ಮೈಸೂರು, ಸೆ.13- ವಿಶ್ವವಿಖ್ಯಾತ ದಸರಾ 2023ಕ್ಕೆ ದಿನಗಣನೆ ಆರಂಭವಾಗಿದೆ. ಜಂಬೂಸವಾರಿ ಸಾಗುವ ರಾಜಮಾರ್ಗದಲ್ಲಿ ತಾಲೀಮು ನಡೆಸುತ್ತಾ ಮೈಸೂರಿಗರಲ್ಲಿ ಕುತೂಹಲ ತಂದಿದೆ.
ಲಕ್ಷಾಂತರ ಪ್ರವಾಸಿಗರ ಕೇಂದ್ರಬಿಂದುವಾದ ಜಂಬೂಸವಾರಿ ತೆರಳುವ ರಾಜಮಾರ್ಗವೂ ಅಚ್ಚುಕಟ್ಟಾಗಿರಬೇಕೆಂಬುದು ಮೈಸೂರು ಮಹಾನಗರ ಪಾಲಿಕೆಯ ಅಭಿಪ್ರಾಯ. ಈ ಹಿನ್ನಲೆಯಲ್ಲಿ ಮೇಯರ್ ಶಿವಕುಮಾರ್ ಜಂಬೂಸವಾರಿ ತೆರಳುವ ರಾಜಮಾರ್ಗ ಸೇರಿದಂತೆ ಅರಮನೆಯ ಸುತ್ತಮುತ್ತಲಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋರಿಯಾ ಮಹಿಳೆಗೆ ಚುಂಬಿಸಲು ಯತ್ನಿಸಿದ ಭಾರತೀಯನ ಬಂಧನ
ಕೆಆರ್ ವೃತ್ತ, ಚಾಮರಾಜ ವೃತ್ತಕ್ಕೆ ದೀಪಾಲಂಕಾರ, ವೃತ್ತದ ಆವರಣದಲ್ಲಿ ಸುಂದರ ಉದ್ಯಾನವನ ನಿರ್ಮಿಸುವ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜಮಾರ್ಗದ ಇಕ್ಕೆಲಗಳಲ್ಲಿ ಅಳವಡಿಸಿರುವ ಟೈಲ್ಸಗಳ ಪರಿಶೀಲನೆ ನಡೆಸಿದ್ದು ಮುರಿದ ಟೈಲ್ಸಗಳನ್ನು ಬದಲಾಯಿಸುವಂತೆ ಸೂಚನೆ ನೀಡಿದ್ದಾರೆ.
ಡ್ಯಾಮೇಜ್ ಆಗಿರುವ ಬ್ಯಾರಿಕೇಡ್‍ಗಳನ್ನು ಬದಲಾಯಿಸುವುದು, ಮುಚ್ಚಿರುವ ಸಬ್‍ವೇ ತೆರವುಗೊಳಿಸುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಟೌನ್‍ಹಾಲ್‍ನಲ್ಲಿ ನೆನೆಗುದಿಗೆ ಬಿದ್ದ ಪಾರ್ಕಿಂಗ್ ವ್ಯವಸ್ಥೆಯನ್ನೂ ಪರಿಶೀಲಿಸಿ ಶೀಘ್ರದಲ್ಲಿ ಚಾಲ್ತಿಗೆ ಬರುವ ಕುರಿತಂತೆ ಚರ್ಚಿಸಿದ್ದಾರೆ. ಒಟ್ಟಾರೆ ದಸರಾ ಸಮಯದಲ್ಲಿ ಬರುವ ಪ್ರವಾಸಿಗರಿಗೆ ಆಕರ್ಷಣೀಯವಾಗಿ ಕಾಣುವಂತೆ ವ್ಯವಸ್ಥೆ ಕಲ್ಪಿಸುವಂತೆ ಅಕಾರಿಗಳಿಗೆ ಸೂಚಿಸಿದ್ದಾರೆ.
#Preparation, #Dasara2023, #MysuruDasara, #MysuruDasara2023,