ಬ್ರಿಟನ್‍ನ ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು

Social Share

ಲಂಡನ್,ಸೆ.18- ಬ್ರಿಟನ್‍ನ ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಲಂಡನ್‍ಗೆ ಆಗಮಿಸಿದ್ದಾರೆ. ಎಲೆಜಬೆತ್ ಅವರ ಅಂತ್ಯಕ್ರಿಯೆ ನಾಳೆ ಲಂಡನ್‍ನ ವೆಸ್ಟ್ ಮಿನಿಸ್ಟರ್ ಅಬೆಯ್‍ನಲ್ಲಿ ನಡೆಯಲಿದೆ. ರಾಣಿಯವರ ಅಂತಿಮ ಯಾತ್ರೆ ವಿಲಿಂಗ್ಟನ್ ಆರ್ಚ್ ಮೂಲಕ ವಿಂಡ್ಸರ್‍ನಿಂದ ಸೆಂಟ್‍ಜಾರ್ಜ್ ಚಾಪೆಲ್ ಮೂಲಕ ಹಾದುಹೋಗಲಿದೆ.

ರಾಣಿಯವರ ಪತಿ ಮಹಾರಾಜ ಫಿಲಿಪ್ಸ್ ಅವರ ಸಮಾಯ ಬಳಿಯೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. 96 ವರ್ಷದ ಎಲಿಜಬೆತ್ ಸೆ.8ರಂದು ಮೃತಪಟ್ಟರೆಂದು ಮೃತಪಟ್ಟಿದ್ದರು.

ದೇಶದಲ್ಲಿ 11 ದಿನಗಳ ಕಾಲ ಶೋಕಾಚರಣೆ ಜಾರಿಯಲ್ಲಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಸೇರಿದಂತೆ ವಿಶ್ವದ ಹಲವು ಗಣ್ಯರು ಎಲಿಜಬೆತ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದರು. ರಾಷ್ಟ್ರದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Articles You Might Like

Share This Article