ಒವೈಸಿ ವಿರುದ್ಧ ಮುತಾಲಿಕ್ ಆಕ್ರೋಶ

ಹುಬ್ಬಳ್ಳಿ, ಡಿ.7- ಹೈದರಾಬಾದ್‍ನಲ್ಲಿ ಪಶುವೈದ್ಯೆ ದಿಶಾ ಅವರನ್ನು ಅತ್ಯಾಚಾರವೆಸಗಿ ಸಜೀವದಹನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪೊಲೀಸ್ ಎನ್‍ಕೌಂಟರ್ ಸ್ವಾಗತಾರ್ಹವಾಗಿದೆ. ಆದರೆ, ಇದನ್ನು ಒವೈಸಿ ಸೇರಿದಂತೆ ಕೆಲವರು ವಿರೋಧಿಸುತ್ತಿರುವುದು ಖಂಡನೀಯ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಶಾ ಅವರನ್ನು ಅತ್ಯಾಚಾರ ಮಾಡಿ ಸಜೀವ ದಹನ ಮಾಡಿದ ಸಂದರ್ಭದಲ್ಲಿ ಯಾರೂ ಮಾತನಾಡಲಿಲ್ಲ. ಶೋಕ ಸಂದೇಶವನ್ನೂ ನೀಡಲಿಲ್ಲ. ಆದರೆ, ಇದೀಗ ಅತ್ಯಾಚಾರಿಗಳ ಎನ್‍ಕೌಂಟರ್‍ಅನ್ನು ದೇಶವೇ ಸ್ವಾಗತಿಸುತ್ತಿರುವಾಗ ಪಿ.ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ, ಮೇನಕಾ ಗಾಂಧಿ, ಒವೈಸಿ ಇದನ್ನು ವಿರೋಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹರಿಹಾಯ್ದರು.

ದೇಶದ ಭದ್ರತೆ ದೃಷ್ಟಿಯಿಂದ ಎನ್‍ಕೌಂಟರ್ ಮಾದರಿಯಾಗಿದ್ದು, ಈ ಹಿನ್ನೆಲೆಯಲ್ಲಿ ದೇಶವೇ ಸ್ವಾಗತಿಸಿದೆ. ಆದರೆ, ಒವೈಸಿಯವರು ವಿರೋಧ ವ್ಯಕ್ತಪಡಿಸಿ ಪೊಲೀಸ್ ಇಲಾಖೆ ವಿರುದ್ಧ ತಿರುಗಿಬಿದ್ದಿರುವುದು ಸರಿಯಲ್ಲ ಎಂದು ಅವರು ಹೇಳಿದರು.