ಸಂಭಾಲ್, ಮಾ.15- ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ದೇವಸ್ಥಾನದ ಆವರಣದ ಕೊಠಡಿಯಲ್ಲಿ 55 ವರ್ಷದ ಅರ್ಚಕನ ಶವ ಪತ್ತೆಯಾಗಿದ್ದು, ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಚಾಂದೌಸಿ ಕೊಟ್ವಾಲಿ ಪ್ರದೇಶದಲ್ಲಿರುವ ಶಿವ ದೇವಾಲಯದ ಅರ್ಚಕ ರೋಷನ್ ಲಾಲ್ ಸೈನಿ (55) ಅವರ ಮೃತದೇಹ ಕೊಠಡಿಯಲ್ಲಿ ಪತ್ತೆಯಾಗಿದೆ ಎಂದು ಎಸ್ಪಿ ಚಕ್ರೇಶಶ್ ಮಿಶ್ರಾ ತಿಳಿಸಿದ್ದಾರೆ.
ತಲೆಯ ಮೇಲೆ ಭಾರೀ ಕಲ್ಲಿ ಎತ್ತಿ ಹಾಕಿ ಕೊಲೆ ಮಾಡಿರುವ ಕುರುಹುಗಳಿವೆ ಎಂದಿರುವ ಅವರು, ಶ್ವಾನದಳ ಹಾಗೂ ಕಣ್ಗಾವಲು ತಂಡ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದೆ. ಸ್ಥಳದಲ್ಲಿ ಕೆಲವು ತಿನಿಸುಗಳು ಕೂಡ ಪತ್ತೆಯಾಗಿರುವುದರಿಂದ ಕೊಲೆಯಲ್ಲಿ ಪರಿಚಯಸ್ಥರ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಸತತ 3ನೇ ದಿನವೂ ನಡೆಯದ ಸಂಸತ್ ಕಲಾಪ, ಅಮೂಲ್ಯ ಸಮಯ ವ್ಯರ್ಥ
ಈವರೆಗೆ ನಡೆದಿರುವ ತನಿಖೆಯಲ್ಲಿ ಹಳೆ ಜಗಳದ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‍ಪಿ ತಿಳಿಸಿದ್ದಾರೆ.
Priest, found, dead, inside, UP, temple,