ನವದೆಹಲಿ,ಫೆ.12- ಮಹತ್ವದ ಬೆಳವಣಿಗೆಯಲ್ಲಿ ಬಹುತೇಕ ಬಿಜೆಪಿಯೇತರ ಆಡಳಿತ ಇರುವ ದೇಶದ 12 ರಾಜ್ಯಗಳ ರಾಜ್ಯಪಾಲರನ್ನು ಬದಲಾವಣೆ ಮಾಡಲಾಗಿದ್ದು, ಬಿಜೆಪಿ ನಾಲ್ವರು ನಾಯಕರು, ಸುಪ್ರೀಂಕೋರ್ಟ್‍ನ ಒಬ್ಬರು ನಿವೃತ್ತ ನ್ಯಾಯಮೂರ್ತಿಗಳಿಗೆ ಅವಕಾಶ ನೀಡಲಾಗಿದೆ.
ಅಯೋಧ್ಯೆ ಕುರಿತು ತೀರ್ಪು ನೀಡಿದ ಸುಪ್ರೀಂಕೋರ್ಟ್ ವಿಭಾಗೀಯ ಪೀಠದಲ್ಲಿದ್ದ ಅಬ್ದುಲ್ ನಜೀರ್ ಅವರನ್ನು ಅವರ ತವರು ರಾಜ್ಯ ಆಂಧ್ರ ಪ್ರದೇಶಕ್ಕೆ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಬೆಳಗ್ಗೆ ರಾಜ್ಯಪಾಲರ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಬಿಜೆಪಿಯ ಸಿ.ಪಿ.ರಾಧಾಕೃಷ್ಣನ್, ಶಿವ್‍ಪ್ರತಾಪ್ ಶುಕ್ಲಾ, ರಾಜಸ್ಥಾನದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಗುಲಾಬ್ ಚಾಂದ್ ಕಠಾರಿಯಾರಿಗೆ ಮಣೆ ಹಾಕಲಾಗಿದೆ. ಅರುಣಾಚಲಪ್ರದೇಶ ಮತ್ತು ಜಾರ್ಖಾಂಡ್ ರಾಜ್ಯಪಾಲರನ್ನು ವರ್ಗಾವಣೆ ಮಾಡಲಾಗಿದೆ. ರಾಜ್ಯಪಾಲರ ಬದಲಾವಣೆಯಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ, ಸಿಕ್ಕಿಂ, ಅರುಣಾಚಲಪ್ರದೇಶಗಳಲ್ಲಿ ಬಿಜೆಪಿ ಸಮ್ಮಿಶ್ರ ಸರ್ಕಾರಗಳಿವೆ.ಅಸ್ಸಾಂನಲ್ಲಿ ಬಿಜೆಪಿ ಆಡಳಿತ ಇದೆ. ಉಳಿದಂತೆ ಬಿಜೆಪಿಯೇತರ ಸರ್ಕಾರಗಳಿವೆ.
ಆನ್‍ಲೈನ್ ಆರ್ಡರ್‌ನಲ್ಲಿ ಬಂದ ಬ್ರೆಡ್‍ನಲ್ಲಿತ್ತು ಇಲಿಮರಿ
ಮರಾಠರ ಅಸ್ಮಿತೆಯನ್ನು ಕೆಣಕಿ ವಿವಾದಕ್ಕೀಡಾಗಿದ್ದ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತು ಇತ್ತೀಚೆಗೆ ನಾಗರೀಕರ ಮೇಲೆ ಭಯೋತ್ಪಾದಕರ ದಾಳಿಯಿಂದ ಟೀಕೆಗೆ ಗುರಿಯಾಗಿದ್ದ ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ರಾಧಾಕೃಷ್ಣ ಮಾಥುರ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.
ನಿರ್ಗಮಿತ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸ್ಥಾನಕ್ಕೆ ಕೇಂದ್ರದ ಮಾಜಿ ಸಚಿವ ಹಾಗೂ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್‍ರನ್ನು ನೇಮಿಸಿದ್ದಾರೆ. ತೆರವಾದ ಜಾರ್ಖಂಡ್ ರಾಜ್ಯಪಾಲರ ಹುದ್ದೆಗೆ ತಮಿಳುನಾಡಿನ ಕೊಯಮತ್ತೂರಿನಿಂದ ಎರಡು ಬಾರಿ ಸಂಸದರಾಗಿದ್ದ ಸಿ.ಪಿ. ರಾಧಾಕೃಷ್ಣನ್ ನೇಮಿಸಲಾಗಿದೆ.
