ಬೆಂಗಳೂರು, ಜು.11-ಬಕ್ರೀದ್ ಹಬ್ಬದ ಆಚರಣೆ ವೇಳೆ ಗೋ ಹತ್ಯೆ ತಡೆಯಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭುಚೌಹಾಣ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಜಿಲ್ಲೆಗಳಲ್ಲಿ ಗೋ ಶಾಲೆಗೆ ಹಸುಗಳನ್ನು ಕಳುಹಿಸಿ ರಕ್ಷಣೆ ಮಾಡಲಾಗಿದೆ. 15ದಿನಗಳಿಂದ ರಾಜ್ಯ ಪ್ರವಾಸ ಮಾಡಿ, ಚೆಕ್ ಪೋಸ್ಟ್ ಕೂಡ ಹಾಕಲಾಗಿದೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ 25 ಸಾವಿರ ಗೋವುಗಳ ರಕ್ಷಣೆ ಮಾಡಲಾಗಿದೆ ಎಂದರು.
ಗುಲ್ಬರ್ಗದಲ್ಲಿ 25 ಕೇಸ್ ಗಳಾಗಿದೆ. ಕೋಲಾರದಲ್ಲಿ 6ಹಸುಗಳನ್ನ ರಕ್ಷಣೆ ಮಾಡಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಬಕ್ರೀದ್ ನಲ್ಲಿ ಗೋ ವಧೆ ಕಡಿಮೆ ಮಾಡಲಾಗಿದೆ ಎಂದು ಹೇಳಿದರು.
ಯಲ್ಲಾಪುರದಲ್ಲಿ 6 ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ. ಒಟ್ಟು 100ಕ್ಕೂ ಹೆಚ್ಚು ಹಸುಗಳನ್ನ ರಕ್ಷಣೆ ಮಾಡಲಾಗಿದೆ. ನಾಯಿ ಹಾವಳಿ ಕುರಿತು ಸಾಕಷ್ಟು ದೂರು ಬರುತ್ತಿವೆ. ಈ ಬಗ್ಗೆ ಸಭೆ ಮಾಡಲಾಗಿದೆ. ಬಿಬಿಎಂಪಿ ಆಯುಕ್ತರ ಜೊತೆ ಸಭೆ ಮಾಡಲಾಗುವುದು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 3ಲಕ್ಷ ನಾಯಿಗಳಿವೆ. ದಿನಕ್ಕೆ 240 ನಾಯಿಗಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ನಿತ್ಯ 300-400 ನಾಯಿಗಳಿಗೆ ವ್ಯಾಕ್ಷಿನ್ ಹಾಕುವ ಗುರಿ ಹಾಕಿಕೊಳ್ಳಲಾಗಿದೆ. ಎನ್ ಜಿಓಗಳೂ ಕೂಡ ಬೀದಿ ನಾಯಿಗಳ ಹಾವಳಿ ತಡೆಗೆ ಸಹಕಾರ ನೀಡುತ್ತಿವೆ. ನಾಯಿ ಕಡಿತದಿಂದ ಮೃತರಾದರೆ ನೀಡಲಾಗುತ್ತಿದ್ದ ಪರಿಹಾರವನ್ನು 50 ಸಾವಿರದಿಂದ 1ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದರು.