ವೃತ್ತಿ ಮಾಡುತ್ತಿದ್ದ.
ಕಳೆದ ಮೂರು ತಿಂಗಳಿನಿಂದ ಹಗಲು-ರಾತ್ರಿ ಎನ್ನದೆ ತನ್ನ ಪತ್ನಿಗೆ ಫೋನ್ ಕರೆಗಳನ್ನು ಮಾಡುತ್ತಿದ್ದ ಬಗ್ಗೆ ಮತ್ತು ಅಶ್ಲೀಲ ಫೋಟೋವನ್ನು ಪತ್ನಿಯ ವಾಟ್ಸಾಪ್ ನಂಬರ್‍ಗೆ ಕಳುಹಿಸುತ್ತಿರುವ ಬಗ್ಗೆ ಫೆ.16ರಂದು ಸಿಇಎನ್ ಪೊಲೀಸ್ ಠಾಣೆಗೆ ಪಿರ್ಯಾ ದುದಾರರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಫೋಲೀಸರು ಆರೋಪಿಯ ಮೊಬೈಲ್ ನಂಬರ್‍ನ ಸಿಡಿಆರ್ ಮಾಹಿತಿಯನ್ನು ಆಧರಿಸಿ ಆತನ ಬಂಧನಕ್ಕೆ ಬಲೆ ಬೀಸಿ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಬಂಸಿದ್ದಾರೆ.
ಈತ 10ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿರುವುದು ಫೋಲೀಸರ ತನಿಖೆಯಿಂದ ಗೊತ್ತಾಗಿದೆ.
ಆಗ್ನೇಯ ವಿಭಾಗದ ಉಪ ಫೋಲೀಸ್ ಆಯುಕ್ತರಾದ ಶ್ರೀನಾಥ್ ಎಂ.ಜೋಷಿ ಮಾರ್ಗದರ್ಶನದಲ್ಲಿ ಎಸಿಪಿ ಸುೀರ್ ಎಂ.ಹೆಗಡೆ ಅವರ ಸಲಹೆ ಮೇರೆಗೆ ಇನ್ಸ್‍ಪೆಕ್ಟರ್ ಯೋಗೇಶ್, ಸಬ್‍ಇನ್ಸ್‍ಪೆಕ್ಟರ್ ನಾಗೇಶ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಕಾನೂನು ರೀತಿ ಕ್ರಮ: ಯಾರೇ ಆದರೂ ಮಹಿಳೆಯರಿಗೆ ಅಶ್ಲೀಲ ವಿಡಿಯೋ, ಪೊಟೋ ಮತ್ತು ಸಂದೇಶಗಳನ್ನು ಕಳುಹಿಸಿದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಶ್ರೀನಾಥ್ ಎಂ.ಜೋಷಿ ಎಚ್ಚರಿಕೆ ನೀಡಿದ್ದಾರೆ.
