ಆತ್ಮ ನಿರ್ಭರ ಗೋಶಾಲೆ ನಿರ್ಮಾಣಕ್ಕೆ ಕೆಂದ್ರದಿಂದ ಅನುದಾನದ ಭರವಸೆ

Social Share

ದೆಹಲಿ ಫೆ 24 -ರಾಜ್ಯದಲ್ಲಿ ಆತ್ಮ ನಿರ್ಭರ ಗೋಶಾಲೆಯ ಮಾದರಿ ನಿರ್ಮಾಣ ಮಾಡಲು ಕೇಂದ್ರ ಪಶುಸಂಗೋಪನಾ ಸಚಿವ ಪರಶೋತ್ತಮ್ ರೂಪಾಲ್ ಸಲಹೆ ನೀಡಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾದ ನಂತರ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಈ ಮಾಹಿತಿ ನೀಡಿದ್ದಾರೆ.
ಸದ್ಯ ರಾಜ್ಯದಲ್ಲಿ ಪ್ರಾರಂಭ ಮಾಡಿರುವ ಜಿಲ್ಲಾಗೊಂದು ಗೋಶಾಲೆಯನ್ನು ಆತ್ಮ ನಿರ್ಭರ ಗೋಶಾಲೆ ಮಾಡಲು ವ್ಯವಸ್ಥಿತವಾಗಿ ಮಾದರಿ ನಿರ್ಮಾಣ ಮಾಡಿದಲ್ಲಿ ಅದಕ್ಕೆ ಅಗತ್ಯವಿರುವ ಎಲ್ಲ ಅನುದಾನ ನೀಡುತ್ತೇವೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಗೋಶಾಲೆಗಳಲ್ಲಿ ದ್ರವ ಮತ್ತು ಘನ ರೂಪದ ರಸಗೊಬ್ಬರ ತಯಾರಿಕಾ ಘಟಕವನ್ನು ಪ್ರಾರಂಭಿಸಲು ಮನವಿ ಸಲ್ಲಿಸಿದ್ದು, ಇದಕ್ಕೆ ಅಂದಾಜು 20 ಕೋಟಿ ರೂ. ಅನುದಾನ ನೀಡಲು ಕೋರಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೃಷಿ ಜೊತೆಗೆ ಪಶುಸಂಗೋಪನೆಯನ್ನು ಪರ್ಯಾಯ ಕೃಷಿಯಾಗಿ ನಡೆಸುತ್ತಿರುವ ಹಾಗೂ ಜಾನುವಾರು ಸಾಕಣೆಯಲ್ಲಿ ತೊಡಗಿದವರ ಜಾನುವಾರುಗಳು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಪಶುಸಂಗೋಪನೆ ಇಲಾಖೆಯಿಂದ ನೀಡಲಾಗುತ್ತಿರುವ ವಿಮಾ ಸೌಲಭ್ಯ ವನ್ನು ಹೆಚ್ಚಿಸಲು ಮನವಿ ಮಾಡಿದ್ದು 100 ಕೋಟಿ ರೂ.ಅನುದಾನ ನೀಡಲು ಕೇಂದ್ರ ಸಚಿವ ಪರಶೋತ್ತಮ್ ರೂಪಾಲ್ ಅವರಿಗೆ ಕೋರಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪಶುಪಾಲಕರಿಗೆ ಜಾವುವಾರು ಗಳ ಸಾವಿನಿಂದ ಎದುರಾಗುವ ಆರ್ಥಿಕ ನಷ್ಟವನ್ನು ತಪ್ಪಿಸಿ ಪಶುಸಂಗೋಪನೆ ಇಲಾಖೆಯಿಂದ ಈ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪಶುಸಂಜೀವಿನಿ ರಾಜ್ಯದಲ್ಲಿ ಉತ್ತವವಾಗಿ ನಿರ್ವಹಣೆ ಮಾಡುತ್ತಿರುವುದಕ್ಕೆ ಕೇಂದ್ರಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು ಕರ್ನಾಟಕಕ್ಕೆ ನೀಡಿರುವ 275 ಪಶುಸಂಜೀವಿನಿಯನ್ನು ಶೀಘ್ರ ಚಾಲನೆಗೊಳಿಸುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಆರ್ಕೆವಿವೈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಫಲಾನುಭವಿ ಆಧಾರಿತ ಕಾರ್ಯಕ್ರಮ ಇನ್ನಷ್ಟು ಹೆಚ್ಚು ರೈತರಿಗೆ ಒದಗಿಸಲು 200 ಕೋಟಿ ರೂ.ಅನುದಾನ ನೀಡಲು ಕೋರಿರುವುದಾಗಿ ಅವರು ಹೇಳಿದ್ದಾರೆ.

Articles You Might Like

Share This Article