9 ತಿಂಗಳಲ್ಲಿ 100 ಕೋಟಿ ಲಸಿಕೆ ನೀಡಲು ಮೋದಿಜಿ ದೃಢ ಸಂಕಲ್ಪ ಕಾರಣ : ಜೋಷಿ
ನವದೆಹಲಿ, ಅ.21- ಕೇವಲ ಒಂಬತ್ತು ತಿಂಗಳಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪದೊಂದಿಗೆ ಭಾರತದಲ್ಲಿ 100 ಕೋಟಿಗೂ ಅಧಿಕ ಜನರಿಗೆ ಕೊರೊನಾ ಲಸಿಕೆಯನ್ನು ನೀಡಿರುವುದು ಜಗತ್ತಿನಲ್ಲೇ ಹೊಸ ಮೈಲಿಗಲ್ಲು ಸಾಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಇದೊಂದು ಅದ್ವಿತೀಯ ಸಾಧನೆಯಾಗಿದ್ದು , ಈ ಕಾರ್ಯದಲ್ಲಿ ಶ್ರಮಿಸಿದ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳಿಗೆ, ಕೊರೊನಾ ವಾರಿಯರ್ಸ್ಗಳಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿರುವುದು ಹೆಮ್ಮೆ ತಂದಿದೆ ಎಂದು ಅವರು ಹೇಳಿದ್ದಾರೆ.
Facebook Comments