ಹಳೆಯ ಸಂಸತ್‍ನಲ್ಲೇ ಬಜೆಟ್ ಅಧಿವೇಶನ : ಓಂ ಬಿರ್ಲಾ

Social Share

ನವದೆಹಲಿ,ಜ.21- ಸಂಸತ್‍ನ ಹಳೆಯ ಕಟ್ಟಡದಲ್ಲಿಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳ ಜಂಟಿ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಸ್ಪಷ್ಟ ಪಡಿಸಿದ್ದಾರೆ.

ಈ ಮೂಲಕ ಬಜೆಟ್‍ನ ಅಧಿವೇಶನ ಹೊಸದಾಗಿ ನಿರ್ಮಿಸಲಾದ ಸಂಸತ್ ಭವನದಲ್ಲಿ ನಡೆಯಲಿದೆ ಎಂಬ ಊಹಾಪೊಹವನ್ನು ಸ್ಪೀಕರ್ ತಳ್ಳಿ ಹಾಕಲಿದ್ದಾರೆ. ಸಂಸತ್‍ನ ಬಜೆಟ್ ಅಪೊವೇಶನ ಜನವರಿ 31ರಂದು ಪ್ರಾರಂಭವಾಗಿ ಫೆಬ್ರವರಿ 13 ರವರೆಗೆ ನಡೆಯಲಿದೆ. ನಂತರ ಮಾರ್ಚ್ 13 ರಂದು ಮತ್ತೆ ಸಂಸತ್ ಸಮಾವೇಶಗೊಂಡು ಏಪ್ರಿಲ್ 6 ರವರೆಗೆ ನಡೆಯುವ ವೇಳಾ ಪಟ್ಟಿ ನಿಗದಿಯಾಗಿದೆ.

ಬಜೆಟ್ ಅಪೊವೇಶನ ನೂತನವಾಗಿ ನಿರ್ಮಿಸಲಾಗಿರುವ ಸಂಸತ್‍ನ ಹೊಸ ಕಟ್ಟಡ ಸೆಂಟ್ರಲ್ ವಿಸ್ಟಾದಲ್ಲಿ ನಡೆಯಲಿದೆ ಎಂದು ನಿನ್ನೆ ಟ್ರೆಂಡ್ ಮಾಡಲಾಗಿತ್ತು. ಇದಕ್ಕೆ ಟ್ವೀಟ್ ಮೂಲಕ ಸ್ಪೀಕರ್ ಸ್ಪಷ್ಟನೆ ನೀಡಿದ್ದಾರೆ.

ಅಧ್ಯಕ್ಷರಾದ ದ್ರೌಪದಿಮುರ್ಮು ಅವರು ಪ್ರಸ್ತುತ ಸಂಸತ್ ಭವನದ ಕಟ್ಟಡದಲ್ಲಿಯೇ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಿರ್ಲಾ ಹೊಸ ಸಂಸತ್ ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲಿದೆ ಎಂದು ಹೇಳಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಟಿಎಂಸಿ ಯುವ ನಾಯಕನ ಬಂಧನ

ಈ ನಡುವೆ ಭದ್ರತಾ ಕಾರಣಗಳಿಗಾಗಿ ಹೊಸ ಸಂಸತ್ತಿನ ಕಟ್ಟಡದ ಒಂದೆರಡು ಫೋಟೋಗಳನ್ನು ವೆಬ್‍ಸೈಟ್‍ನಿಂದ ತೆಗೆದು ಹಾಕಲಾಗಿದೆ. ರಾಷ್ಟ್ರದ ಪವರ್ ಕಾರಿಡಾರ್ ಆಗಿರುವ ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಸಂಸತ್‍ನ ಹೊಸ ಭವನ ನಿರ್ಮಿಸಲಾಗಿದೆ.

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‍ವರೆಗೆ 3 ಕಿಮೀ ಕರ್ತವ್ಯಪಥವನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಸಾಮಾನ್ಯ ಕೇಂದ್ರ ಸಚಿವಾಲಯ, ಹೊಸ ಕಚೇರಿ ಮತ್ತು ಪ್ರಧಾನ ಮಂತ್ರಿಯ ನಿವಾಸ ಮತ್ತು ಹೊಸ ಉಪಾಧ್ಯಕ್ಷ ಎನ್ಕ್ಲೇವ್ ಈ ಮಾರ್ಗದಲ್ಲಿ ನಿರ್ಮಾಣಗೊಂಡಿವೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಿಪಿಡಬ್ಲ್ಯೂಡಿ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

2020ರ ಡಿಸೆಂಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದರು. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುತ್ತಿದೆ.

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಟಿಎಂಸಿ ಯುವ ನಾಯಕನ ಬಂಧನ

ನೂತನ ಸಂಸತ್ ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಅಭಿವ್ಯಕ್ತಿಸುವ ಭವ್ಯವಾದ ಸಂವಿಧಾನ ಭವನವಾಗಲಿದೆ. ಸಂಸತ್ತಿನ ಸದಸ್ಯರಿಗೆ ವಿಶ್ರಾಂತಿ ಕೋಣೆ, ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಊಟದ ಪ್ರದೇಶಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಹೊಂದಿದೆ. ಕಳೆದ ವರ್ಷ ನವೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ಮುಂದುವರೆದಿದೆ.

President, address, joint, sitting, Parliament, houses, existing building, Om Birla,

Articles You Might Like

Share This Article