ಪ್ರವೀಣ್ ನೆಟ್ಟಾರು ಹತ್ಯೆ : ಮತ್ತೋರ್ವ ಆರೋಪಿಯನ್ನು ಬಂಧಿಸಿದ NIA

Social Share

ಬೆಂಗಳೂರು, ಮಾ.5- ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತಲೆಮರೆಸಿಕೊಂಡಿದ್ದ ಪ್ರಮುಖ ಮತ್ತೋರ್ವ ಆರೋಪಿಯನು ಬಂಧಿಸಿದ್ದಾರೆ.

ನಿಷೇಧಿತ ಪಿಎಫ್‍ಐ ಸದಸ್ಯ ಮಡಿಕೇರಿ ಮೂಲದ ತೌಫಿಲ್‍ನನ್ನು ಮಿಂಚಿನ ಕಾರ್ಯಕಾರಣಿ ನಡೆಸಿದ ಎನ್‍ಐಎ ಅಧಿಕಾರಿಗಳು ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಬಂಧಿಸಲಾಗಿದೆ. ತೌಫಿಲ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಎನ್‍ಐಎ ಘೋಷಣೆ ಮಾಡಿತ್ತು ಎಂಬುದು ವಿಶೇಷ.

ಖಚಿತ ಮಾಹಿತಿ ಮೇರೆಗೆ ಸುಮಾರು 10ಕ್ಕೂ ಹೆಚ್ಚು ಎನ್‍ಐಎ ಅಧಿಕಾರಿಗಳು ತೌಫಿಲ್ ಮನೆ ಬಳಿಗೆ ಹೋಗಿದ್ದಾರೆ. ನಂತರ ಇಬ್ಬರು ಅಧಿಕಾರಿಗಳು ಫ್ಲಂಬರ್ ಅಂತ ಕೈಯಲ್ಲಿ ರಿಂಚ್ ಹಿಡಿದು ಮನೆ ಒಳಗೆ ಹೋಗಿದ್ದಾರೆ. ಈ ವೇಳೆ ತೌಫಿಲ್ ಮಟನ್ ಕತ್ತರಿಸುತ್ತಿರುವುದು ಕಂಡುಬಂದಿದೆ.

ಕೆಲವರು ಭಾರತದ ಘನತೆ ಹಾಳುಮಾಡಲು ಯತ್ನಿಸುತ್ತಿದ್ದಾರೆ : ಕಿರಣ್ ರಿಜಿಜು

ನಂತರ ಮತ್ತಿಬ್ಬರು ಒಳಗೆ ಬಂದಿದ್ದನ್ನು ನೋಡಿದ ತೌಫಿಲ, ಚಾಕುವಿನಿಂದ ಹಲ್ಲೇ ಮಾಡಲು ಯತ್ನಿಸಿದ್ದಾನೆ. ಇದನ್ನು ತಿಳಿದ ಉಳಿದ ಅಧಿಕಾರಿಗಳು ಏಕಕಾಲಕ್ಕೆ ಒಳಗೆ ಬಂದು ತೌಘಿಲ್ನನ್ನು ಲಾಕ್ ಮಾಡಿ, ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಸ್ಥಳೀಯ ಪೊಲೀಸರಿಗೆ ಎನ್‍ಐಎ ಅಧಿಕಾರಿಗಳು ಸಣ್ಣ ಸುಳಿವು ಕೂಡ ಕೊಡದೆ ಕಾರ್ಯಾಚಾರಣೆ ನಡೆಸಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ಅವರು ಜುಲೈ 26 ರಂದು ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ತಕ್ಷಣ ಪುತ್ತೂರು ಆಸ್ಪತ್ರೆಗೆ ಪ್ರವೀಣ್ ಅವರನ್ನು ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದ ಕಾರಣ ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈವರೆಗೆ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಚೀನಾ ರಕ್ಷಣಾ ಬಜೆಟ್ ಮತ್ತಷ್ಟು ಹೆಚ್ಚಳ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಬಗ್ಗೆ ತನಿಖೆ ನಡೆಸಿದ್ದ ಎನ್‍ಐಎ ಆರೋಪ ಪಟ್ಟಿ ಸಲ್ಲಿಸಿತ್ತು. 2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ತನ್ನ ಅಜೆಂಡಾವನ್ನು ಬಲಪಡಿಸಲು ಸಮಾಜದಲ್ಲಿ ಅಶಾಂತಿ, ಭಯ ಹಾಗೂ ಕೋಮು ದ್ವೇಷವನ್ನು ಬಿತ್ತುವ ತನ್ನ ಉದ್ದೇಶದ ಭಾಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ), ತನ್ನ ಶತ್ರುಗಳೆಂದು ಗ್ರಹಿಸಿದವರು ಮತ್ತು ಗುರಿಗಳನ್ನು ಕೊಲ್ಲುವ ಕಾರ್ಯಗಳನ್ನು ನಡೆಸುವ ಸಲುವಾಗಿಯೇ ಸರ್ವೀಸ್ ಟೀಮ್ಸ ಅಥವಾ ಕಿಲ್ಲರ್ ಸ್ಕ್ವಾಡ್‍ಗಳೆಂದು ಕರೆಯುವ ರಹಸ್ಯ ತಂಡಗಳನ್ನು ರಚಿಸಿದೆ ಎಂದು ತನಿಖೆಯಿಂದ ಬಯಲಾಗಿದೆ.

Praveen Nettaru, murder, case, NIA, arrests, accused, Tufail,

Articles You Might Like

Share This Article