ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಡಾ. ಬಿ.ಟಿ.ಲಲಿತಾನಾಯಕ್ ನೇಮಕ

Social Share

ಬೆಂಗಳೂರು, ಜ.19- ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವರಾದ ಡಾ. ಬಿ.ಟಿ.ಲಲಿತಾನಾಯಕ್ ನೇಮಕವಾಗಿದ್ದಾರೆ. ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಯಪ್ರಕಾಶ್ ಬಂಧುರವರು ಲಲಿತಾ ನಾಯಕ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಆದೇಶ ಮಾಡಿದ್ದಾರೆ.
ಕಳೆದ 70 ರಿಂದ 90 ದಶಕದಲ್ಲಿ ರಾಷ್ಟ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಈ ಪಕ್ಷವು, ದೇಶದಲ್ಲಿ ಇಬ್ಬರು ಪ್ರಧಾನಿ ಹಾಗೂ ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿತ್ತು. ಅಧಿಕಾರದ ಅವಧಿಯಲ್ಲಿ ಹಲವಾರು ಜನಪರ ಹಾಗೂ ರೈತರ ಪರ ಯೋಜನೆಯನ್ನು ರೂಪಿಸಿ ಮನೆ ಮಾತಾಗಿತ್ತು.

Articles You Might Like

Share This Article