ರಾಷ್ಟ್ರಪತಿ ಚುನಾವಣೆ : ಯುಪಿ ಶಾಸಕರ ಮತ ಮೌಲ್ಯ ಹೆಚ್ಚು, ಸಿಕ್ಕಿಂನ ಅತ್ಯಂತ ಕಡಿಮೆ

Social Share

ನವದೆಹಲಿ, ಜು.16- ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ದೇಶಾದ್ಯಂತ ಚುನಾಯಿತ ಶಾಸಕರು ಮತದಾನಕ್ಕೆ ಸಜ್ಜಾಗುತ್ತಿದ್ದಂತೆ, ಉತ್ತರ ಪ್ರದೇಶದವರು ಶಾಸಕರಲ್ಲಿ ಗರಿಷ್ಠ ಮತ ಮೌಲ್ಯವನ್ನು ಹೊಂದಿದ್ದರೆ, ಸಿಕ್ಕಿಂನವರ ಮತ ಮೌಲ್ಯವು ಅತ್ಯಂತ ಕಡಿಮೆಯಾಗಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ, ರಾಜ್ಯಸಭೆ ಸದಸ್ಯರು, ದೆಹಲಿ, ಪುದುಚೇರಿ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧ ಕೇಂದ್ರಾಡಳಿತ ಪ್ರದೇಶಗಳ ಹಾಗೂ ವಿಧಾನಸಭೆ ಹೊಂದಿರುವ ರಾಜ್ಯಗಳ ವಿಧಾನಸಭೆ ಸದಸ್ಯರು ಮತದಾನ ಮಾಡಲಿದ್ದಾರೆ. 1971 ರ ಜನಗಣತಿಯ ಆಧಾರದ ಮೇಲೆ ರಾಜ್ಯದ ಒಟ್ಟು ಜನಸಂಖ್ಯೆಯ ಆಧಾರದ ಮೇಲೆ ಶಾಸಕರ ಮತ ಮೌಲ್ಯವನ್ನು ಲೆಕ್ಕಹಾಕಲಾಗುತ್ತದೆ.

ಸಂಸತ್ ಸದಸ್ಯರು 700 ಹೆಚ್ಚಿನ ಮತ ಮೌಲ್ಯವನ್ನು ಹೊಂದಿರುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಸಕಾಂಗ ಸಭೆ ಇಲ್ಲದ ಕಾರಣ ಸಂಸದರ ಮತದ ಮೌಲ್ಯವನ್ನು 708 ರಿಂದ 700 ಕ್ಕೆ ಇಳಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಪುದುಚೇರಿ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾಯಿತ ಶಾಸಕರ ಸಂಖ್ಯೆ ಆಧರಿಸಿ ನಿರ್ಧರಿಸಲಾಗುತ್ತದೆ.

ಉತ್ತರ ಪ್ರದೇಶದ ಪ್ರತಿ ಶಾಸಕರ ಮತ ಮೌಲ್ಯ 208 ಆಗಿದ್ದು, ಒಟ್ಟು 403 ಶಾಸಕರ ಮತಗಳ ಮೌಲ್ಯ 83,824 ಆಗಿದೆ. ತಮಿಳುನಾಡು ಮತ್ತು ಜಾರ್ಖಂಡ್‍ನ ಪ್ರತಿ ಶಾಸಕರು 176 ಮತಗಳನ್ನು ಹೊಂದಿದ್ದಾರೆ, ನಂತರ ಮಹಾರಾಷ್ಟ್ರ (175), ಬಿಹಾರ (173), ಆಂಧ್ರಪ್ರದೇಶ (159).

234 ಸದಸ್ಯರ ತಮಿಳುನಾಡು ವಿಧಾನಸಭೆಯ ಸಂಚಿತ ಮತ ಮೌಲ್ಯ 41,184 ಮತ್ತು 81 ಸದಸ್ಯರ ಜಾರ್ಖಂಡ್‍ನ ಮತ ಮೌಲ್ಯ 14,256 ಆಗಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಮತ ಮೌಲ್ಯ 50,400, ಬಿಹಾರದ 243 ಸದಸರ ಮತ ಮೌಲ್ಯ 42,039, ಆಂಧ್ರಪ್ರದೇಶದಲ್ಲಿ 175 ಸದಸ್ಯರ ಮತಮೌಲ್ಯ 27,825 ಆಗಿದೆ.

ಚಿಕ್ಕ ರಾಜ್ಯಗಳಲ್ಲಿ, ಸಿಕ್ಕಿಂನ ಪ್ರತಿ ಶಾಸಕರ ಮತ ಮೌಲ್ಯ 7, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ (ತಲಾ 8), ನಾಗಾಲ್ಯಾಂಡ್ (9), ಮೇಘಾಲಯ (17), ಮಣಿಪುರ (18) ಮತ್ತು ಗೋವಾ (20). ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಶಾಸಕರೊಬ್ಬರ ಮತ ಮೌಲ್ಯ 16.

72 ಸದಸ್ಯ ಬಲದ ಸಿಕ್ಕಿಂ ವಿಧಾನಸಭೆಯ ಮತ ಮೌಲ್ಯ 224, 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆ 320, ಅರುಣಾಚಲ ಪ್ರದೇಶದ 60 ಸದಸ್ಯರ ವಿಧಾನಸಭೆ 480, 60 ಸದಸ್ಯ ನಾಗಾಲ್ಯಾಂಡ್ ವಿಧಾನಸಭೆ 540, 60 ಸದಸ್ಯ ಬಲದ ಮೇಘಾಲಯದ ಮತ ಮೌಲ್ಯ 1020, ಮಣಿಪುರ 60 ಸದಸ್ಯರ ಮತ ಮೌಲ್ಯ 1080, ಗೋವಾದ 40 ಸದಸ್ಯರ ಮತಮೌಲ್ಯ 800 ಆಗಿದೆ.

ಜಮ್ಮು ಕಾಶ್ಮೀರವನ್ನು 2019ರ ಆಗಸ್ಟ್‍ನಲ್ಲಿ ವಿಭಜನೆ ಮಾಡಿ, ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿ, ಜಮ್ಮು-ಕಾಶ್ಮೀರವನ್ನು ರಾಜ್ಯವನ್ನಾಗಿ ವಿಂಗಡಿಸಲಾಗಿದೆ. ಜಮ್ಮು ಕಾಶ್ಮೀರ ರಾಜ್ಯಕ್ಕೆ 83 ವಿಧಾನಸಭಾ ಸ್ಥಾನಗಳನ್ನು ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ ವಿಂಗಡನಾ ಆಯೋಗ ಇತ್ತೀಚೆಗೆ ತನ್ನ ಅಂತಿಮ ಆದೇಶ ಪ್ರಕಟಿಸಿದ್ದು, ಅದರಲ್ಲಿ ಹೊಸದಾಗಿ 90 ವಿಧಾನಸಭಾ ಕ್ಷೇತ್ರಗಳನ್ನು ನಿಗದಿ ಮಾಡಲು ಶಿಫಾರಸ್ಸು ಮಾಡಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ಇತ್ಯರ್ಥವಾಗಿ ವಿಧಾನಸಭೆ ಅಸ್ತಿತ್ವಕ್ಕೆ ಬರಲು ಕೆಲ ಸಮಯ ಬೇಕಾಗಬಹುದು ಎಂದು ವರದಿಗಳು ತಿಳಿಸಿವೆ.

Articles You Might Like

Share This Article