ಹಿಮಾಚಲ ಗೆದ್ದ ಕಾಂಗ್ರೆಸ್ : ಸಿಎಂ ಆಯ್ಕೆ ಗೊಂದಲದ ನಡುವೆ ಆಪರೇಷನ್ ಭಯ

Social Share

ಶಿಮ್ಲಾ,ಡಿ.9-ಹಿಮಾಚಲ ಪ್ರದೇಶದಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಗೊಂದಲಕ್ಕೊಳಗಾಗಿದ್ದು, ಮತ್ತೊಂದೆಡೆ ಬಿಜೆಪಿಯ ಆಪರೇಷನ್ ಕಮಲದ ಭಯದಿಂದ ನಿದ್ದೆಗೆಡುವಂತಾಗಿದೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಹುದ್ದೆಯ ಮೇಲೆ ಪ್ರಮುಖ ನಾಲ್ವರು ನಾಯಕರು ಕಣ್ಣಿಟ್ಟಿದ್ದು , ಸರ್ವಸಮ್ಮತ ಅಭ್ಯರ್ಥಿಯ ಆಯ್ಕೆ ಸವಾಲನ್ನು ಸೃಷ್ಟಿಸಿದೆ. ಇಂದು ಸಂಜೆ ಶಿಮ್ಲಾದ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ ನಡೆಯಲಿದೆ.

ರಾಜ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನಕಾರ್ಯದರ್ಶಿ ರಾಜೀವ್ ಶುಕ್ಲ, ಛತ್ತೀಸ್‍ಗಢದ ಮುಖ್ಯಮಂತ್ರಿ ಭೂಪೇಶ್ ಬಗೇಲ್, ಹಿರಿಯ ನಾಯಕ ಭೂಪೇಂದ್ರ ಹೂಡ ಅವರು ಸಭೆಯಲ್ಲಿ ಉಸ್ತುವಾರಿಯಾಗಿದ್ದಾರೆ.

ಮುಖ್ಯಮಂತ್ರಿ ರೇಸ್‍ನಲ್ಲಿ ಪ್ರಮುಖವಾಗಿ ರಾಜ್ಯ ಕಾಂಗ್ರೆಸ್‍ನ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರ ಹೆಸರು ಕೇಳಿ ಬಂದಿದೆ. ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರಾಗಿದ್ದ ದಿವಂಗತ ವೀರಭದ್ರಸಿಂಗ್ ಅವರ ಪತ್ನಿ ಪ್ರತಿಭಾಸಿಂಗ್ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಿಲ್ಲ. ಆದರೆ, ಪಕ್ಷವನ್ನು ಮುನ್ನಡೆಸುವಲ್ಲಿ ಮತ್ತು ವ್ಯವಸ್ಥಿತ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಕ್ಷ ಅಧಿಕಾರಕ್ಕೆ ಬಂದ ಕೀರ್ತಿಯಲ್ಲಿ ಪ್ರಮುಖ ಪಾಲನ್ನು ಬಯಸಿ ಮುಖ್ಯಮಂತ್ರಿ ರೇಸ್‍ನಲ್ಲಿ ನಿಂತಿದ್ದಾರೆ ಎನ್ನಲಾಗಿದೆ.

ಮೇಲ್ಛಾವಣಿ ಸೌರ ವಿದ್ಯುತ್ ಯೋಜನೆ ಮೂಲಕ ಕೊಂಕಣ ರೈಲ್ವೆಗೆ 31 ಲಕ್ಷ ರೂ.ಉಳಿತಾಯ

ಹಾಲಿ ಸಂಸದರಾಗಿರುವ ಪ್ರತಿಭಾ ಸಿಂಗ್ ಮುಖ್ಯಮಂತ್ರಿಯಾಗಿದ್ದೇ ಆದರೆ ಅವರಿಗಾಗಿ ಕ್ಷೇತ್ರ ಬಿಟ್ಟುಕೊಡಲು ಅವರ ಪುತ್ರ ಹಾಗೂ ಶಿಮ್ಲಾ ಗ್ರಾಮಾಂತರ ಕ್ಷೇತ್ರದ ಶಾಸಕ ವಿಕ್ರಮಾದಿತ್ಯ ಸಿಂಗ್ ತಯಾರಾಗಿದ್ದಾರೆ ಎನ್ನಲಾಗಿದೆ. ವೀರಭದ್ರಸಿಂಗ್ ಅವರು ಕಾಂಗ್ರೆಸ್‍ನಲ್ಲಿ ಮೂರು ದಶಕಗಳ ಕಾಲ ನಿಷ್ಠಾವಂತ ನಾಯಕರಾಗಿದ್ದರು, ಕಳೆದ ವರ್ಷ ಅವರ ನಿಧನದ ಬಳಿಕ ಪ್ರತಿಭಾಸಿಂಗ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ದರು.

ಪಕ್ಷ ಮಾಜಿ ಅಧ್ಯಕ್ಷರಾಗಿದ್ದ ಸುಖ್ವೀಂದರ್‍ಸಿಂಗ್ ಶುಕು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಮುಖೇಶ್ ಅಗ್ನಿಹೋತ್ರಿ ಹಾಗೂ ಹಿರಿಯ ನಾಯಕ ಹರ್ಷವರ್ಧನ್ ಚೌವ್ಹಾಣ್ ಅವರು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವ ಯತ್ನ ನಡೆಸುತ್ತಿದ್ದಾರೆ. ತೆರೆಮರೆಯಲ್ಲಿ ಶಾಸಕರ ಬೆಂಬಲ ಗಿಟ್ಟಿಸಲು ಚುಟಿವಟಿಕೆಗಳನ್ನು ಆರಂಭಿಸಿದ್ದಾರೆ.

ಮುಖೇಶ್ ಅಗ್ನಿಹೋತ್ರಿ ಪಕ್ಷದ ಉನ್ನತ ಹುದ್ದೆಗೆ ಅರ್ಹರು ಎಂದು ಭಾವಿಸಲಾಗಿದೆ. ಪಕ್ಷದ ಮತ್ತೊಬ್ಬ ಮಾಜಿ ಅಧ್ಯಕ್ಷ ಕುಲ್‍ದೀಪ್ ಸಿಂಗ್ ರಾಥೋಡ್ ಸಿಎಂ ಆಗುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಪ್ರತಿಭಾ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ವೇಳೆ ಹುದ್ದೆ ತೆರವು ಮಾಡಿಕೊಟ್ಟ ರಾಥೋಡ್ ಅಸಮಾಧಾನಗೊಂಡು ಬಂಡಾಯದ ಬಾವುಟ ಹಿಡಿದಿದ್ದರು. ಅವರನ್ನು ಸಮಾಧಾನಪಡಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲಾಗಿತ್ತು. ಈಗ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.

ಕಾಂಗ್ರೆಸ್‍ನ ಬೆಳವಣಿಗೆಗಳನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಯಾವುದೇ ಹಂತದಲ್ಲಾದರೂ ಅಖಾಡಕ್ಕಿಳಿದು ಆಪರೇಷನ್ ಕಮಲ ನಡೆಸುವ ಚಿಂತ ಕಾಡಲಾರಂಭಿಸಿದೆ. ಈ ಹಿಂದೆ ಚುನಾಯಿತ ನೂತನ ಶಾಸಕರನ್ನು ಚಂಡೀಗಢ ಅಥವಾ ಯಾರ್‍ಪುರಕ್ಕೆ ಸ್ಥಳಾಂತರಿಸುವ ಸಾಧ್ಯತೆಗಳಿವೆ.

ಸಂಸತ್‍ನಲ್ಲಿ ಏಕರೂಪ ನಾಗರೀಕತೆ ಮಸೂದೆ ಪ್ರಸ್ತಾಪ ನಿರೀಕ್ಷೆ

ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್‍ನಲ್ಲಿನ ಮುಖ್ಯಮಂತ್ರಿ ಪೈಪೋಟಿ ಕುರಿತು ಲೇವಡಿಯ ಮಾತುಗನ್ನಾಡಿದ್ದಾರೆ. ಶಿಮ್ಲಾದಲ್ಲಿ ನಡೆಯುವ ಇಂದಿನ ಸಭೆಯಲ್ಲಿ ಮುಂದಿನ ಸಿಎಂ ಸ್ಪಷ್ಟ ಸೂಚನೆ ಸಿಗುವ ನಿರೀಕ್ಷೆಗಳಿವೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರತಿಭಾಸಿಂಗ್ ಪುತ್ರ ವಿಕ್ರಂಆದಿತ್ಯ ಸಿಂಗ್, ಪ್ರತಿಭಾ ಅವರು ಶೀಘ್ರವೇ ದೊಡ್ಡ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇದರ ಹೊರತಾಗಿ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಿಗೆ ನಮ್ಮ ಕುಟುಂಬ ಬದ್ಧವಾಗಿರುತ್ತದೆ.

ಚಂಡಮಾರುತ : ತಮಿಳುನಾಡು ಪುದುಚರಿ ಕರಾವಳಿಯಲ್ಲಿ ಭಾರಿ ಕಟ್ಟೆಚ್ಚರ

ಆದರೆ, ಜನರ ಆಕಾಂಕ್ಷೆಗಳನ್ನು ಪಕ್ಷದ ನಾಯಕತ್ವ ಅರ್ಥಮಾಡಿಕೊಳ್ಳಲಿದೆ ಎಂಬ ವಿಶ್ವಾಸವಿದೆ. ನಾವು ವೀರಭದ್ರ ಅವರ ಹಾದಿಯಲ್ಲೇ ಹೆಜ್ಜೆ ಹಾಕುತ್ತಿದ್ದೇವೆ. ಅವರ ಅಭಿವೃದ್ಧಿ ಮಾದರಿಯನ್ನು ಅನುಸರಿಸಿದ್ದರಿಂದಾಗಿ ಶಿಮ್ಲಾ ಇಂದು ಸ್ವರ್ಗವಾಗಿ ಉಳಿದಿದೆ ಎಂದಿದ್ದಾರೆ.

Pratibha Singh, Sukhu, Agnihotri, lead race, Congress CM, Himachal,

Articles You Might Like

Share This Article