ಸರ್ಕಾರ ಜನತೆಯ ಮೇಲೆ ಬೆಲೆ ಏರಿಕೆಯ ಭೀಕರ ಹಲ್ಲೆ ನಡೆಸುತ್ತಿದೆ: ಕಾಂಗ್ರೆಸ್

Spread the love

ಬೆಂಗಳೂರು, ಜೂ.6- ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದ್ದರೂ ಲಾಕ್ ಡೌನ್ ಸಂದರ್ಭದಲ್ಲಿ ನಿರಂತರವಾಗಿ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಜನರ ಮೇಲೆ ಭೀಕರ ಹಲ್ಲೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ. 35 ದಿನಗಳಲ್ಲಿ 18 ಬಾರಿ ದರ ಏರಿಕೆ ಮಾಡಲಾಗಿದೆ.

ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ಜನರಿಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಬಿಸಿ ತಟ್ಟಿಲ್ಲ. ಲಾಕ್ ಡೌನ್ ತೆರವಿನ ನಂತರ ಜನತೆಗೆ ಇದರ ಬಿಸಿ ತಟ್ಟಲಿದೆ. ಆರ್ಥಿಕ ಚಟುವಟಿಕೆಗಳು ಮತ್ತೆ ಸಹಜ ಸ್ಥಿತಿಗೆ ಮರಳಲು ತೈಲ ಬೆಲೆ ಏರಿಕೆಯಿಂದ ತೀವ್ರ ಹಿನ್ನೆಡೆಯಾಗಲಿದೆ. ಜನತೆಯ ಮೇಲೆ ಬೆಲೆ ಏರಿಕೆಯ ಭೀಕರ ಹಲ್ಲೆ ನಡೆಯುತ್ತಿದೆ ಎಂದು ಹೇಳಿದೆ.

ಕರೋನಾ ಸಂಕಷ್ಟ, ಉದ್ಯೋಗ ನಷ್ಟ, ಆರ್ಥಿಕ ಕುಸಿತ, ಅದಾಯವಿಲ್ಲದೆ ಕಂಗಾಲಾಗಿರುವ ಜನತೆಗೆ ಬಿಜೆಪಿ ಪ್ರಜಾ ಪೀಡಕ ಸರ್ಕಾರವಾಗಿ ಕಾಡುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಬದುಕನ್ನು ಸರ್ವನಾಶ ಮಾಡಲು ಮುಂದಾಗಿದೆ. ಈ ಬೆಲೆ ಏರಿಕೆ ಜನರ ಬದುಕಿನ ಮೇಲಷ್ಟೇ ಅಲ್ಲದೆ ದೇಶದ ಆರ್ಥಿಕ ಚಟುವಟಿಕೆಗಳ ಮೇಲೂ ಭೀಕರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಜೊತೆಗೆ ಮೈಸೂರಿನ ಇಬ್ಬರೂ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಅಧಿಕಾರಿಗಳ ವರ್ಗಾವಣೆಯಿಂದ ಕರೋನಾ ನಿರ್ವಹಣೆಗೆ ಹಿನ್ನೆಡೆಯಾಗಲಿದೆ. ಹೊಸ ಅಧಿಕಾರಿಗಳಿಗೆ ಜಿಲ್ಲೆಯ ಚಿತ್ರಣ ಅರಿಯಲು ಸಾಕಷ್ಟು ಸಮಯ ಹಿಡಿಯಲಿದೆ. ಕರೋನಾ ಸಂದರ್ಭದಲ್ಲಿ ಹೊಸ ಅಧಿಕಾರಿಗಳಿಗೂ ಸವಾಲು, ಜನತೆಗೂ ಸಂಕಷ್ಟ. ಈ ಸರ್ಕಾರಕ್ಕೆ ವರ್ಗಾವಣೆಯೊಂದನ್ನು ಬಿಟ್ಟು ನಿಭಾಯಿಸುವ ಬೇರೆ ಯಾವ ಮಾರ್ಗವೂ ತಿಳಿದಿಲ್ಲ ಎಂದು ಲೇವಡಿ ಮಾಡಿದೆ.

Facebook Comments