ಬೆಂಗಳೂರು, ಜು.27- ಕೇವಲ ಅಧಿಕಾರ ಮಾಡಲು ನಾವು ಬಂದಿಲ್ಲ. ಪಕ್ಷದ ಕಾರ್ಯಕರ್ತರೊಂದಿಗೆ ನಾವೂ ಇದ್ದೇವೆ. ಅವರ ಭಾವನೆ ಜೊತೆಗೆ ನಾವೂ ನಿಲ್ಲುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರು, ಹರ್ಷ, ಪ್ರವೀಣ್ ನಾಳೆ ಇನ್ಯಾರೋ.? ಜಿಹಾದಿ ಮಾನಸಿಕತೆಗೆ ಕೊನೆಯೇ ಇಲ್ಲವೇ ಅನ್ನೋ ಪ್ರಶ್ನೆ ಕಾಡ್ತಿದೆ. ನಾವು ಮಾಡ್ತಾನೆ ಇರ್ತೀವಿ, ಕಠಿಣ ಕ್ರಮ ತೆಗೆದುಕೊಳ್ಳಿ ನೋಡೋಣ ಅನ್ನೋ ಮನಸ್ಥಿತಿ ಅವರದ್ದು. ಕೇಂದ್ರ-ರಾಜ್ಯದಲ್ಲಿ ಎರಡೂ ಕಡೆ ನಾವೆ ಇದ್ದರೂ ಏನೂ ಮಾಡಲಾಗ್ತಿಲ್ಲ. ಸಿಎಂ ಭೇಟಿ ಮಾಡಿ ಮನವಿ ಮಾಡುತ್ತೇನೆ. ಕಠಿಣ ಕ್ರಮ ಕೈಗೊಳ್ಳುವುದರ ಜೊತೆ, ಅಪರಾಧಿಗಳನ್ನ ಬಂಧಿಸಲು ಮನವಿ ಮಾಡ್ತೇನೆ ಎಂದು ತಿಳಿಸಿದರು.
ವ್ಯವಸ್ಥೆಯನ್ನ ಜಿಹಾದ್ ವಿರುದ್ಧ ಹೋರಾಟ ಮಾಡಲು ಅಣಿಗೊಳಿಸಬೇಕು. ಅಮರಾವತಿ, ಉದಯ್ ಪುರದಲ್ಲಿ ನಡೆದ ಘಟನೆಯ ಒಂದು ಭಾಗ ಇದು ಎಂದ ಅವರು, ಪ್ರವೀಣ್ ನೆಟ್ಟಾರು ಒಬ್ಬ ಮಾನವೀಯ ಕಳಕಳಿ ಇರುವ ವ್ಯಕ್ತಿ. ಪ್ರಾಣಿಗೂ ಯಾವುದೇ ಸಮಸ್ಯೆ ಮಾಡದ ವ್ಯಕ್ತಿ. ಅವರಿಗೆ ನಾನು ಶಬ್ದಗಳಲ್ಲಿ ಸಂತಾಪ ಸೂಚಿಸುವುದಿಲ್ಲ ಎಂದರು.
ಸಿದ್ದರಾಮಯ್ಯ ಕಾಲದಲ್ಲೂ ಸರಣಿ ಹತ್ಯೆ ನಡೆಯುತ್ತಿತ್ತು. ಈಗಲೂ ಅದೇ ರೀತಿ ನಡೆಯುತ್ತಿದೆ. ಅನ್ನುವ ಆರೋಪವಿದೆ. ಹಿಂದೆ ಹಿಂದೂ ವಿರೋಧಿ ಸರ್ಕಾರವಿತ್ತು. ಈಗ ಹಿಂದೂಪರ ಸರ್ಕಾರವಿದೆ. ಆದರೂ, ಹೀಗಾಗ್ತಿದೆ ಅನ್ನೋ ಆತಂಕ ಕಾರ್ಯಕರ್ತರದ್ದು.
ನಾವು ಸಮರ್ಥನೆ ಮಾಡಿ ಕೊಳ್ಳೋದಿಲ್ಲ. ಜಿಹಾದ್ ಕಿತ್ತುಹಾಕಲು ನಾವು ಬದ್ದರಿದ್ದೇವೆ. ನಾವೀಗ ಆಕ್ಷನ್ ಮಾಡದಿದ್ರೆ ನಾವೇ ಹೊಣೆ ಹೊರಬೇಕಾಗುತ್ತದೆ. ಹಿಂದಿನ ಸರ್ಕಾರ ಓಟ್ ಬ್ಯಾಂಕ್‍ಗಾಗಿ ಓಲೈಕೆ ಮಾಡ್ತಿತ್ತು. ನಾವು ಆ ರೀತಿ ಯಾವುದೇ ಓಲೈಕೆ ಮಾಡಲ್ಲ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ಸಿಎಂ ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದು ವಿವರಿಸಿದರು.
