Monday, December 2, 2024
Homeರಾಷ್ಟ್ರೀಯ | Nationalಮುಂಬೈ ದಾಳಿ ಹುತಾತ್ಮರಿಗೆ ರಾಷ್ಟ್ರಪತಿ ಮುರ್ಮು ನಮನ

ಮುಂಬೈ ದಾಳಿ ಹುತಾತ್ಮರಿಗೆ ರಾಷ್ಟ್ರಪತಿ ಮುರ್ಮು ನಮನ

President Droupadi Murmu Pays Tribute To 26/11 Martyrs

ನವದೆಹಲಿ, ನ 26 (ಪಿಟಿಐ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ವೀರ ಯೋಧರಿಗೆ ನಮನ ಸಲ್ಲಿಸಿದರು ಮತ್ತು ಭಾರತವು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಸೋಲಿಸಲು ದಢವಾಗಿ ಬದ್ಧವಾಗಿದೆ ಎಂದು ಹೇಳಿದರು.

ನವೆಂಬರ್‌ 26, 2008 ರಂದು ಪಾಕಿಸ್ತಾನದ ಹತ್ತು ಲಷ್ಕರ್‌-ಎ-ತೊಯ್ಬಾ ಭಯೋತ್ಪಾದಕರು ಸಮುದ್ರದ ಮೂಲಕ ಆಗಮಿಸಿದರು ಮತ್ತು ಮುಂಬೈನಲ್ಲಿ 60 ಗಂಟೆಗಳ ಮುತ್ತಿಗೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಹತ್ಯೆ ಮಾಡಿದ್ದರು.

ನವೆಂಬರ್‌ 26, 2008 ರಂದು ಮುಂಬೈನಲ್ಲಿ ನಡೆದ ಹೇಡಿತನದ ಭಯೋತ್ಪಾದನಾ ದಾಳಿಯ ವಾರ್ಷಿಕೋತ್ಸವದಂದು, ನಾನು ಇಡೀ ರಾಷ್ಟ್ರವನ್ನು ಸೇರಿಕೊಳ್ಳುತ್ತೇನೆ ಮತ್ತು ತಮ ಪ್ರಾಣವನ್ನು ಕಳೆದುಕೊಂಡ ಧೈರ್ಯಶಾಲಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬಗಳೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇನೆ ಎಂದು ಮುರ್ಮು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಮ ಜನರನ್ನು ರಕ್ಷಿಸುವ ಸಂದರ್ಭದಲ್ಲಿ ಅಂತಿಮ ತ್ಯಾಗ ಮಾಡಿದ ತನ್ನ ಧೀರ ಭದ್ರತಾ ಸಿಬ್ಬಂದಿಯನ್ನು ಕತಜ್ಞತೆಯಿಂದ ಗೌರವಿಸುತ್ತದೆ. ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳಲ್ಲಿ ಸೋಲಿಸಲು ಭಾರತವು ದಢವಾಗಿ ಬದ್ಧವಾಗಿದೆ ಎಂದು ಪುನರುಚ್ಚರಿಸುವ ದಿನವಾಗಿದೆ ಎಂದು ಅವರು ವಿವರಿಸಿದ್ದಾರೆ.

RELATED ARTICLES

Latest News