ಅರುಣಾಚಲಪ್ರದೇಶದ ರಾಜ್ಯಪಾಲರಾಗಿದ್ದ ಬಿ.ಡಿ. ಮಿಶ್ರಾ ಅವರನ್ನು ಲಡಾಖïಗೆ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ. ಅರುಣಾಚಲ ಪ್ರದೇಶಕ್ಕೆ ಹೊಸ ರಾಜ್ಯಪಾಲರಾಗಿ ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ನೇಮಕವಾಗಿದ್ದಾರೆ.
ಫ್ಲಾಟ್‍ಗೆ ನುಗ್ಗಿ ಮಹಿಳೆಗೆ ಚಾಕುವಿನಿಂದ ಇರಿದು ಚಿನ್ನದ ಸರ ದರೋಡೆ
ಕರ್ನಾಟಕ ಹೈಕೋರ್ಟ್‍ನಲ್ಲಿ ನ್ಯಾಯಮೂರ್ತಿಯಾಗಿ ಕೆಲಸ ಮಾಡಿ, ನಂತರ ಸುಪ್ರೀಂಕೋರ್ಟ್‍ಗೆ ಬಡ್ತಿ ಪಡೆದಿದ್ದ ಆಂಧ್ರ ಪ್ರದೇಶದ ನ್ಯಾಯಮೂರ್ತಿ ಅಬ್ದುಲ್ ನಜೀರ್‍ರನ್ನು ಆಂಧ್ರದ ರಾಜ್ಯಪಾಲರಾಗಿ ನೇಮಿಸಲಾಗಿದೆ. ಅಬ್ದುಲ್ ನಜೀರ್ ಅವರು ಅಯೋಧ್ಯೆ ವಿವಾದದಲ್ಲಿ ಪುರಾತತ್ವ ಇಲಾಖೆ ವರದಿಯನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ ಪೀಠದಲ್ಲಿ ಕೆಲಸ ಮಾಡಿದ್ದರು. ಇನ್ನು ಅರುಣಾಚಲಪ್ರದೇಶ ರಾಜ್ಯಪಾಲರಾಗಿ ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ನೇಮಕವಾಗಿದ್ದಾರೆ.
ರಾಜುಪಾಲರ ಪಟ್ಟಿ ಹೀಗಿದೆ:
ಅರುಣಾಚಲ ಪ್ರದೇಶ: ನಿವೃತ್ತ ಲೆಫಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ ಪರ್ಣಿಕ್
ಸಿಕ್ಕಿಂ: ಲಕ್ಷ್ಮಣ್ ಪ್ರಸಾದ್ ಆಚಾರ್ಯ
ಜಾರ್ಖಂಡ್: ಸಿ.ಪಿ. ರಾಧಾಕೃಷ್ಣನ್
ಹಿಮಾಚಲಪ್ರದೇಶ: ಶಿವಪ್ರತಾಪ್ ಶುಕ್ಲಾ
ಅಸ್ಸಾಂ: ಗುಲಾಬ್ ಚಂದ್ ಕಟಾರಿಯಾ
ಆಂಧ್ರ ಪ್ರದೇಶ: ಅಬ್ದುಲ್ ನಜೀರ್
ಛತ್ತೀಸ್‍ಗಡ: ಬಿಸ್ವ ಭೂಸನ್ ಹರಿಚಂದನ್
ಮಣಿಪುರ: ಅನುಸೂಯ ಊಕ್ಯೆ
ನಾಗಾಲ್ಯಾಂಡ್: ಲಾ ಗಣೇಶನ್
ಮೇಘಾಲಯ: ಫಾಗು ಚೌಹಾಣ್
ಬಿಹಾರ: ರಾಜೇಂದ್ರ ವಿಶ್ವನಾಥ್ ಅರ್ಲೇಕರ್
ಮಹಾರಾಷ್ಟ್ರ ರಾಜ್ಯಪಾಲ: ರಮೇಶ್ ಬೈಸ್
ಲಡಾಕ್: ನಿವೃತ್ತ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ
President, Murmu, appoints, new Governors, 12 states,