ಬಿಜೆಪಿ ಸರ್ಕಾರ ಬಂದು ಮೂರು ವರ್ಷವಾಗಿದೆ. ಯಡಿಯೂರಪ್ಪ ಎರಡು ವರ್ಷ, ಬೊಮ್ಮಾಯಿ ಒಂದು ವರ್ಷ. ಅನೇಕ ಯೋಜನೆಗಳನ್ನು ತರಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಸಿದ್ದರಾಮಯ್ಯ ಕೊಡಲಿಲ್ಲ. ಪ್ರಧಾನಿ ಮೋದಿ ಕೊಟ್ಟಿದ್ದು. ಅನ್ನ ಭಾಗ್ಯ ಅನ್ನಭಾಗ್ಯ ಅಂತಾರೆ, ಶೇ. 80ರಷ್ಟು ಕೊಟ್ಟಿದ್ದು ಕೇಂದ್ರ ಸರ್ಕಾರ ಎಂದು ಟೀಕಿಸಿದರು.
ಬಿಜೆಪಿಯ ಜನೋತ್ಸವಕ್ಕೆ ಟೀಕೆ ಮಾಡ್ತಾರೆ, ಹಾಗಾದ್ರೆ ಸಿದ್ದರಾಮೋತ್ಸವ ಮಾಡ್ತಿದ್ದಾರೆ. ಅದು ಭಟ್ಟಂಗಿ ಉತ್ಸವಾನಾ.? ನಮಗೂ ವ್ಯಂಗ್ಯವಾಗಿ ಮಾತನಾಡಲು ಬರುತ್ತೆ ಎಂದು ಹೇಳಿದರು. ನಾವು ಲಂಚಕ್ಕೋ, ಮಂಚಕ್ಕೋ ಜೈಲಿಗೆ ಹೋದವರಲ್ಲ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಭ್ರಷ್ಟಾತಿ ಭ್ರಷ್ಟ ಪಕ್ಷ ಎಂದರೆ ಕಾಂಗ್ರೆಸ್. ಅವರಲ್ಲಿ ಬೇಲ್ ಮೇಲೆ ಹೊರಗಿರೋರು ಯಾರು ಅಂತ ಹೇಳಬೇಕಿಲ್ಲ. ಅವರು ಯಾವ ಕೆಲಸ ಮಾಡಿ ಜೈಲಿಗೆ ಹೋಗಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕಿಡಿಕಾರಿದರು.
ಚಿಕ್ಕಮಗಳೂರಲ್ಲಿ ಬಾಂಗ್ಲಾದ ಅಶರಿಯಾ ಪ್ರದೇಶದಿಂದ ಬಂದಿದ್ದ ಕೈರುಲï, ರೋಹಿನ್, ಮೋಮಿನ್ ಆಲಿ, ಮುರುಸುಮ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಬರುವವರ ಹಿಂದೆ ದೊಡ್ಡ ಜಾಲ ಇದೆ.
ಅಲ್ಲದೆ, ಅವರ ಜನ ಬೆಂಗಳೂರು, ಚಿಕ್ಕಮಗಳೂರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಇದೆ. ಬೆಂಗಳೂರಿನ ಲ್ಯಾಂಡ್ ಫಿಲ್ಲಿಂಗ್ ಕೆಲಸದಲ್ಲೂ ಇವರು ಇದ್ದಾರೆ. ವ್ಯವಸ್ಥಿತವಾಗಿ ಅವರನ್ನ ಸೆಟಲ್ ಮಾಡಿಸುವ, ಕೆಲಸ ಕೊಡಿಸೋ ಜಾಲ ಇಲ್ಲಿದೆ ಎಂದು ಮಾಹಿತಿ ನೀಡಿದರು.
ಅವರನ್ನ ಕಾರ್ಮಿಕರೆಂದು ಬಾವಿಸಲು ಸಾಧ್ಯವಿಲ್ಲ. ಮುಂದೆ ಇವರಿಂದ ದೇಶಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ದೇಶದ ಭದ್ರತೆಗೂ ಅಪಾಯ. ಕಾಫಿ ತೋಟದ ಮಾಲೀಕರಿಗೆ ಮನವಿ ಮಾಡ್ತೀನಿ. ಹೊರ ಭಾಗದ ಕಾರ್ಮಿಕರನ್ನ ಕೆಲಸಕ್ಕೆ ತೆಗೆದುಕೊಳ್ಳುವಾಗ ಅವರ ಮಾಹಿತಿ ಪಡೆಯಿರಿ ಹಾಗೂ ಹತ್ತಿರದ ಪೊಲೀಸ್ ಠಾಣೆಗೂ ಅವರ ಮಾಹಿತಿ ನೀಡಿ. ಸಿಎಂ ಈ ಬಗ್ಗೆ ವಿಶೇಷ ತನಿಖಾ ದಳ ರಚಿಸಿ ತನಿಖೆ ಮಾಡಿಸಬೇಕು. ಸಾಧ್ಯವಾದರೆ ಎನ್‍ಐಎ ಸಹಾಯ ಪಡೆದು ಇಂತಹವರನ್ನು ಪತ್ತೆ ಹಚ್ಚಬೇಕು ಎಂದು ಹೇಳಿದರು.
ದೇಶದಲ್ಲಿ ಅಕ್ರಮ ಸಾಗಾಣಿಕೆ, ಡ್ರU್ಸï, ಸ್ಮಗ್ಲಿಂಗ್ ಮಾಡುವ ಆತಂಕವಿದೆ. ಇವರನ್ನ ಮಟ್ಟ ಹಾಕ ದಿದ್ದರೆ ಮುಂದೆ ದೇಶದ ಭದ್ರತೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.