ಪಾಟ್ನಾ,ಡಿ.10- ಬಿಹಾರದ ಕುರ್ಹಾನಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಮುಖ್ಯಮಂತ್ರಿ ನಿತೀಶ್‍ಕುಮಾರ್ ಮತ್ತು ಅವರ ಮಹಾಘಟಬಂಧನದ ವೈಫಲ್ಯದ ಪ್ರತಿಬಿಂಬವಾಗಿದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
ಬಿಹಾರದಲ್ಲಿ 3500 ಕಿ.ಮೀ ಉದ್ದದ ಪಾದಯಾತ್ರೆ ನಡೆಸುತ್ತಿರುವ ಅವರು, ಬಿಹಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದಾಗಿ ಇಲ್ಲಿನ ಜನ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಾಘಟಬಂಧನ್ ಸರ್ಕಾರದ ಕಾರ್ಯಕ್ಷಮತೆಯಿಂದ ಜನರು ಸಂತೋಷವಾಗಿಲ್ಲ, ನಾನು ಕಳೆದ ಹಲವಾರು ದಿನಗಳಿಂದ ಜನರೊಂದಿಗೆ ಸಂವಹನ ನಡೆಸುತ್ತಿದ್ದೇನೆ ಮತ್ತು ನಾನು ಹೇಳಬಲ್ಲೇ. ಸರ್ಕಾರದ ವ್ಯಾಪಕ ಭ್ರಷ್ಟಾಚಾರದಿಂದ ಅವರು ಬೇಸತ್ತಿದ್ದಾರೆ ಇದರ ಪರಿಣಾಮವೇ ಉಪಚುನಾವಣೆಗೆ ಸೋಲಿಗೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.
ಗಡಿ ಸಂಘರ್ಷ : ಸೋಮವಾರ ಅಮಿತ್ ಷಾ ಜತೆ ಸಂಸದರ ಮಾತುಕತೆ
ಡಿಸೆಂಬರ್ 5 ರ ಚುನಾವಣೆಗೆ ಎರಡು ದಿನಗಳ ಮೊದಲು ನಿತೀಶ್ ಕುಮಾರ್ ಕುರ್ಹಾನಿಯಲ್ಲಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದಾಗ ಪ್ರತಿಭಟನೆ ಎದುರಿಸಬೇಕಾಯಿತು. ಪ್ರತಿಭಟನಾಕಾರರು ಗದ್ದಲವನ್ನು ಸೃಷ್ಟಿಸಿದರು, ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಕುರ್ಚಿಗಳನ್ನು ಎಸೆದರು.
ಇಷ್ಟು ದಿನ ನೀವು ಪೂಜಿಸಿದ ವಿಗ್ರಹ ಹಿಂದೂ ದೇವರಲ್ಲ. ಅದು ಬುದ್ಧನ ಶಿಲ್ಪ : ಮದ್ರಾಸ್ ಹೈಕೋರ್ಟ್
ಇದನ್ನು ಗಮನಿಸಿದರೆ ಭದ್ರತಾ ಸಿಬ್ಬಂದಿಗಳಿಲ್ಲದೆ ಮುಖ್ಯಮಂತ್ರಿಗಳು ಒಂದು ಸಣ್ಣ ಹಳ್ಳಿಗೆ ಹೋಗಲು ಸಾಧ್ಯವಿಲ್ಲ ಎನ್ನುವುದಾದರೆ ಬಿಹಾರದಲ್ಲಿ ಎಂತಹ ಪರಿಸ್ಥಿತಿ ಇದೆ ಎನ್ನುವುದನ್ನು ನೀವೆ ಊಹಿಸಿ ಎಂದು ಅವರು ಪ್ರಶ್ನಿಸಿದ್ದಾರೆ.
Prashant Kishor, Shreds, Nitish Kumar, Blames ‘Mahagathbandhan’ Poll Loss,