ಮಥುರ,ಆ.19- ಪ್ರತಿಯೊಬ್ಬರೂ ತಮ್ಮ ಆಲೋಚನೆಯಲ್ಲಿ, ಮಾತಿನಲ್ಲಿ ಮತ್ತು ಮಾಡುವ ಕಾರ್ಯದಲ್ಲಿ ಸದ್ಗುಣದ ಮಾರ್ಗ ಅನುಸರಿಸಲು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವು ಪ್ರೇರೇಪಿಸಲಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಾರ್ಥಿಸಿದ್ದಾರೆ.
ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶುಭಾಷಯ ಕೋರಿರುವ ಅವರು, ಕೃಷ್ಣ ಜನ್ಮಾಷ್ಟಮಿಯಂದು ಪ್ರಾರ್ಥನೆಯು ಪುಣ್ಯದ ಹಾದಿಯನ್ನು ಅನುಸರಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.
ಶ್ರೀಕೃಷ್ಣನ ಜೀವನ ಮತ್ತು ಬೋಧನೆಗಳು ಜನರ ಯೋಗಕ್ಷೇಮ ಮತ್ತು ಸದ್ಗುಣದ ಸಂದೇಶವನ್ನು ಒಳಗೊಂಡಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ. ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಸಹ ನಾಗರಿಕರಿಗೆ ರಾಷ್ಟ್ರಪತಿಗಳು ಶುಭಾಶಯಗಳನ್ನು ತಿಳಿಸಿದರು.