ಮುಂಬೈ,ಜ.23- ಗರ್ಭವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರ ಕೈಗೊಳ್ಳುವ ಹಕ್ಕು ಮಹಿಳೆಗೆ ಮಾತ್ರವಿದ್ದು, ಆಕೆ ಮಾತ್ರ ಅದನ್ನು ನಿರ್ಧರಿಸಬೇಕು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ಅಸಹಜತೆಯಿಂದ ಕೂಡಿದ ತನ್ನ 32 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ವಿವಾಹಿತ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಎಸ್.ಜಿ.ಡಿಗೆ ಅವರ ವಿಭಾಗೀಯ ಪೀಠ ತೀರ್ಪು ನೀಡಿದೆ.
ಗರ್ಭೀಣಿ ಮಹಿಳೆಯನ್ನು ಸೋನೋಗ್ರಫಿಗೆ ಒಳಪಡಿಸಿದಾಗ ಭ್ರೂಣವು ಅಸಹಜತೆಗಳನ್ನು ಹೊಂದಿದ್ದು, ದೈಹಿಕ ಮತ್ತು ಮಾನಸಿಕ ವಿಕಲಾಂಗತೆಯೊಂದಿಗೆ ಮಗು ಜನಿಸುತ್ತದೆ ಎಂದು ತಿಳಿದು ಬಂದಿತ್ತು. ನಂತರ ಮಹಿಳೆ ತನ್ನ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಯತ್ನಿಸಿದ್ದರು. ಅದಕ್ಕೆ ವೈದ್ಯಕೀಯ ಪರಿಷತ್ ಆಕ್ಷೇಪ ವ್ಯಕ್ತಪಡಿಸಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ, ಭ್ರೂಣ ಅಸಹಜತೆಯಿಂದ ಕೂಡಿದೆ ಅದನ್ನೇ ತೆಗೆಸಬೇಕು ಎಂದು ಮಹಿಳೆ ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಂಡಿದ್ದಾರೆ. ಅದು ಸೂಕ್ತವಾಗಿದೆ. ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ಈ ನಿರ್ಧಾರ ತೆಗೆದುಕೊಳ್ಳಲು ಮಹಿಳೆ ಮಾತ್ರ ಸೂಕ್ತಳು.
ಆಕೆಯೇ ಆ ನಿರ್ಧಾರ ಮಾಡಬೇಕು. ಈ ಹಂತದಲ್ಲಿ ಗರ್ಭಾವಸ್ಥೆಯ ಅವಧಿ ಅಪ್ರಸ್ತುತ. ಗರ್ಭಪಾತಕ್ಕೆ ಮಾತ್ರೆ ತೆಗೆದುಕೊಳ್ಳುವ ಆಯ್ಕೆ ಮಹಿಳೆಗೆ ಸೇರಿದೆ. ನಿರ್ಧಾರ ತೆಗೆದುಕೊಳ್ಳುವ ಹಕ್ಕು ವೈದ್ಯಕೀಯ ಮಂಡಳಿಯದಲ್ಲ ಎಂದು ನ್ಯಾಯಾಲು ಅಭಿಪ್ರಯ ಪಟ್ಟಿದೆ.
ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಮಾತ್ರ ಬಾಳೆಹಣ್ಣು, ಮಿಠಾಯಿ
ಸಮಯ ಮೀರಿಗೆ ಎಂಬ ಆಧಾರದ ಮೇಲೆ ಗರ್ಭಪಾತವನ್ನು ನಿರಾಕರಿಸುವುದು ಭವಿಷ್ಯಕ್ಕೆ ತೊಂದರೆಯಾಗಬಹುದು. ಪೋಷಕರು ಪ್ರತಿ ಹಂತದಲ್ಲೂ ತೊಂದರೆ ಅನುಭವಿಸಬೇಕಾಗುತ್ತದೆ. ಸಂತಾನೋತ್ಪತ್ತಿ ಮಹಿಳೆಯ ಸ್ವಾಯತ್ತ ಮತ್ತು ಘನತೆಯ ನಿರ್ಧಾರವಾಗಿದೆ. ಆರೋಗ್ಯವಂತ ಮಗು ಜನಿಸುವುದಿಲ್ಲ ಎಂದಾದಾಗ ವೈದ್ಯಕೀಯ ಮಂಡಳಿಯ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿರಬಹುದು, ಆದರೆ ಕಣ್ಣು ಮುಚ್ಚಿ ತೀರ್ಪು ನೀಡಲು ಸಾಧ್ಯವಿಲ್ಲ. ಮಹಿಳೆಯ ಹಕ್ಕುಗಳಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
Pregnancy, Termination, Decision, woman, High Court,