ಬೆಂಗಳೂರು,ಆ.14- ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸರಿಗೆ ಮತ್ತು ರಕ್ಷಣಾ ಪಡೆಯ ಸಿಬ್ಬಂದಿಗಳಿಗೆ ನೀಡಲಾಗುವ ರಾಷ್ಟ್ರಪತಿಯವರ ಪದಕಕ್ಕೆ ಕರ್ನಾಟಕದ 18 ಮಂದಿ ಅಧಿಕಾರಿಗಳು ಭಾಜನರಾಗಿದ್ದಾರೆ.ಜೊತೆಗೆ ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೈಗಾರಿಕಾ ಭದ್ರತಾ ಪಡೆ, ಬಿಎಸ್‍ಎಫ್, ಸಿಆರ್‍ಪಿಎಫ್ ಪಡೆಗಳ ತಲಾ ಒಬ್ಬರು ಪದಕ ಪಡೆದಿದ್ದಾರೆ.

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು :
ಕಡೂರಿನ ಪೊಲೀಸ್ ತರಬೇತಿ ಶಾಲೆಯ ಪ್ರಾಶಂಪಾಲರು ಆಗಿರುವ ಪೊಲೀಸ್ ಅಧೀಕ್ಷರು ಎನ್.ಶ್ರೀನಿವಾಸ್, ದಕ್ಷಿಣ ಕನ್ನಡ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪ್‍ಸಿಂಗ್ ತುಕಾರಾಮ್ ತೋರಟ್,ಬೆಂಗಳೂರಿನ ಹೈಕೋರ್ಟ್ ಭದ್ರತಾ ವಿಭಾಗದ ಡಿವೈಎಸ್ಪಿ ಟಿ.ಎಂ.ಶಿವಕುಮಾರ್, ಕಲಬುರಗಿಯ ಡಿಸಿಆರ್‍ಬಿಯ ಡಿವೈಎಸ್ಪಿ ಜಿ.ಎಚ್.ಇನ್‍ಮ್ದಾರ್, ಸಿಐಡಿಯ ಅರಣ್ಯ ಘಟಕದ ಡಿವೈಎಸ್ಪಿ ಎನ್.ಟಿ. ಶ್ರೀನಿವಾಸ ರೆಡ್ಡಿ, ಸಿಐಡಿಯ ಡಿವೈಎಸ್ಪಿ ಪಿ.ನರಸಿಂಹಮೂರ್ತಿ,ಬೆಂಗಳೂರು ಬೆರಳಚ್ಚು ಘಟಕದ ಎಸಿಪಿ ರಾಘವೇಂದ್ರ ರಾವ್ ಶಿಂಧೆ, ಬೆಂಗಳೂರಿನ ಎಸಿಬಿಯ ಡಿವೈಎಸ್ಪಿ ಪ್ರಕಾಶ್.ಆರ್ ಪದಕಕ್ಕೆ ಪಾತ್ರರಾಗಿದ್ದಾರೆ.
ಧಾರವಾಡ ಜಿಲ್ಲೆ ನವಲಗುಂದ ವೃತ್ತದ ಸಿಪಿಐ ದೃವರಾಜ್ ಬಿ.ಪಾಟೀಲ್, ಬೆಂಗಳೂರಿನ ಎಸಿಬಿಯ ಪೊಲೀಸ್ ಇನ್‍ಸ್ಪೆಕ್ಟರ್ ಮೊಹಮ್ಮದ್ ಅಲಿ.ಎಸ್, ಮೈಸೂರು ನಗರದ ವಿದ್ಯಾರಣ್ಯಪುರಂನ ಪೊಲೀಸ್ ಇನ್‍ಸ್ಪೆಕ್ಟರ್ ಜಿ.ಸಿ.ರಾಜ, ಚಿಕ್ಕಮಗಳೂರಿನ ಶೃಂಗೇರಿ ಪೆಪೊಲೀಸ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ ಬಿ.ಎಸ್.ರವಿ ಅವರಿಗೆ ಪ್ರಶಂಸನೀಯ ಪದಕ ಘೋಷಿಸಲಾಗಿದೆ.
