ಲಕ್ನೋ,ಜ.19-ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 2025ರಲ್ಲಿ ನಡೆಯಲಿರುವ ಮಹಾಕುಂಭದಲ್ಲಿ ಭಕ್ತರ ಅನುಕೂಲಕ್ಕಾಗಿ ಸರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾಕುಂಭದ ಸಮಯದಲ್ಲಿ ಪ್ರಯಾಗರಾಜ್ನಿಂದ ಲಕ್ನೋ ಮತ್ತು ದೆಹಲಿಗೆ ಹೆಚ್ಚುವರಿ ಸೂಪರ್ ಪಾಸ್ಟ್ ರೈಲುಗಳ ವ್ಯವಸ್ಥೆ ಮಾಡಲು ರೈಲ್ವೆ ಸಚಿವಾಲಯದೊಂದಿಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಯಾಗ್ರಾಜ್ ಸಂಪರ್ಕವನ್ನು ಸುಧಾರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೂ ಸಮನ್ವಯತೆ ಸಾಧಿಸಲು ತಾಕೀತು ಮಾಡಿದ್ದಾರೆ.
ಅಧಿಕಾರಿಗಳು, ನೌಕರರ ವರ್ಗಾವಣೆಗೆ ಬ್ರೇಕ್ ಹಾಕಿದ ಸಿಎಂ ಬೊಮ್ಮಾಯಿ
ಪ್ರಯಾಗ್ರಾಜ್ನಿಂಧ ಅಯೋಧ್ಯೆ, ಲಕ್ನೋ ಮತ್ತು ಗೋರಖ್ಪುರದವರೆಗಿನ ರಸ್ತೆ ಸುಧಾರಣೆ ಮತ್ತು ಬಾಕಿ ಉಳಿದಿರುವ ಎಲ್ಲಾ ರಸ್ತೆ ಕಾಮಗಾರಿಗಳನ್ನು 2024ರ ಅಕ್ಟೋಬರ್ ಒಳಗೆ ಪೂರ್ಣಗೊಳಿಸಬೇಕು. 2022-23ಕ್ಕೆ ಬಾಕಿ ಇರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮುಂದಾಗಬೇಕು.
ಲೋಕೋಪಯೋಗಿ ಇಲಾಖೆ, ಜಲ ನಿಗಮ, ಪ್ರವಾಹ ಕಾಮಗಾರಿ ವಿಭಾಗ, ಉತ್ತರ ಪ್ರದೇಶದ ವಿದ್ಯುತ್ನಿಗಮ, ಪ್ರಯಾಗ್ರಾಜ್ ಪಾಲಿಕೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಪ್ರವಾಸೋದ್ಯಮ ಇಲಾಖೆಗಳು ಸಮನ್ವಯತೆಯಿಂದ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಮಹಾಕುಂ¨s ಮೇಳಕ್ಕಾಗಿ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನೂ ಸಿದ್ಧಪಡಿಸಲಾಗುತ್ತಿದೆ.
Prayagraj, Mahakumbh 2025, phenomenal,