ಭೂಕಂಪಕ್ಕೆ 5,000 ಮಂದಿ ಬಲಿ, ಟರ್ಕಿ, ಸಿರಿಯಾಗೆ ಜಾಗತಿಕ ಸಹಾಯಹಸ್ತ

Social Share

ಟರ್ಕಿ,ಫೆ.7-ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 5,000 ಗಡಿ ದಾಟಿದೆ. ಟರ್ಕಿಯ ಸ್ಥಳೀಯ ಕಾಲಮಾನ ಪ್ರಕಾರ ನೆನ್ನೆ ನಸುಕಿನ ಜಾವ 4 ಗಂಟೆಯ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿ ಕ್ಷಣ ಮಾತ್ರದಲ್ಲಿ ಸಾವಿರಾರು ಕಟ್ಟಡಗಳು ಧರೆಗುರುಳಿದ್ದು ಅನೇಕರು ನಿದ್ದೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ತೀವ್ರ ದಟ್ಟ ಮಂಜಿನ ಹವಾಮಾನ ತುರ್ತು ರಕ್ಷಣಾ ಕಾರ್ಯಗಳಿಗೆ ಅಡಚಣೆ ಉಂಟಾಯಿತು ಎಂದು ಸ್ಥಳೀಯರು ಭೀಕರ ದೃಶ್ಯ ನೆನೆದು ಕಣ್ಣೀರು ಹಾಕಿದ್ದಾರೆ.

ಸುಮಾರು 5,606 ಅಪಾರ್ಟ್ ಮೆಂಟ್ ಕಟ್ಟಡಗಳಲ್ಲಿ ಅನೇಕ ಧರೆಗುರುಳಿದ್ದರೆ ಇನ್ನು ಕೆಲವು ಶಿಥಿಲಗೊಂಡಿವೆ.
ನಾವು ಇಂತಹ ಭೀಕರ ಭಯಾನಕ ಮಾರಣಾಂತಿಕ ಪರಿಸ್ಥಿತಿ ಎದುರಿಸುತ್ತಿರುವುದು ಇದೇ ಮೊದಲು ಎಂದು ಆಗ್ನೇಯ ಟರ್ಕಿ ನಗರವಾದ ಕಹ್ರಮನ್‍ಮರಸ್‍ನಲ್ಲಿ ಸ್ಥಳೀಯ ಮಾಧ್ಯಮ ವರದಿಗಾರ್ತಿ ಮೆಲಿಸಾ ಸಲ್ಮಾನ್ ಹೇಳಿದ್ದಾರೆ.

ಇದನ್ನು ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಭೂಕಂಪ ಎಂದು ಸಿರಿಯಾದ ರಾಷ್ಟ್ರೀಯ ಭೂಕಂಪ ಕೇಂದ್ರದ ಮುಖ್ಯಸ್ಥ ರೇದ್ ಅಹ್ಮದ್ ಹೇಳಿದ್ದಾರೆ. ಮೊದಲು 7.8 ತೀವ್ರತೆಯ ಕಂಪನದ ನಂತರ ಸುಮಾರು 12 ಭಾರಿ ಭೂಮಿ ಕಂಪಿಸಿದೆ ಬೆಳಗಿನ ಬೆಳಕು, ದಿನದ ಆರಂಭ ನೋಡುವ ಮೊದಲೇ ಹಲವರು ಮಂದಿ ಮಸಣ ಸೇರಿದ್ದಾರೆ ಎಂದಿದ್ದಾರೆ.

ಮಾರಣಾಂತಿಕ ಭೂಕಂಪದಿಂದ ನಲುಗಿದ ಟರ್ಕಿ, ಸಿರಿಯಾಗೆ ಜಾಗತಿಕ ಮಟ್ಟದಲ್ಲಿ ಸಹಾಯಹಸ್ತ
ಅಂಕಾರಾ (ಟರ್ಕಿ), ಫೆ 7 – ಟರ್ಕಿ ಮತ್ತು ಸಿರಿಯಾದ ಭೂಕಂಪ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಅನೇಕ ದೇಶಗಳು ಮುಂದಾಗಿದೆ. ನುರಿತ ಸಿಬ್ಬಂದಿಗಳ ಜೊತೆಗೆ ಉಪಕರಣಗಳನ್ನು ರವಾನಿಸಿದ್ದು ಸಮರೋಪಾದಿಯಲ್ಲಿ ಬದುಕುಳಿದವರ ರಕ್ಷಣೆ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ
ಐರೋಪ್ಯ ರಾಷ್ಟ್ರ ಉಪಗ್ರಹ ವ್ಯವಸ್ಥೆಯನ್ನು ಕಲ್ಪಿಸಿದೆ ಜೊತೆಗೆ ಆಹಾರ ವಸ್ತು ನೀಡಿದೆ.

ಅಮೆರಿದಿಮದ ಸುಮಾರು 100 ಅಗ್ನಿಶಾಮಕ ದಳದವರು ,ಇಂಜಿನಿಯರ್ ಹಾಗು ವಿಶೇಷವಾಗಿ ತರಬೇತಿ ಪಡೆದ ನಾಯಿಗಳನ್ನು ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು ಟರ್ಕಿಗೆ ಬಂದಿದೆ.

ರಷ್ಯಾದ ರಕ್ಷಣಾ ತಂಡಗಳು ಸಿರಿಯಾಕ್ಕೆ ತೆರಳಿದ್ದು ಅಲ್ಲಿ ನಿಯೋಜಿಸಲಾದ ರಷ್ಯಾದ ಮಿಲಿಟರಿ ಈಗಾಗಲೇ 300 ಜನರನ್ನು ಒಳಗೊಂಡಿರುವ 10ತಂಡ ಅವಶೇಷ ತೆರವುಗೊಳಿಸಲು ಮತ್ತು ಬದುಕುಳಿದವರನ್ನು ಹುಡುಕಾಟ ನಡೆಸಿದೆ.

ಪೆರುವಿನಲ್ಲಿ ಭೂ ಕುಸಿತು, 36 ಮಂದಿ ಸಾವು

ರಷ್ಯಾದ ಮಾನವೀಯ ನೆರವು ಟರ್ಕಿಗೂ ನೀಡುತ್ತಿದೆ, ಯುದ್ಧದಿಂದ ಧ್ವಂಸಗೊಂಡ ಸಿರಿಯಾಗೆ ್ತ ಎಲ್ಲಾ ಸದಸ್ಯ ರಾಷ್ಟ್ರಗಳು ಆರೋಗ್ಯ ಸೇವೆಗಳು, ಆಶ್ರಯ ಮತ್ತು ಆಹಾರ ಸಹಾಯಕ್ಕಾಗಿ ಸಹಾಯ ಮಾಡಲು ವಿಶ್ವಸಂಸ್ಥೆ ಕರೆ ನೀಡಿದೆ.

ಜರ್ಮನಿ, ಪೊಲ್ಯಾಂಡ್, ಇಟಲಿ, ಪ್ರಾನ್ಸ್, ಜಪಾನ್ ಭಾರತ ಸೇರಿ ಸುಮಾರು 30 ಕ್ಕೂ ಹೆಚ್ಚು ದೇಶಗಳು ಭೂಕಂಪ ಪೀಡಿತ ಪ್ರದೇಶದಲ್ಲಿ ನೆರವು ನೀಡಿದೆ.

Powerful, Earthquakes, Strike ,Turkey, Syria,

Articles You Might Like

Share This Article