ಕೆಎಸ್‍ಆರ್‍ಪಿ 1ನೇ ಪಡೆಯ ಆರ್‍ಪಿಐ ಮುಫೀದ್ ಖಾನ್, ಕೆಎಸ್‍ಆರ್‍ಪಿಯ ನಾಲ್ಕನೇ ಪಡೆಯ ಆರ್‍ಎಸ್‍ಐ, ಮಹದೇವಯ್ಯ, ಕೆಎಸ್‍ಆರ್‍ಪಿ 3ನೇ ಪಡೆಯ ಆರ್‍ಎಸ್‍ಐ ಮುರಳಿ, ರಾಜ್ಯ ಗುಪ್ತ ವಾರ್ತೆಯ ಸಹಾಯಕ ಗುಪ್ತಚರ ಅಕಾರಿ ಬಸವರಾಜ.ಬಿ ಅಂಡೆಮ್ಮನವರ್, ಬೆಳಗಾವಿ ಡಿವೈಎಸ್ಪಿ ಕಚೇರಿಯ ಎಎಸ್‍ಐ ಬಾಲಕೃಷ್ಣ.ಡಿ ಶಿಂಧೆ, ಬೆಂಗಳೂರಿನ ಕೆಂಪೇಗೌಡನಗರ ಪೊಲೀಸ್ ಠಾಣೆಯ ಎಎಸ್‍ಐ ರಣಜೀತ್ ಶೆಟ್ಟಿ ಅವರುಗಳಿಗೆ ಪದಕ ಲಭಿಸಿದೆ.
ಗೃಹ ರಕ್ಷಕ ದಳಕ್ಕೂ ಮನ್ನಣೆ:
ಗೃಹ ರಕ್ಷಕ ಮತ್ತು ನಾಗರಿಕ ಸೇವದಳಕ್ಕೆ ನೀಡಲಾಗುವ ಪ್ರಶಂಸನೀಯ ಪದಕಕ್ಕೆ ಕರ್ನಾಟಕದ ಗೃಹ ರಕ್ಷಕ ದಳದ ಪ್ಲಟೂನ್ ಕಮಾಂಡರ್‍ಗಳಾದ ಶಿವಾನಂದಪ್ಪ ಜಿ.ಇ, ಹರಿಜನ ಲಕ್ಷ್ಮಿನಾರಾಯಣ ಅವರು ಆಯ್ಕೆಯಾಗಿದ್ದಾರೆ.
ಕೇಂದ್ರ ಪಡೆಗಳ ಪಟ್ಟಿ:
ಸಿಆರ್‍ಪಿಎಫ್‍ನ ಕರ್ನಾಟಕದ ಯಲಹಂಕ ಘಟಕದ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಕಾರಿಕಾರಿಯಾಗಿರುವ ಡಾಕ್ಟರ್ ನಿಖಿಲ್‍ಕುಮಾರ್ ಪ್ರಸಾದ್, ಬಿಎಸ್‍ಎಫ್‍ನ ಕರ್ನಾಟಕದ ಯಲಹಂಕದ ಎಸ್‍ಡಿಸಿ ಘಟಕದ ಕಾನ್‍ಸ್ಟೇಬಲರ್ ಬಾಪು.ಬಿ, ಕೈಗಾರಿಕಾ ಭದ್ರತಾ ಪಡೆಯ ಕರ್ನಾಟಕ ಘಟಕದ ಸಹಾಯಕ ಸಬ್‍ಇನ್‍ಸ್ಪಕ್ಟರ್ ಎಚ್.ಎನ್.ಗೌಂಡರ್, ಅವರಿಗೆ ಪದಕ ಘೋಷಿಸಲಾಗಿದೆ.
ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಪೊಲೀಸ್ ಶೌರ್ಯ ಪದಕಕ್ಕಾಗಿ 347 ಮಂದಿಯನ್ನು ಆಯ್ಕೆ ಮಾಡಲಾಗಿದೆ. ವಿಶಿಷ್ಟ ಸೇವಾ ಪದಕಕ್ಕಾಗಿ 87 ಮಂದಿ, ಪ್ರಶಂಸನೀಯ ಪೊಲೀಸ್ ಸೇವಾ ಪದಕಕ್ಕೆ 648 ಮಂದಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯ ಘೋಷಿಸಿದ್ದ ಉತ್ತಮ ತನಿಖಾ ಪ್ರಶಸ್ತಿಗೆ ರಾಜ್ಯದ ಐದು ಮಂದಿ ಡಿವೈಎಸ್ಪಿ ಮತ್ತು ಒಬ್ಬರು ಇನ್‍ಸ್ಪೆಕ್ಟರ್ ದರ್ಜೆಯ ಅಕಾರಿ ಭಾಜನರಾಗಿದ್ದರು.