ಚೆಸ್ : ಗುಜರಾತಿಗೆ ಆಘಾತ ನೀಡಿದ ಪ್ರಜ್ಞಾನಂದ

Social Share

ವಿಜ್ಕ್‍ಆನ್ ಝೀ, ಜ.27- ಯುವ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂತ ಅವರು ಸ್ವದೇಶದವರೇ ಆದ ವಿದಿತ್ ಸಂತೋಷ್ ಗುಜರಾತಿ ಅವರ ವಿರುದ್ಧ ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿಯಲ್ಲಿ ಸುದೀರ್ಘ 10ನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದರು.
ತಮಗಿಂತ ಉನ್ನತ ಶ್ರೇಯಾಂಕ ಹೊಂದಿದ ಗುಜರಾತಿ ಅವರಿಗೆ 78 ನಡೆಗಳಲ್ಲಿ ಆಘಾತ ನೀಡಿದ 16 ವರ್ಷದ ಪ್ರಜ್ಞಾನಂದ ಅವರು ಮೂರು ಪಂದ್ಯಗಳ ಸೋಲಿಗೆ ಅಂತ್ಯ ಹಾಡಿದರು. ಇದು ನಿಮ್ಜೋ-ಇಂಡಿಯನ್ ಕ್ಲಾಸಿಕಲ್ ವಿಧದ ಆಟವಾಗಿತ್ತು.
ಎರಡು ಸುತ್ತುಗಳ ಹಿಂದಿನವರೆಗೆ ಅಗ್ರಸ್ಥಾನೀಯರ ಸಾಲಿನಲ್ಲಿದ್ದ ಗುಜರಾತಿ 5.5 ಅಂಕಗಳೊಂದಿಗೆ ಜಂಟಿ ನಾಲ್ಕನೆ ಸ್ಥಾನಕ್ಕೆ ಕುಸಿದರು. ಮತ್ತೊಂದೆಡೆ ಅಂಕಗಳನ್ನು 3.5ಕ್ಕೆ ಸುಧಾರಿಸಿಕೊಂಡರೂ ಪ್ರಜ್ಞಾನಂದ 13ನೆ ಸ್ಥಾನದಲ್ಲಿ ನಿಂತರು.
ಅಗ್ರಸ್ಥಾನೀಯರ ಗುಂಪಿನಲ್ಲಿದ್ದ ಎಲ್ಲಾ ಆಟಗಾರರು ತಮ್ಮ 10ನೇ ಸುತ್ತಿನ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರಿಂದ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‍ಸನ್ ಅವರು ಏಳು ಪಾಯಿಂಟ್‍ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಕಾರ್ಲ್‍ಸನ್ ಮತ್ತು ಸೆರ್ಗೆಯಿ ಕಜಾಕಿನ್ ಅವರು ಈ ವರ್ಷದ ಟೂರ್ನಮೆಂಟ್‍ನಲ್ಲಿ ನಡೆದ ಅತ್ಯಂತ ಕಡಿಮೆ ಅವಯ ಪಂದ್ಯವೊಂದನ್ನು ಆಡಿದರು. ಈ ಪಂದ್ಯ ಕೇವಲ 16 ನಡೆಗಳಲ್ಲಿ ಮುಗಿದುಹೋಯಿತು.

Articles You Might Like

Share This Article