ಕಾಮನ್‍ವೆಲ್ತ್ ಕ್ರೀಡಾಪಟುಗಳಿಗೆ ರಾಷ್ಟ್ರಪತಿ ಶ್ಲಾಘನೆ

Social Share

ನವದೆಹಲಿ ಆ.6- ಬರ್ಮಿಂಗ್‍ಹ್ಯಾಂಮ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿಪಟುಗಳಾದ ದೀಪಕ್ ಪೂನಿಯಾ, ದಿವ್ಯಾ ಕಕ್ರಾನ್ ಮತ್ತು ಮೋಹಿತ್ ಗ್ರೆವಾಲ್ ಪದಕ ಗೆದ್ದಿರುವುದಕ್ಕೆ ರಾಷ್ಟ್ರ ಪತಿ ದ್ರೌಪದಿ ಮುರ್ಮು ಶ್ಲಾಘಿಸಿದ್ದಾರೆ ಮತ್ತು ಅವರ ಸಾಧನೆಯು ದೇಶಕ್ಕೆ ಹೆಚ್ಚಿನ ಸಂತೋಷ ಮತ್ತು ಕೀರ್ತಿ ತಂದಿದೆ ಎಂದು ಹೇಳಿದ್ದಾರೆ.

ಪುರುಷರ 86 ಕೆಜಿ ವಿಭಾಗದಲ್ಲಿ ನಮ್ಮ ಯುವ ಕುಸ್ತಿಪಟು ದೀಪಕ್ ಪೂನಿಯಾ ಚಿನ್ನ ದ ಪದಕ ಪಡೆದಿರುವುದಕ್ಕೆ ಅವರಿಗೆ ಅಭಿನಂದನೆಗಳು. ನಿಮ್ಮ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ವಿಧಾನವು ಪ್ರಭಾವಶಾಲಿಯಾಗಿದೆ. ನೀವು ಭಾರತಕ್ಕೆ ಹೆಚ್ಚಿನ ಸಂತೋಷ ಮತ್ತು ವೈಭವವನ್ನು ತಂದಿದ್ದೀರಿ ಎಂದು ಮುರ್ಮು ಅವರು ತಿಳಿಸಿದ್ದಾರೆ.

ಮಹಿಳೆಯರ 68 ಕೆಜಿ ವಿಭಾಗ ಕುಸ್ತಿಯಲ್ಲಿ ಕಂಚು ಗೆದ್ದಿರುವ ದಿವ್ಯಾ ಕಕ್ರಾನ್ ಭಾರತಕ್ಕೆ ಸಂತೋಷಕರ ಗೆಲುವಿಗೆ ಕಾರಣವಾಯಿತು, ನಿಮ್ಮಂತಹ ಯುವ ಕುಸ್ತಿಪಟುಗಳು ಭಾರತೀಯ ಕ್ರೀಡೆಗಳ ಭವಿಷ್ಯದ ಭರವಸೆಯನ್ನು ತುಂಬಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಬ್ಬ ಪ್ರತಿಭಾವಂತ ಯುವ ಕುಸ್ತಿಪಟು ಮೋಹಿತ್ ಗ್ರೆವಾಲ್ ಅವರು ಕಂಚಿನ ಪದಕವನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ನೀವು ಅನೇಕ ಸವಾಲುಗಳನ್ನು ಜಯಿಸಿದ್ದೀರಿ. ಇನ್ನೂ ಅನೇಕ ಪ್ರಶಸ್ತಿಗಳನ್ನು ತರಲು ರಾಷ್ಟ್ರವು ನಿಮ್ಮನ್ನು ಎದುರು ನೋಡುತ್ತಿದೆ ಎಂದು ತಿಳಿಸಿದ್ದಾರೆ.

Articles You Might Like

Share This Article