Saturday, September 14, 2024
Homeಮನರಂಜನೆಪೌಡರ್ ಗೆಲುವಿಗಾಗಿ ಚಿತ್ರತಂಡದ ಟೆಂಪಲ್ ರೌಂಡ್ಸ್

ಪೌಡರ್ ಗೆಲುವಿಗಾಗಿ ಚಿತ್ರತಂಡದ ಟೆಂಪಲ್ ರೌಂಡ್ಸ್

ಆಗಸ್ಟ್ 23ಕ್ಕೆ ರಾಜ್ಯಾದ್ಯಂತ ಅಬ್ಬರಿಸಲು ಬರುತ್ತಿರುವ ಪೌಡರ್ ಸಿನಿಮಾ ಈಗಾಗಲೇ ಗಾಂಧಿನಗರದಲ್ಲಿ ಒಂದು ಕ್ರೇಜ್ ಕ್ರಿಯೇಟ್ ಮಾಡಿದೆ. ಚಿತ್ರದ ಶುರುವಾದಾಗಿನಿಂದಲೂ ಒಂದಲ್ಲ ಒಂದು ಸದ್ದು ಸುದ್ದಿ ಮಾಡುತ್ತಿರುವ ಈ ಚಿತ್ರ ಒಂದಷ್ಟು ಕುತೂಹಲಗಳನ್ನು ಹೊತ್ತು ತರುತ್ತಿದೆ.

ಕೆ ಆರ್ ಜಿ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರವನ್ನು ಈಗಾಗಲೇ ಜನರಿಗೆ ಬಿಡುಗಡೆಯ ಕುರಿತು ಪರಿಣಾಮಕಾರಿಯಾಗಿ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ತಲುಪಿಸಲು ಯಶಸ್ವಿಯಾಗಿದ್ದಾರೆ . ಈಗ ನಾಯಕ ದಿಗಂತ್ ಹಾಗೂ ಇಡೀ ತಂಡದಿಂದ ಜೊತೆ ಟೆಂಪಲ್ ರನ್ ಮಾಡುತ್ತಿದ್ದಾರೆ. ಸದ್ಯ ಮೈಸೂರಿನ ಚಾಮುಂಡೇಶ್ವರಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ಹಾಗೂ ಕಾರ್ತಿಕ್ ಗೌಡ ಹುಟ್ಟೂರು ಕೊಡಗಳ್ಳಿ ರಾಮಗಿರಿ ಅಮ್ಮನ ದರ್ಶನ ಪಡೆದು ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದಾರೆ.

ಗುಲ್ಟು ಸಿನಿಮಾದಿಂದ ಗುರುತಿಸಿಕೊಂಡ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಪೌಡರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಹಾಸ್ಯ ದೊಂದಿಗೆ ಒಂದು ಗಂಭೀರ ವಿಚಾರವನ್ನು ತೆರೆಯ ಮೇಲೆ ತೋರಿಸಲು ತಂಡ ಹೊರಟಿದೆ.

ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ ಇನ್ನಿತರರು ನಟಿಸಿರುವ “ಪೌಡರ್” ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ. ಕೆ‌.ಆರ್.ಜಿ. ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ನ ಚೊಚ್ಚಲ ಸಹಯೋಗವಾದ “ಪೌಡರ್” ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ‌.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆಪೌಡರ್ ಗೆಲುವಿಗಾಗಿ ಚಿತ್ರತಂಡದ ಟೆಂಪಲ್ ರೌಂಡ್ಸ್

ನಾಳೆ ರಾಜ್ಯಾದ್ಯಂತ ಅಬ್ಬರಿಸಲು ಬರುತ್ತಿರುವ ಪೌಡರ್ ಸಿನಿಮಾ ಈಗಾಗಲೇ ಗಾಂಧಿನಗರದಲ್ಲಿ ಒಂದು ಕ್ರೇಜ್ ಕ್ರಿಯೇಟ್ ಮಾಡಿದೆ. ಚಿತ್ರದ ಶುರುವಾದಾಗಿನಿಂದಲೂ ಒಂದಲ್ಲ ಒಂದು ಸದ್ದು ಸುದ್ದಿ ಮಾಡುತ್ತಿರುವ ಈ ಚಿತ್ರ ಒಂದಷ್ಟು ಕುತೂಹಲಗಳನ್ನು ಹೊತ್ತು ತರುತ್ತಿದೆ.

ಕೆ ಆರ್ ಜಿ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರವನ್ನು ಈಗಾಗಲೇ ಜನರಿಗೆ ಬಿಡುಗಡೆಯ ಕುರಿತು ಪರಿಣಾಮಕಾರಿಯಾಗಿ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ತಲುಪಿಸಲು ಯಶಸ್ವಿಯಾಗಿದ್ದಾರೆ . ಈಗ ನಾಯಕ ದಿಗಂತ್ ಹಾಗೂ ಇಡೀ ತಂಡದಿಂದ ಜೊತೆ ಟೆಂಪಲ್ ರನ್ ಮಾಡುತ್ತಿದ್ದಾರೆ.
ಸದ್ಯ ಮೈಸೂರಿನ ಚಾಮುಂಡೇಶ್ವರಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ಹಾಗೂ ಕಾರ್ತಿಕ್ ಗೌಡ ಹುಟ್ಟೂರು ಕೊಡಗಳ್ಳಿ ರಾಮಗಿರಿ ಅಮ್ಮನ ದರ್ಶನ ಪಡೆದು ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದಾರೆ.

ಗುಲ್ಟು ಸಿನಿಮಾದಿಂದ ಗುರುತಿಸಿಕೊಂಡ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಪೌಡರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಹಾಸ್ಯ ದೊಂದಿಗೆ ಒಂದು ಗಂಭೀರ ವಿಚಾರವನ್ನು ತೆರೆಯ ಮೇಲೆ ತೋರಿಸಲು ತಂಡ ಹೊರಟಿದೆ.

ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ ಇನ್ನಿತರರು ನಟಿಸಿರುವ “ಪೌಡರ್” ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ. ಕೆ‌.ಆರ್.ಜಿ. ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ನ ಚೊಚ್ಚಲ ಸಹಯೋಗವಾದ “ಪೌಡರ್” ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ‌.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ

RELATED ARTICLES

Latest News