ದಸರಾ ಉದ್ಘಾಟಿಸಿ ರಾಷ್ಟ್ರಪತಿ ಮುರ್ಮು ಭಾಷಣ, ಇಲ್ಲಿದೆ ಹೈಲೈಟ್ಸ್

Social Share

ಮೈಸೂರು,ಸೆ.26- ನಾಡಹಬ್ಬ ದಸರಾ ಭಾರತೀಯ ಸಂಸ್ಕøತಿ ಪ್ರತೀಕವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದರು.ಚಾಮುಂಡಿಬೆಟ್ಟದಲ್ಲಿ ಇಂದು ಬೆಳಿಗ್ಗೆ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ಮೈಸೂರು ದಸರಾಗೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡದಲ್ಲಿ ನಾಡಿನ ಜನತೆಗೆ ದಸರಾ ಹಬ್ಬದ ಶುಭ ಕಾಮನೆ ಕೋರಿದ್ದಲ್ಲದೆ ದೇವಿ ಚಾಮುಂಡೇಶ್ವರಿಗೆ ಗೌರವಪೂರ್ವಕ ನಮನ ಸಲ್ಲಿಸುತ್ತೇನೆ ಎಂದರು.

ನಾಡಿನ ಜನರಿಗೆ ದೇವಿ ಚಾಮುಂಡೇಶ್ವರಿ ಸದಾ ಒಳಿತು ಮಾಡಲಿ. ನಾನು ರಾಷ್ಟ್ರಪತಿ ಆದ ಬಳಿಕ ಕರ್ನಾಟಕಕ್ಕೆ ಇದು ನನ್ನ ಮೊದಲ ಭೇಟಿಯಾಗಿದೆ. ಶಕ್ತಿ ಪೀಠವಾದ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದರು.

ಇದನ್ನೂ ಓದಿ : ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಂದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ

ಮಹಿಷನನ್ನು ಮಣಿಸಿದ ಚಾಮುಂಡೇಶ್ವರಿ ದೇವಿ ನೆಲೆಸಿರುವ ಈ ಬೆಟ್ಟ ಪ್ರಮುಖ ಶಕ್ತಿ ಪೀಠವಾಗಿದೆ. ದೇಶ, ವಿದೇಶಗಳಿಂದ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿತ್ತಾರೆ. ಆದಿ ಶಂಕರಾಚಾರ್ಯರು ಕರ್ನಾಟಕದಲ್ಲಿ ಶೃಂಗೇರಿ ಮಠ ಸ್ಥಾಪಿಸಿ ಹಿಂದೂಧರ್ಮ ಪ್ರಚಾರ ಮಾಡಿದರು.

ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಜಾತಿ ಧರ್ಮದ ತಾರತಮ್ಯ ಮಾಡದೆ ಎಲ್ಲರಿಗೂ ಶರಣ ಸಂಸ್ಕೃತಿಯನ್ನು ಧಾರೆ ಎರೆದರು. ವಚನ ಸಾಹಿತ್ಯ ಕಾಲದಲ್ಲಿ ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಮಹಾನ್ ಶರಣರು ಬದುಕಿದ್ದರು.

ಅನುಭವಮಂಟಪದಲ್ಲಿ ಧರ್ಮ ಹಾಗೂ ಸಾಮಾಜಿಕ ಚರ್ಚೆಗಳು ನಡೆಯುತ್ತಿತ್ತು ಎಂದು ಸ್ಮರಿಸಿಕೊಂಡರು. ಪ್ರಾಥಮಿಕ ಶಿಕ್ಷಣದಲ್ಲಿ ಕರ್ನಾಟಕ ಶೇ.100ರಷ್ಟು ಸಾಧನೆ ಮಾಡಿದೆ. ಪ್ರಧಾನಮಂತ್ರಿ ಗ್ರಾಮೀಣ ರೋಜ್ಗಾರ್ ಯೋಜನೆಯಲ್ಲೂ ರಾಜ್ಯ ಮುಂದಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳನ್ನು ಮರ್ಮು ಕೊಂಡಾಡಿದರು.
ನಾಡಹಬ್ಬ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರವನ್ನು ರಾಷ್ಟ್ರಪತಿಯವರು ಅಭಿನಂದಿಸಿದರು.

Articles You Might Like

Share This Article