ರಾಷ್ಟ್ರಪತಿ ಕೋವಿಂದ್ 2 ದಿನಗಳ ಪ್ರವಾಸಕ್ಕಾಗಿ ಜಮೈಕಾಗೆ ಭೇಟಿ

Spread the love

ಕಿಂಗ್ಸ್‍ಟನ್, ಮೇ 16- ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕೆರಿಬಿಯನ್ ದೇಶ ಜಮೈಕಾಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ತಮ್ಮ ಭೇಟಿಯ ವೇಳೆ ಅವರು ತಮ್ಮ ಜಮೈಕಾದ ಗವರ್ನರ್-ಜನರಲ್ ಪ್ಯಾಟ್ರಿಕ್ ಅಲೆನ್, ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ರಾಷ್ಟ್ರಪತಿ ಕೋವಿಂದ್ ಅವರು ತಮ್ಮ ಪತ್ನಿ ಸವಿತಾ ಕೋವಿಂದ್ ಅವರೊಂದಿಗೆ ತಮ್ಮ ಎರಡು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಭಾನುವಾರ ಜಮೈಕಾಗೆ ಆಗಮಿಸಿದ್ದಾರೆ. ಅವರನ್ನು ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್‍ಗೆ ಕರೆದೊಯ್ಯಲಾಗಿದೆ.

ಸರ್ ಪ್ಯಾಟ್ರಿಕ್ ಅಲೆನ್, ಜಮೈಕಾದ ಗವರ್ನರ್ ಜನರಲ್ ಮತ್ತು ಪಿಎಂ ಆಂಡ್ರ್ಯೂ ಹೋಲ್ನೆಸ್ ಅವರು ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ಕೋವಿಂದ್ ಅವರನ್ನು ಬರಮಾಡಿಕೊಂಡರು ಎಂದು ರಾಷ್ಟ್ರಪತಿ ಕಚೇರಿ ಟ್ವೀಟ್ ಮಾಡಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60 ನೇ ವಾರ್ಷಿಕೋತ್ಸವದ ವರ್ಷದಲ್ಲಿ ಅಧ್ಯಕ್ಷರ ಭೇಟಿ ಮಹತ್ವ ಪಡೆದುಕೊಂಡಿದೆ.

ಕೋವಿಂದ್ ಮತ್ತು ಅವರ ಪತ್ನಿಗೆ ಜಮೈಕಾದ ಆತ್ಮೀಯ ಸ್ವಾಗತವನ್ನು ನೀಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ಪ್ರಧಾನ ಮಂತ್ರಿ ಹೋಲ್ನೆಸ್ ಹೇಳಿದ್ದು, ಜಮೈಕಾಕ್ಕೆ ಭಾರತೀಯ ರಾಷ್ಟ್ರಪತಿಗಳ ಮೊದಲ ಭೇಟಿಯಾಗಿದೆ. ಜಮೈಕಾಕ್ಕೆ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.
ಕೋವಿಂದ್ ಅವರ ಭೇಟಿಯ ಸಂದರ್ಭದಲ್ಲಿ ನಮ್ಮ ದೇಶಗಳ ನಡುವಿನ ಸ್ನೇಹವನ್ನು ಬಲಪಡಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಜಮೈಕಾದ ವಿದೇಶಾಂಗ ವ್ಯವಹಾರಗಳು ಮತ್ತು ವಿದೇಶಿ ವ್ಯಾಪಾರ ಸಚಿವ ಕಮಿನಾ ಜೆ ಸ್ಮಿತ್ ಹೇಳಿದ್ದಾರೆ.

ಅವರು ಜಮೈಕಾದ ರಾಷ್ಟ್ರೀಯ ವೀರ ಮಾರ್ಕಸ್ ಗಾರ್ವೆ ಅವರ ಸ್ಮಾರಕಕ್ಕೆ ನಮನ ಸಲ್ಲಿಸುವ ಮೂಲಕ ತಮ್ಮ ಭೇಟಿಯನ್ನು ಪ್ರಾರಂಭಿಸುತ್ತಾರೆ. ಪ್ರಧಾನಿ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ ಉಭಯ ದೇಶಗಳ ನಡುವಿನ ಬಹುಮುಖಿ ಸಂಬಂಧ ಕುರಿತು ಚರ್ಚಿಸಲಿದ್ದಾರೆ ಎಂದು ಜಮೈಕಾದ ಪತ್ರಿಕೆ ದಿ ಗ್ಲೀನರ್ ಜಮೈಕಾದಲ್ಲಿನ ಭಾರತದ ಹೈಕಮಿಷನರ್ ರುಂಗ್ಸಂಗ್ ಮಸಕುಯಿ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಅಧ್ಯಕ್ಷರು ಮೇ 18 ರವರೆಗೆ ಜಮೈಕಾದಲ್ಲಿ ಇರುತ್ತಾರೆ. ಭೇಟಿಯ ಸಮಯದಲ್ಲಿ ಅವರು ಗವರ್ನರ್ ಜನರಲ್ ಅಲೆನ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಜಮೈಕಾ ಸಂಸತ್ತಿನ ಉಭಯ ಸದನಗಳ ಜಂಟಿ ಅವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಜಮೈಕಾ ಮತ್ತು ಭಾರತ ಸ್ನೇಹ ಸಂಬಂಧವನ್ನು ಹೊಂದಿವೆ. 70 ಸಾವಿರ ಭಾರತೀಯ ವಲಸಿಗರನ್ನು ಹೊಂದಿರುವ ಗಿರ್ಮಿತ್ಯ ದೇಶಗಳಲ್ಲಿ ಜಮೈಕಾ ಕೂಡ ಒಂದಾಗಿದೆ. ಭಾರತ ಮತ್ತು ಜಮೈಕಾ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60 ನೇ ವಾರ್ಷಿಕೋತ್ಸವ 2022 ಆಗಿದ್ದು, ಈ ವೇಳೆ ರಾಷ್ಟ್ರಪತಿ ಭೇಟಿ ಮಹತ್ವದ ಮೈಲಿಗಲ್ಲಾಗಿದೆ.

Facebook Comments