‘ಪ್ರವಾಸಿ ಭಾರತೀಯ ದಿವಸ್’ : ಪ್ರಧಾನಿ ಮೋದಿ ಶುಭಾಶಯ

Social Share

ನವದೆಹಲಿ, ಜ.9- ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಸಿ ಭಾರತೀಯ ದಿವಸದ ಸಂದರ್ಭದಲ್ಲಿ ಭಾರತೀಯ ಸಮುದಾಯವನ್ನು ಪ್ರಶಂಸಿಸಿದ್ದಾರೆ.ಪ್ರತಿಯೊಬ್ಬರಿಗೂ ವಿಶೇಷವಾಗಿ ವಿಶ್ವದಾದ್ಯಂತ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಪ್ರವಾಸಿ ಭಾರತೀಯ ದಿವಸದ ಶುಭಾಶಯಗಳು. ನಮ್ಮ ಸಮುದಾಯವು ವಿಶ್ವದೆಲ್ಲೆಡೆ ಚದುರಿದ್ದು, ಎಲ್ಲೆಡೆ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.
ಎಲ್ಲ ಕ್ಷೇತ್ರಗಳಲ್ಲಿ ಪರಿಣತಿ ಸಾಸಿದೆ. ಅದೇ ವೇಳೆ ಅವರು ತಮ್ಮ ಗುರಿ ಸಾಧನೆಗೆ ಪರಸ್ಪರ ಸಂಪರ್ಕಿತರಾಗಿದ್ದಾರೆ. ನಾವು ಅವರ ಸಾಧನೆಗಳಿಗೆ ಹೆಮ್ಮೆ ಪಡುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರವಾಸಿ ಭಾರತೀಯ ದಿವಸವನ್ನು ಪ್ರತಿವರ್ಷ ಜನವರಿ 9ರಂದು ಆಚರಿಸಲಾಗುತ್ತಿದ್ದು, ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಕೊಡುಗೆಯನ್ನು ಅಂದು ಸ್ಮರಿಸಿ ಗೌರವಿಸಲಾಗುತ್ತದೆ.
1915ರ ಜನವರಿ 9ರಂದು ಮಹಾತ್ಮಗಾಂೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸಾದರು. ಅನಂತರ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತವನ್ನು ಮುನ್ನಡೆಸಿದ್ದು ಇತಿಹಾಸ.

Articles You Might Like

Share This Article