ಬೆಂಗಳೂರು, ಫೆ.4- ಟ್ವಿಟರ್ ಖಾತೆಯಲ್ಲಿ ಲೈಂಗಿಕ ಉತ್ತೇಜನ ನೀಡುವ ಪೋಟೋಗಳನ್ನು ಭಿತ್ತರಿಸುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಮಹದೇವ ಜೋಷಿ, ಫೆಬ್ರವರಿ 2ರಂದು ಬೆಂಗಳೂರು ನಗರ ಪೊಲೀಸ್ ಹಿರಿಯ ಅಧಿಕಾರಿಗಳ ಖಾತೆಗೆ ವ್ಯಕ್ತಿಯೊಬ್ಬರ ಖಾತೆಯಿಂದ ದೂರಿನ ರೂಪದಲ್ಲಿ ಮಾಹಿತಿ ಬಂದಿತ್ತು.
ಅದರಲ್ಲಿ ನಾವು ಬೆಂಗಳೂರಿನಲ್ಲಿರುವ ಮದುವೆಯಾದ ದಂಪತಿ. ನಮ್ಮನ್ನು ಭೇಟಿ ಮಾಡಲು ಯಾರಿಗಾದರೂ ಆಸಕ್ತಿ ಇದ್ದರೆ ಫ್ರೆಂಡ್ಸ್ ವಿತ್ ಬೆನಿಫಿಟ್ಸ್ನಲ್ಲಿ ಸಂಪರ್ಕ ಮಾಡಿ ಎಂಬ ಸಂದೇಶದೊಂದಿಗೆ ಅಶ್ಲೀಲ ಚಿತ್ರಗಳನ್ನು ಹಾಕಿದ್ದಾರೆ ಎಂದು ಮಾಹಿತಿ ನೀಡಲಾಗಿತ್ತು. ತನಿಖೆ ಆರಂಭಿಸಿದ ಸಿ ಇ ಎನ್ ಪೊಲೀಸ್ ಇನ್ಸ್ಪೆಕ್ಟರ್ ಯೋಗೇಶ್ ಎಸ್.ಟಿ. ಅವರು ವೈಜ್ಞಾನಿಕ ಮಾದರಿಗಳ ಮೂಲಕ ಖಾತೆದಾರರ ವಿಳಾಸವನ್ನು ಪತ್ತೆ ಹಚ್ಚಿದರು.
ನಿನ್ನೆ ದಂಪತಿಯ ಮನೆ ಮೇಲೆ ದಾಳಿ ನಡೆಸಿದಾಗ ಆರೋಪಿಗಳು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದರಿಗೆ ಟೆಲಿಗ್ರಾಮ್ ಐಡಿ ನೀಡುತ್ತಿದ್ದರು. ಅಲ್ಲಿ ಅಶ್ಲೀಲ ವಿಡಿಯೋಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಒಪ್ಪಿಕೊಂಡು ಬಂದ ಗ್ರಾಹಕರೊಂದಿಗೆ ವ್ಯವಹಾರ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಆರೋಪಿ ಪ್ಯಾಂಟಸಿ ವಿಡಿಯೋ ನೋಡುವ ಚಟ ಬೆಳೆಸಿಕೊಂಡಿದ್ದು, ಸದರಿ ದೃಶ್ಯಗಳನ್ನು ನೇರವಾಗಿ ನೋಡುವ ಸಲುವಾಗಿ ಟ್ವಿಟರ್ ಖಾತೆ ತೆರೆದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ದಂಪತಿಗಳು ನಗರದಲ್ಲಿ ನೆಲೆಸಿದ್ದು, ಐಟಿ ಕಾಯ್ದೆ ಅನ್ವಯ ಪತಿಯನ್ನು ಬಂಸಲಾಗಿದೆ. ತನಿಖೆ ಮುಂದುವರೆದಿದೆ. ಈವರೆಗಿನ ತನಿಖೆಯ ಪ್ರಕಾರ ಈ ಪ್ರಕರಣದಲ್ಲಿ ಸಂಗಾತಿ ವಿನಿಮಯ ನಡೆದಿಲ್ಲ ಎಂದು ಡಿಸಿಪಿ ಸ್ಪಷ್ಟ ಪಡಿಸಿದ್ದಾರೆ.
