ಕೊರಾಪುಟ್(ಒಡಿಶಾ),ಜ.13- ಉದ್ಯೋಗಕ್ಕಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ತುಂಬು ಗರ್ಭಿಣಿಯೊಬ್ಬರು ಕೊಲೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ಜೈಲಿನಿಂದ ಬಿಡುಗಡೆಯಾದ ಮಾರನೇ ದಿನವೇ ಮಗುವಿಗೆ ಜನ್ಮ ನೀಡಿ, ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಒಡಿಸ್ಸಾದ ಮೈಕಾಂಚ್ ಪಂಚಾಯತ್ ವ್ಯಾಪ್ತಿಯ ಅಂದ್ರಾಕಾಂಚ್ ಗ್ರಾಮದ ನಿವಾಸಿ ಮತ್ತು ದಿನಗೂಲಿ ಕಾರ್ಮಿಕರ ಪತ್ನಿ ಮೂವತ್ತು ವರ್ಷದ ಸುಲಬತಿ ನಾಯಕ್ ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ. ಈಕೆ ಒಡಿಶಾದ ರಾಯಗಡದಲ್ಲಿ 16 ದಿನಗಳಿಂದ ಜೈಲಿನಲ್ಲಿದ್ದರು.
ಕಳೆದ ವರ್ಷ ಡಿಸೆಂಬರ್ 26 ರಂದು ಖಾಸಗಿ ಕಂಪನಿಯಲ್ಲಿನ ಕೆಲಸಕ್ಕಾಗಿ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದರು. ಅವರಲ್ಲಿ 13 ಮಹಿಳೆಯರಿದ್ದು, ಮೃತಪಟ್ಟ ಸುಲಬತಿ ನಾಯಕ್ ಕೂಡ ಸೇರಿದ್ದರು. ಆಗ ಆಕೆ 9 ತಿಂಗಳ ತುಂಬು ಗರ್ಭಿಣಿಯಾಗಿದ್ದರು.
ಹೈದ್ರಾಬಾದ್ ತಜ್ಞರ ಭೇಟಿ, ಮೆಟ್ರೋ ದುರಂತ ಮುಚ್ಚಿಹಾಕಲು ನಡೆದಿದೆಯಾ ಯತ್ನ..?
ಜಾಮೀನಿನ ಮೇಲೆ ಆಕೆಯನ್ನು ಮಂಗಳವಾರ ಸಂಜೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಕೂಡಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು. ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಬುಧವಾರ ರಾತ್ರಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಆರೋಗ್ಯ ಸ್ಥಿತಿ ಹದಗೆಟ್ಟಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಆಂದ್ರಕಾಂಚ್ನಿಂದ 70 ಕಿಮೀ ದೂರದಲ್ಲಿರುವ ಎಸ್ಎಲ್ಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಧ್ಯರಾತ್ರಿ 1.30ರ ಸುಮಾರಿಗೆ ಕೋರಾಪುಟ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಹಿಳೆ ಮೃತಪಟ್ಟಿದ್ದಾಳೆ ಆಕೆಯ ಪತಿ ಬೈದ್ಯ ನಾಯಕ್ ಹೇಳಿದ್ದಾರೆ. ರಾಯಗಡ ಆಸ್ಪತ್ರೆಯ ವಿಶೇಷ ನವಜಾತ ಶಿಶು ನಿಗಾ ಘಟಕದಲ್ಲಿ ಮಗುವನ್ನು ಇರಿಸಲಾಗಿದೆ.
ಮಹಿಳೆಯ ವಿರುದ್ಧ ಪೊಲಿಸರು ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಕೇಸು ದಾಖಲಿಸಿದ್ದರು. ಇದರಿಂದಾಗಿ ಕಾಶಿಪುರ ನ್ಯಾಯಾಲಯ ಜಾಮೀನು ತಿರಸ್ಕರಿಸಿತ್ತು ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಎಂದು ಸಂಬಂಧಿ ತುಳಸಿ ನಾಯಕ್ ಹೇಳಿದ್ದಾರೆ.
ಜನವರಿ 2 ರಂದು ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಹಾಕಲಾಗಿತ್ತು. ಪೊಲೀಸರು ಎರಡು ಪ್ರತ್ಯೇಕ ಹಳೆಯ ಪ್ರಕರಣಗಳಲ್ಲಿ ಅವಳನ್ನು ಕಸ್ಟಡಿಗೆ ಕೋರಿದ್ದರು. ಇದರಿಂದ ಜಾಮೀನು ದೊರೆಯುವುದು ವಿಳಂಬವಾಯಿತು. ಅಂತಿಮವಾಗಿ ಅವರ ಜಾಮೀನು ದೊರೆತು, ಮಂಗಳವಾರ ಆಕೆ ಬಿಡುಗಡೆಯಾಗಿದ್ದಳು ಎಂದು ಪತಿ ಹೇಳಿದ್ದಾರೆ.
ಬೈದ್ಯ ಅವರು ದಿನಗೂಲಿ ಮಾಡುವವರಾಗಿದ್ದು, ದಂಪತಿಗೆ 10 ವರ್ಷದ ಮಗಳಿದ್ದಾಳೆ. ಸರ್ಕಾರದಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ತುಳಸಿ ಒತ್ತಾಯಿಸಿದ್ದಾರೆ. ಎಸ್ಪಿ (ರಾಯಗಡ) ವಿವೇಕಾನಂದ ಶರ್ಮಾ ಅವರನ್ನು ಸಂಪರ್ಕಿಸಿದಾಗ, ಈ ವಿಷಯವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕೋರಾಪುಟ್ ಕಾಂಗ್ರೆಸ್ ಸಂಸದ ಸಪ್ತಗ್ರಿ ಉಲಕಾ ಆಗ್ರಹಿಸಿದ್ದಾರೆ. ಗರ್ಭೀಣಿ ಮಹಿಳೆಯನ್ನು ಪೊಲೀಸರು ಕೊಲೆ ಯತ್ನ ಆರೋಪದಲ್ಲಿ ಬಂಧಿಸಿದ್ದೇಗೆ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಮೆಟ್ರೋ ಪಿಲ್ಲರ್ ದುರಂತ : ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್
ಗರ್ಭಿಣಿ ಜೈಲಿನಲ್ಲಿದ್ದಾಗ ಸಾಕಷ್ಟು ವೈದ್ಯಕೀಯ ನೆರವು ನೀಡಲಾಗಿದೆಯೇ ಎಂಬುದನ್ನು ಅರಿಶೀಲಿಸುವ ಅಗತ್ಯವಿದೆ ಎಂದು ಉಲಕಾ ಹೇಳಿದ್ದಾರೆ. ಮಹಿಳೆಯ ಕುಟುಂಬಕ್ಕೆ ಸರ್ಕಾರ ಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
Pregnant, woman, jailed, seeking, job, dies, release,