ಯುಕ್ರೇನನ ಕ್ಲಿಷ್ಟಕರ ಸನ್ನಿವೇಶದಲ್ಲಿ ಭಾರತೀಯರನ್ನು ರಕ್ಷಿಸಿ ಕರೆತರಲಾಗಿದೆ : ಪ್ರಹ್ಲಾದ್ ಜೋಶಿ

Social Share

ಬೆಳಗಾವಿ,ಫೆ.28- ಬಹಳ ಕ್ಲಿಷ್ಟಕರ ವಿಷಮ ಸನ್ನಿವೇಶದಲ್ಲಿ ಯುಕ್ರೇನನಿಂದ ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ತರಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪೋಲಂಡ, ರೊಮೇನಿಯಾ ಅಂತಹ ದೇಶಗಳ ಸಹಯೋಗ ಪಡೆಯಲಾಗುತ್ತಿದೆ.
ಯುದ್ಧದಲ್ಲಿ ತೊಡಗಿರುವ ಯುಕ್ರೇನ್ ರಷ್ಯಾಗಳ ಜೊತೆಗೂ ಭಾರತ ಮಾತನಾಡುತ್ತಿದೆ. ವಿದೇಶಾಂಗ ಸಚಿವಾಲಯ ಮತ್ತು ಕೇಂದ್ರ ವಿಮಾನಯಾನ ಸಚಿವಾಲಯಗಳು ಭಾರತೀಯರನ್ನು ದೇಶಕ್ಕೆ ಕರೆತರಲು ಎಡೆಬಿಡದ ಪ್ರಯತ್ನ ನಡೆಸಿವೆ ಎಂದರು.
ನಿರೀಕ್ಷೆಗೂ ಮೀರಿ ಬಹುಮುಂಚೆಯೇ ಯುದ್ಧ ಪ್ರಾರಂಭವಾಗಿದ್ದರಿಂದ ನಮ್ಮ ನಾಗರಿಕರು ಯುಕ್ರೇನನಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನೂ ಸಿಲುಕಿಕೊಂಡವರನ್ನು ಬಹಳ ಉಪಾಯದಿಂದ ರಕ್ಷಿಸಿ ತರಬೇಕಿದೆ. ನನಗೆ ವೈಯಕ್ತಿಕವಾಗಿ ಬರುತ್ತಿರುವ ಫೋನ್ ಕಾಲ್ ಗಳನ್ನು ಸಹ ನಾನು ಗಂಭೀರವಾಗಿ ಪರಿಗಣಿಸಿ ಸಹಾಯ ಮಾಡುವ ಕಾರ್ಯ ಮಾಡುತ್ತಿದ್ದೇನೆ ಎಂದರು.
ಯುಕ್ರೇನನಿಂದ ಉಚಿತವಾಗಿ ಕರೆತರಲಾಗುತ್ತಿರುವ ನಮ್ಮ ವಿದ್ಯಾರ್ಥಿಗಳನ್ನು ದೆಹಲಿ ಮುಂಬೈ ನಗರಗಳಲ್ಲಿ ಬಿಡಲಾಗುತ್ತಿದೆ. ಅಲ್ಲಿಂದ ಅವರು ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಗಳ ಸಹಾಯದಿಂದ ಊರು ಸೇರುತ್ತಿದ್ದಾರೆ ಎಂದರು.

Articles You Might Like

Share This Article