ಮಂಗಳೂರಿಗೆ ಬಂದ ಪ್ರಮೋದ್ ಮುತಾಲಿಕ್ ಪೊಲೀಸ್ ವಶಕ್ಕೆ

Social Share

ಮಂಗಳೂರು, ಜು.29- ಮಂಗಳೂರಿಗೆ ಆಗಮಿಸಿದ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಅವರ ಮೃತನ ಮನೆಗೆ ಭೇಟಿ ನೀಡಿ ಸ್ವಾಂತ್ವಾನ ಹೇಳಲು ಮಂಗಳೂರಿಗೆ ಆಗಮಿಸಿದ್ದರು.

ಈ ವೇಳೆ ಜಿಲ್ಲಾಕಾರಿಗಳು ಮುತಾಲಿಕ್ರವರ ಜಿಲ್ಲಾ ಪ್ರವೇಶವನ್ನು ನಿಷೇಸಿ ಆದೇಶ ಹೊರಡಿಸಿದರು. ಆದರೂ ಆಗಮಿಸಿದ್ದ ಪ್ರಮೋದ್ ಮುತಾಲಿಕರನ್ನು ಹೆಜಮಾಡಿ ಟೋಲ್ ಬಳಿ ತಡೆದು ಪೊಲೀಸರು ವಶಕ್ಕೆ ಪಡೆದು ಕೊಂಡರು.
ಇದನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.

ಪ್ರಮೋದ್ ಮುತಾಲಿಕ್ ಉಗ್ರರಲ್ಲ. ಅವರ ಭೇಟಿಗೆ ಅವಕಾಶ ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಈ ವೇಳೆ ರಾಜಕೀಯ ನಾಯಕರ ವಿರುದ್ಧವೂ ಆಕ್ರೋಶ ಕೇಳಿ
ಬಂದಿದೆ.

ತಮ್ಮ ಲಾಭಕ್ಕಾಗಿ ರಾಜಕೀಯ ನಾಯಕರು ಹಿಂದೂ ಕಾರ್ಯಕರ್ತರನ್ನು ಬಲಿ ಕೊಡುತ್ತಿದ್ದಾರೆ ಎಂಬ ಆರೋಪಗಳು, ಆಕ್ರೋಶ ವ್ಯಕ್ತವಾಗಿದೆ.

Articles You Might Like

Share This Article